ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಸ್ನೇಹ ಸಮತೆ ಮೂರ್ತಿ

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ-

ಸ್ನೇಹ ಸಮತೆ ಮೂರ್ತಿ

ದೈತ್ಯ ಪ್ರತಿಭೆ
ದೇವ ಧೂತ
ಕಿತ್ತು ಹೋಯಿತು
ಕಾಳ ಭೂತ

ಧಗ ಧಗ ಉರಿದಿತ್ತು
ಶತಮಾನದ ಶಾಪ
ಸತ್ಯ ಸಮತೆ ಶಾಂತಿ
ಸಂಘರ್ಷದ ಭೂಪ

ಮಹಾ ನೆಲದ
ಕೆಂಪು ಸೂರ್ಯ
ನ್ಯಾಯ ನೀತಿ ತತ್ವ
ಸಂವಿಧಾನ ಕಾರ್ಯ

ಬುದ್ಧ ಬಸವರ ಹಾದಿಯಲ್ಲಿ
ಹೊರಟ ದಿಟ್ಟ ಯೋಧ
ಹೆಸರಾದರು ಬಾಬಾಸಾಹೇಬ
ದಮ್ಮ ನೀತಿ ಭೋದ

ಮಾತು ಮಿತ
ಕೆಲಸ ಅಬ್ಬರ
ಮೃದು ಮನಸ್ಸಿನ
ದಿವ್ಯ ಮಾರುತ

ಹಾದಿ ಹೆಜ್ಜೆ ಮೈಲಿಗಲ್ಲು
ಕ್ರಾಂತಿ ಕಹಳೆ ಸೂತ್ರವು
ಸಮಪಾಲು ಸಮಬಾಳು
ಸಮಾಜವಾದ ರೀತಿ

ಎಲ್ಲರಲ್ಲಿ ಪ್ರೀತಿ ಹಂಚಿದ
ಸ್ನೇಹ ಮಮತೆ ಮೂರ್ತಿ
ಜಗದಲ್ಲಿ ಮೊಳಗಿದೆ

ಅಂಬೇಡ್ಕರರ ಕೀರ್ತಿ


ಡಾ ಶಶಿಕಾಂತ ಪಟ್ಟಣ ರಾಮದುರ್ಗ

4 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಸ್ನೇಹ ಸಮತೆ ಮೂರ್ತಿ

  1. ಅಂಬೇಡ್ಕರರ ವ್ಯಕ್ತಿತ್ವದ ಅನಾವರಣ. ಸುಂದರವಾದ ಕವಿತೆ ಧನ್ಯವಾದಗಳು ಸರ್

Leave a Reply

Back To Top