ಗಂಗಾಧರ ಅವಟೇರ ಹಾಯ್ಕುಗಳು

ಕಾವ್ಯಸಂಗಾತಿ

ಗಂಗಾಧರ ಅವಟೇರ

ಹಾಯ್ಕುಗಳು


ತುಟಿಯ ತುಂಬಾ
ಸವಿ ಜೇನಿನ ಬನಿ;
ಮುತ್ತು ಮಾರಾಟ.

ಅವಳು ಬಳ್ಳಿ
ಅಂತೆ ಬಳುಕುವಳು;
ಕಾವ್ಯಕನ್ನಿಕೆ.

ಜೀತ ಇದ್ದರೂ.
ಅಪ್ಪನಲ್ಲಿ ಅಕ್ಷರ;
ಕಲಿಸು ಹಠ.

ನಲ್ಲೆಯಾದಳು
ನನ್ನ ಬಾಳಲಿ;ಅಳು
ನುಂಗಿ ನಕ್ಕಳು.

ನಾರಿ ಮಣಿತ
ಕಂಡು ಮಯೂರ ನಾಚಿ;
ನೆಲ ನೋಡಿತು.

ಅವಳು ನಕ್ಳು,
ಬೆಳ್ಳಕ್ಕಿ ಹಿಂಡು ಬೆದರಿ;
ಭಾನತುಂಬ್ಯಾವ.

ಬಸವ ಹುಟ್ದಿ,
ಬೇರೂರಿದ್ದ ನಂಬಿಕೆ;
ಗುಳೇ ಹೋದವು.

ಕೊಳಲು ದನಿ
ಕೇಳಿ;ಮೈಮರೆತಳು.
ನದಿ ಯಮುನೆ.

ಗೋಲ್ಲ ಕೃಷ್ಣನ
ಕೊಳಲ ನಿನಾದಕೆ;
ಜಗವೇ ಮೌನ.
೧೦.
ಗೆಳತಿ ನಿನ್ನ
ಮೌನ ಭಾಷೆಗೆ ನೂರು;
ಭಾವ ಮೂಡಿದೆ.
೧೧.
ಅವಳ ಕಣ್ಣು
ಕುಡಿ ನೋಟಕೆ ಮನ: ;
ಸೋತವು ದುಂಬಿ.
೧೨
ಮನದನ್ನೆಯ
ಕೋಪ ತುಸು ಸಿಡುಕು;
ಹಂಚು ನಕ್ಕಂತೆ!
೧೩.
ಮನಸಿನೊಳು
ಇರುವ ಪ್ರೀತಿ ಸುಖ;
ಮನಗಂಡದ್ದು.!
೧೪.
ರಾಜಕೀಯಾಟ್ದ
ಮಾತು ಚಿತ್ತಿಮಳೆಯ;
ನಾಯಿ ಚಲ್ಲಾಟ.
೧೫.
ಎನ್ನ ನಲ್ಲೆಯ
ರಂಪಾಟ ಕಿವಿಯಲ್ಲಿ;
ಗೋಳಗುಮ್ಮಟ.
೧೬.
ಜಗದ ಮೋಹ
ಕಳಚು;ನಿರ್ಮೋಹದ,
ಬುದ್ದನಾಗುವೆ.!
೧೭.
ನೀ ನುಡುದಂತೆ
ನಡೆ,ಕೂಡಲಸಂಗ;
ಎತ್ತಿಕೊಳ್ಳುವ.
೧೮.
ಬಯಲ ಬಿತ್ತಿ
ಬಯಲನೇ ಬೆಳೆದು;
ಅಲ್ಲಮನಾದ.
೧೯
ಸಿದ್ದನಾದನು
ಮಾಹೆ ಪೊರೆ ಕಳಚಿ;
ಬುದ್ದನಾದಂತೆ.!
೨೦.
ತಲ್ಲಣದಲಿ
ಗಾಯಗೊಂಡಿದೆ ಎದೆ;

ಪ್ರೀತಿ ಬಿಕರಿ.


ಗಂಗಾಧರ ಅವಟೇರ.

One thought on “ಗಂಗಾಧರ ಅವಟೇರ ಹಾಯ್ಕುಗಳು

  1. ಹೈಕುಗಳನ್ನು ಓದಿದೆ, ಹೈಕುಗಳ ಹಾಯಿದೋಣಿಯಲ್ಲಿ ಪಯಣಿಸಿದ ಅನುಭವವಾಯ್ತು. ಸೊಗಸಾಗಿವೆ.

Leave a Reply

Back To Top