ಸುಧಾ ಪಾಟೀಲ್ ಕವಿತೆ ಅರಿವು

ಕಾವ್ಯ ಸಂಗಾತಿ

ಸುಧಾ ಪಾಟೀಲ್

ಅರಿವು

ಪವಿತ್ರ ಆತ್ಮದ
ನಿಜವಾದ ಬೆಳಗಿನ
ವಾಣಿ
ಅನ್ಯೋನ್ಯ ಬಾಂಧವ್ಯದ
ಸತ್ಯದ ಹಂದರದಲ್ಲಿ
ಸತ್ವ ವಿಚಾರಗಳ
ಅನವರತ ಆಲಿಸಿ
ಮೂಡಿತಾಗ ಅರಿವು

ಆಧ್ಯಾತ್ಮದ ನೆಲೆಯಲ್ಲಿ
ಕಟ್ಟಿಕೊಂಡ
ಅಪರೂಪದ ಈ
ಅನುಭವ
ಬೆಲೆಕಟ್ಟಲಾಗದ ನಿಲುವಿನ
ಅರಿವು

ಸಂಕೀರ್ಣತೆಯಿಂದ
ತಿಳಿಯಾದ ತಿಳಿಗೊಳದಲ್ಲಿ
ಪರಿಪೂರ್ಣತೆಯತ್ತ
ಹೊರಳುವ
ಅದಮ್ಯ ಚೈತನ್ಯದ
ಅರಿವು

ಜ್ಞಾನದೀವಿಗೆಯ ಹಚ್ಚಲು
ಪುಣ್ಯದ ಫಲ
ಪಡೆಯಲು
ವಿಶ್ವಾಸದಿಂದ ಮುನ್ನಡೆಯಲು
ಮೂಡಿತು ಅನಂತ
ಕೋಟಿ ದಾರ್ಶನಿಕ
ತತ್ವದ ಅರಿವು

ಒಂದೇ ವಿಚಾರದಲ್ಲಿ
ನಮ್ಮನ್ನು ನಾವು
ಹಿಡಿದಿಟ್ಟುಕೊಳ್ಳುವ
ಕಲೆಯ ಕರಗತ
ಮಾಡಿಕೊಂಡು
ಹೆಜ್ಜೆಯಿಟ್ಟಾಗ ಆಗುವುದು
ವಿಜಯದುಂದುಭಿಯ
ಅರಿವು

ಬೇಕು ಬೇಡಗಳ
ವ್ಯತ್ಯಾಸ ತಿಳಿದಾಗ
ನಮ್ಮದು ಎನ್ನುವ
ಅಭಿಮಾನ ಮೂಡಿದಾಗ
ಸದಾಶಯಗಳನ್ನು
ಹೊತ್ತು ಹೊರಟಾಗ
ಆಗುವುದು ಸಂಪೂರ್ಣ
ಅರಿವು


ಸುಧಾ ಪಾಟೀಲ್

3 thoughts on “ಸುಧಾ ಪಾಟೀಲ್ ಕವಿತೆ ಅರಿವು

  1. ಅರಿವಿನ ಹಂದರವನ್ನು ಅನಾವರಣಗೊಳಿಸಿದ ಕವಿತೆ. ಚೆನ್ನಾಗಿದೆ ಮೇಡಂ ಧನ್ಯವಾದಗಳು

  2. ಅರಿವಿನ ಹಂದರವನ್ನು ಅನಾವರಣಗೊಳಿಸಿದ ಕವಿತೆ ತುಂಬಾ ಚೆನ್ನಾಗಿದೆ ಮೇಡಂ ಧನ್ಯವಾದಗಳು

  3. ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ

    ಸುಶಿ

Leave a Reply

Back To Top