ಸಂಗಾತಿ ವಾರ್ಷಿಕ ವಿಶೇಷಾಂಕ

ಉತ್ತಮ ಎ. ದೊಡ್ಮನಿ

ವರ್ತಮಾನದಲ್ಲಿ ಯುವ ಪೀಳಿಗೆ

ಕೋಮುವಾದ ಕಡೆಗೆ

ಆಕರ್ಷಿತವಾಗಲೂ ಕಾರಣಗಳೇನು ?

ಯಾವುದೇ ಒಂದು ದೇಶ ಇಲ್ಲವೆ ಜನಾಂಗವನ್ನು ಗುಲಾಮಗಿರಿಗೆ ತಳ್ಳಬೇಕಾದರೆ ಅಲ್ಲಿನ  ಶಿಕ್ಷಣ ವ್ಯವಸ್ಥೆಯನ್ನು ಹಾಳ ಮಾಡಬೇಕು ಎನ್ನುವ ಗಾದೆ ನಿಜ ಅನಿಸುತ್ತೆ.
   ಬ್ರಿಟಿಷ ಪೂರ್ವ ಭಾರತದಲ್ಲಿ, ಶಿಕ್ಷಣ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿತ್ತು. ಆದರಿಂದ ಈಡಿ ಒಂದು ಸಮುದಾಯವನ್ನು ಅಕ್ಷರದಿಂದ ಸಾವಿರಾರು ವರ್ಷಗಳವರೆಗೆ ಮೂಲೆ ಗುಂಪು ಮಾಡಿದ್ದು ಎಲ್ಲರಿಗೂ ಗೊತ್ತಿರುವುದೆ. ಅದರಿಂದಾದ ಅನಾಹುತಗಳು ಅಷ್ಟಿಟಲ್ಲ, ಈಡಿ ಮನುಕುಲವೆ  ಗುಲಾಮಗಿರಿ, ಮೂಢನಂಬಿಕೆ, ನಿರುದ್ಯೋಗ, ಅನಕ್ಷರತೆ, ಲೆಕ್ಕವಿಲ್ಲದಷ್ಟು ತುಂಬಿಕೊಂಡಿತ್ತು. ಹೀಗಾಗಿಯೆ ಈ ನೆಲ ಗುಲಾಮಗಿರಿಗೆ ಒಳಗಾಯಿತು.
     ಓದು-ಬರೆಹ ಬಂದ ಕೂಡ್ಲೆ! ಅವರನೆಲ್ಲ ಅಕ್ಷರಸ್ಥರೆಂದು ಅನ್ನಲ್ಲು ಸಾಧ್ಯಾನಾ?  ಎನ್ನುವ ಪ್ರಶ್ನೆ ಮೂಡಿದಾಗ ಅದರ ಅರ್ಥ ತಪ್ಪಾದಿತ್ತು. ಸಾಮಾಜಿಕ ಕಾಳಜಿ, ಮನುಷ್ಯ ಪ್ರೇಮ, ಸರಿ-ತಪ್ಪುಗಳ ಗುರುತಿಸುವಿಕೆಯಲ್ಲಿ ವಿಫಲವಾದರೆ?  ಎಷ್ಟೇ? ಓದು-ಬರೆಹ ಬಂದರು ಪ್ರಯೋಜನವಿಲ್ಲ.
        ಈಗಿನ ಯುವ ಸಮುದಾಯದಲ್ಲಿ ಇದೆಲ್ಲ! ಎದ್ದು ಕಾಣುತಿದೆ. ಅರ್ಧಂಬರ್ಧ ಶಿಕ್ಷಣ. ವ್ಯಾಟ್ಸಪ್, ಫೇಸ್ ಬುಕ್, ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ಬರುವ ಕೊಟೆಶನ್ ಗಳೆ ಅವರಿಗೆ ಅಂತಿಮ ಷರಾ. ಇವೆಲ್ಲಾ ನಂಬಿ ಹಾಳಾಗುತಿರುವದು ಖೇದಕರ ಸಂಗತಿ.


     ಜಾಲತಾಣಗಳ ಬಳಕೆ ಹೇಗೆ? ಏಕೆ? ಮಾಡಬೇಕು ಅನ್ನುವುದರ ಅರಿವು ಇಲ್ಲದೆ ಇರುವುದು. ಅದರಲ್ಲಿ ಬರುವ ಕೊಟೆಶನ್ ಗಳ ಸತ್ಯ-ಸತ್ಯತೇಯನ್ನು ಓದಿ, ಪರಮಾರ್ಶೆ ಮಾಡುವ ಆಸಕ್ತಿ ಇಲ್ಲ. ತಾಳ್ಮೆಯಂತೂ ಮೊದಲೇ ಇಲ್ಲ. ಬರೆ ಮೊಂಡು ವಾದ, ತಾವೇ ಹೇಳುದು ಸತ್ಯ ಅನ್ನುವುದು. ಹೇಳುಗನಿಗೆ ಕೇಳುವ ವ್ಯವಧಾನ ಇರಬೇಕು. ಅದರಲ್ಲಿ ಬರುವದೆಲ್ಲ ಸತ್ಯ ಎಂದು ತಿಳಿದು ಭಾವದ್ವೇಗಕ್ಕೆ ಒಳಗಾಗಿ, ಕೋಮುವಾದದ ಕಡೆ ಮುಖ ಮಾಡುತ್ತಿದ್ದಾರೆ. ಇದರಿಂದ ಸಮಾಜದಲ್ಲಿನ ನೆಮ್ಮದಿ ಕೆಡುಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಅಂತರ ಜಾಲದ ದುರ್ಬಳಕೆ. ಒಳ್ಳೆದುಕಿಂತ ಹೆಚ್ಚಾಗಿ ಕೆಟ್ಟದಕೆ ಬಳಕೆ ಮಾಡ್ತಾ ಇರೋದು.
       ಆಲ್ ಮೋಸ್ಟ್ ಆಲ್ ಈ ಕೋಮುವಾದಕ್ಕೆ ಬಲಿ ಆಗುತಿರುವರೆಲ್ಲ ಯುವಕರೆ ಅನ್ನುವದು ಕಟು ಸತ್ಯ. ಅದರಲ್ಲಿ ಮುಖ್ಯವಾಗಿ ಕೆಳ ವರ್ಗದವುರು, ಬಡವರೆ ಅಧಿಕ. ಇವರ ಅಪ್ಪ-ಅಮ್ಮ ಬಿಡು, ತಲಾ-ತಲಾಂತರದಿಂದ ಇವರ ಮನೆತನ ಶಾಲೆ  ಮುಖ ಕೂಡಾ ನೋಡಿರುವುದಿಲ್ಲ. ( ನೋಡಲು ಬಿಟ್ಟಿರುವುದಿಲ್ಲ ) ಇವರೆ ಶಾಲೆಯ ಮೆಟ್ಟಿಲು ಹತ್ತಿದ ಮೊದಲ ತಲೆಮಾರು. ತಮ್ಮ ಮನೆತನದ ಇತಿಹಾಸ ಕೂಡಾ ಗೊತ್ತಿರುವುದಿಲ್ಲ, ಏಕೆ? ಹೇಗೆ? ಅನ್ನುವ ವಿಚಾರ ಮಾಡುವ ಶಕ್ತಿ ಇಲ್ಲ. ಇಂಥವರನ್ನೆ ಗುರಿಯಾಗಿಸಿಕೊಂಡು ಜಾತಿ-ಧರ್ಮವನ್ನು ತಲೆಯಲ್ಲಿ ತುಂಬಿ “ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುತಿರುವರು” ತಲೆ ಹಿಡುಕರು.
        ಪ್ರಶ್ನಿಸುವ ಧೈರ್ಯವನ್ನೆ ಕಳೆದು ಕೊಂಡಿರುವುದು ಅದರ ಜೊತೆಗೆ ವೈಚಾರಿಕ ಮನೋಭಾವ ಬೆಳೆಸಿಕೊಳ್ಳದೆ ಇರುವದು. ತಮಗೆ ಇಷ್ಟವಾದ ವ್ಯಕ್ತಿಯೋ ಇಲ್ಲ ಪಕ್ಷ, ಸಂಘ, ಸಂಘಟನೆಗಳು ಹೇಳಿದ್ರೆ! ಸಾಕು, ಅದೇ ಪರಮ ಸತ್ಯ, ವೇದ ವ್ಯಾಖ್ಯಾವಾಗಿ ನಂಬಿ, ತಪ್ಪದೆ ಪ್ರಚಾರ ಪಡಿಸುತ್ತಾರೆ. ಅದರ ಸಾಧಕ-ಬಾಧಕಗಳನ್ನು, ಓರೆ-ಕೊರೆಗೆ ಹಚ್ಚದೆ ಸಮಾಜ, ವ್ಯಕ್ತಿ  ಮೇಲೆ ಪ್ರಯೋಗ ಮಾಡುತ್ತಿರುವದು ದುರ್ದೈವದ ಸಂಗತಿ.
    ಆಗ್ಲೆ ಹೇಳಿದಂತೆ ಕೋಮುವಾದಕೆ ಬಲಿಯಾಗುತ್ತಿರುವುದು ತಳ ಸಮುದಾಯದ, ಬಡ ಯುವಕರೆ ಹೊರತು ಮತ್ಯಾರು ಅಲ್ಲ.  ಉಳ್ಳವರು ಮತ್ತು ಧರ್ಮದ ಬಗ್ಗೆ ಉದ್ದುದ ಭಾಷಣ ಬಿಗುವ ಧರ್ಮದ ಗುತ್ತಗೆದಾರರ ಮಕ್ಕಳು ಯಾರು ಇದರಲ್ಲಿ ಭಾಗಿ ಆಗೋದಿಲ್ಲ. ಅವುರು ಈ ಧರ್ಮದ ದಂಗಲದಲ್ಲಿ ಬೀಳೋದೇ ಇಲ್ಲ. ಅವುರಿಗೆ ಇದು ಯಾವುದೂ ಬೇಕೂ ಇಲ್ಲ. ಅವುರಿಗೆನಿದ್ದರು ತಮ್ಮ ಭವಿಷ್ಯದ ಚಿಂತೆ ಅಷ್ಟೆ?
   ಅಕ್ಷರ ಮತ್ತು ಅರಿವಿನ ಕೊರತೆಯಿಂದಾಗಿ ಯುವಕರು ಕೋಮುವಾದದ ಕಡೆ ತಿರುಗುತಿದ್ದಾರೆ. ಇನ್ನೊಂದು ತಮಾಷೆ ವಿಷಯ,  ಸಾಹಿತಿಗಳ, ಇತಿಹಾಸ ತಜ್ಞರ, ವೈಚಾರಿಕ ಪ್ರಜ್ಞೆಯುಳ್ಳವರ ಬರಹಕ್ಕೆ ಬೇಕಾ ಬಿಟ್ಟಿ ಕಮೆಂಟ್ ಮಾಡೋದು, ಇತಿಹಾಸದ ಅಥವ ಆ ಬರಹದ  ಗಂಧ ಗಾಳಿಯು ಗೊತ್ತೂ ಇರೋದಿಲ್ಲ.
        ಅಂದ ಭಕ್ತಿಯಲ್ಲಿ ಮುಳುಗಿ ಬಿಟ್ಟಿದ್ದಾರೆ. ತಾವೆ ಈ ಭೂಮಿ ಮೇಲೆ ಬದಲಾವಣೆ ಮಾಡಲು ಬಂದಿದ್ದು, ಧರ್ಮ ರಕ್ಷಕರು ಎನ್ನುವ  ಭ್ರಮೆಯಲ್ಲಿ ಕಾಲ ಹರಣ ಮಾಡುತ್ತಿರುವದು. ತಮ್ಮಿಂದಲೆ ಧರ್ಮ ರಕ್ಷಣೆ ಸಾಧ್ಯ ಎನ್ನುವ ಹುಸಿ ಭರವಸೆಯಲ್ಲಿ ತೆಲುತಿದ್ದಾರೆ. ಪ್ರೀತಿ-ಪ್ರೇಮ, ಸಂಬಂಧಗಳ ನಡುವೆ ಎತ್ತಿ ಕಟ್ಟೋದು, ಕಲಹಗಳಿಗೆ  ಮೂಲ ಕಾರಣಿ ಕೃತರಾಗುತಿದ್ದಾರೆ.
       ಈ ವಯಸ್ಸೆ ಹಾಗೇನೆ? ಪ್ರೀತಿ-ಪ್ರೇಮ ಅಂತ ಅದರ ಹಿಂದೆ ಬಿದ್ದು.ಶಾಲಾ-ಕಾಲೇಜ್  ಬದಕನ್ನು ಮರೆತ್ತು, ಅರ್ಧಕೆ ಶಿಕ್ಷಣ ಬಿಟ್ಟವರಿಗೆ ಲೆಕ್ಕವಿಲ್ಲ. ಹಿಂತವರನ್ನೆ ಆಯ್ಕೆ ಮಾಡಿಕೊಂಡು ಅವರಿಗೊಂದಿಷ್ಟು ಗುಂಡು-ತುಂಡು-ಖರ್ಚಿಗೆ ಕಾಸು ಕೊಟ್ಟರೆ ಸಾಕು. ಆ ಶಿಕ್ಷಣದ ಕೊರತೆಯಿಂದ ಜಾತಿ-ಧರ್ಮದ ನಶೆ ತಲೆಯಲ್ಲಿ ತುಂಬಿಕೊಂಡು, ವಿಚಾರ ಶಕ್ತಿಗೆ ಬೀಗ ಹಾಕಿ ಬದಕುತಿರುವ ಯುವ ಶಕ್ತಿ. ಮಾನಸಿಕ ರೋಗದಿಂದ ಬಳತಿರುವರು. ಇವರ ಜೊತೆಗೆ ಈ ಕೋಮುವಾದದಲ್ಲಿ ಅಲ್ಲಲ್ಲಿ ನೌಕರಸ್ಥರು ಕೂಡಾ ವಾಲುತಿರುವದು ನೋಡಿದರೆ ಬೇಸರವಾಗುತ್ತದೆ.
   ಇತಿಹಾಸದ ಅರಿವಿನ ಜೊತೆಗೆ, ವರ್ತಮಾನದ ತಲ್ಲಣಗಳಿಗೆ ಸ್ಪಂದನೆ ಮಾಡದು ಬಿಟ್ಟು, ಮನಸಿನ ತುಂಬಾ ದ್ವೇಷವನ್ನು ತುಂಬಿಕೊಂಡು ತಿರುಗಿತಿದ್ದಾರೆ. ಕೋಮುವಾದದ ಗಲಾಟೆಯಲ್ಲಿ ಸಿಕ್ಕಿ, ಜೈಲು ಪಾಲಾಗಿ ಒದ್ದಾಡಿದು ಇದೆ. ಹೊಲ-ಮನೆ ಕಳೆದುಕೊಂಡು ಜೈಲು ಸೇರಿದಾಗ ಯಾರು ಇವರನ್ನು ಮೂಸಿ ಸಹ ನೋಡೋದಿಲ್ಲ. ಇಂಥಹ ಹಲವು ಉದಾರಣೆಗಳು ಇವೆ. ಉಂಡಿ-ತಿಂದು ಜೀವನದ ಆನಂದವನ್ನು ಸವಿಯಬೇಕಾದ ವಯಸ್ಸಿನಲ್ಲಿ ಧರ್ಮದ ಗುಂಗಿನಲ್ಲಿ ಇಡಿ ತಮ್ಮ ಬದಕನೆ ನಾಶ ಮಾಡಿಕೊಳ್ಳುತ್ತಿರುವುದು ನೋಡಿದಾಗ ಮನಸು ಭಾರವಾಗುತ್ತೆ. ಎತ್ತ ಸಾಗುತ್ತಿದೆ ಈ ಯುವ ಸಮುದಾಯ ಎಂದು.
   ಅಟ್ಲೀಸ್ಟ್ ತಮ್ಮ ಮುಂದಿನ ಬದುಕಿನ ಬಗ್ಗೆ ಯಾದರೂ ಕಿಂಚಿತ್ತು ಕಾಳಜಿ ಇಲ್ಲ. ಅಪ್ಪ-ಅಮ್ಮನ ಕಷ್ಟ, ನೋವುಗಳು ಏನು ಅಂತನು ಕೇಳುವ ಪುರಸೊತ್ತಿಲ್ಲ. ತಾವು ಬೆಳೆದು ಬಂದ ಬದುಕಿನ ಬಗ್ಗೆ ಅರಿವು ಇಲ್ಲ. ತಮಗೆ ಪ್ರಚೋದನೆ ಪಡುಸ್ತಿರುವ ವ್ಯಕ್ತಿಯ ಮನೆತನ ಅವರ ಅಂತಸ್ಥು, ಅವರ ಮಕ್ಕಳು ಕೂಡಾ ಇದರಲ್ಲಿ ಇದ್ದರೆಯೇ? ಅಥವ ಇಲ್ಲ ಎನ್ನುವದಾದರು ತಿಳಿದುಕೊಂಡರೆ ಈ ಮತೀಯ ಭಾವನೆಯಿಂದ ಹೊರಗೆ ಬರಬಹುದು.
          ಕೋಮುವಾದ ಬೇಲಿಯನ್ನು ದಾಟಿ ಬಂದು ಪ್ರೀತಿಯ ದೀಪ ಹಚ್ಚುವುದು ಕಲಿಯಬೇಕಿದೆ. ದ್ವೇಷದಿಂದ ಏನು ಸಾಧಿಸಲಾಗದು. ದ್ವೇಷಿಸಲು ತುಂಬಾ ಸಮಯ, ಶಕ್ತಿ ಬೇಕು, ಪ್ರೀತಿಸಲು ಮನಸು ಸಾಕು. ಪ್ರೀತಿಯ ಬೀಜ, ಮನೆ -ಮನದಲ್ಲಿ ಹರಡುವುದು ಅತಿ ಜರೂರಾಗಿದೆ. “ದ್ವೇಷ, ದ್ವೇಷವನ್ನು ಹರಡುತ್ತದೆ, ಪ್ರೀತಿ-ಪ್ರೀತಿಸುವುದು ಕಲಿಸುತ್ತದೆ”. ಜೀವನ ಧೀರ್ಘವಿಲ್ಲ, ಅಲ್ಪ ಆಯುಷಿಗಳೆ ಇಲ್ಲೆಲ್ಲಾ. ಅದಕ್ಕಾಗಿ ಇರೋತನ ಸುತ್ತಲೂ ಪ್ರೀತಿಯ ಕಂಪು ಸುರಿಸಿ, ನೆಮ್ಮದಿ ನಾಡ ಕಟ್ಟಿ, ಬದಕು ಬದಕಾಗಿಸಿ.


ಉತ್ತಮ ಎ. ದೊಡ್ಮನಿ

Leave a Reply

Back To Top