ಸಂಗಾತಿ ವಾರ್ಷಿಕ ವಿಶೇಷಾಂಕ

ಸಾಮಾಜಿಕ ಜಾಲತಾಣದಿಂದ

ಬದಲಾದ ಮಹಿಳೆಯರ

ದೃಷ್ಟಿಕೋನಗಳು.

ಜ್ಯೋತಿ , ಡಿ , ಬೊಮ್ಮಾ

ಅಧುನಿಕತೆಗೆ ಒಳಪಡುತ್ತಿರುವ ಮನುಕುಲ ಹೊಸ ಹೊಸ ತಂತ್ರಜ್ಞಾನ ದ ಬಳಕೆಯಿಂದ ಒದಗುವ ಅನುಕೂಲ ಮತ್ತು ಅನಾನೂಕೂಲಗಳನ್ನು ಅನುಭವಿಸುವ ಸಂದರ್ಭಗಳೊಂದಿಗೆ ರಾಜಿಯಾಗಿ ಬದುಕುತ್ತಿದೆ. ಒಂದು ಅನೂಕೂಲ ಸೃಷ್ಟಿಸುವ ತಂತ್ರಜ್ಞಾನ ತನ್ನೊಂದಿಗೆ ಕೆಲವು ಅನಾನುಕೂಲಗಳನ್ನು ಸೃಷ್ಟಸುತ್ತದೆ. ಪರಿಣಾಮದ ಅರಿವಿದ್ದೂ ನಾವೆಲ್ಲರೂ ಹೊಸತನಕ್ಕೆ ಹೋಸ ತಂತ್ರಜ್ಞಾನ ಗಳಿಗೆ ಸದಾ ಹಾತೊರಿಯುತ್ತೆವೆ. ಜೀವನದಲ್ಲಿ ಅಳವಡಿಸಿಕೊಳ್ಳಲು ಹಂಬಲಿಸುತ್ತೆವೆ.

ಸಾಮಾಜಿಕ ಜಾಲತಾಣ ಪ್ರತಿಯೊಬ್ಬರ ಜೀವನದಲ್ಲೂ ಹಾಸುಹೊಕ್ಕಾಗಿದೆ.ಇದರಿಂದ ಎಷ್ಟು ಉಪಯೋಗವಾಗುತ್ತಿದೆಯೋ ಅದಕ್ಕಿಂತ ಒಂದು ಪಟ್ಟು ಹೆಚ್ಚೆ ಅನಾನುಕೂಲ ಕರವೂ ಆಗಿದೆ.

ಸಾಮಾಜಿಕ ಜಾಲತಾಣ ಯುವಜನತೆ ಮತ್ತು ಮಕ್ಕಳಿಗೆ ವ್ಯಸನಿಗಳನ್ನಾಗಿ ಮಾಡಿದಂತೆ ಗೃಹಿಯರನ್ನು ವ್ಯಸನಿಗಳನ್ನಾಗಿಸಿದೆ.

ಮನೆಕೆಲಸದ ಕಡೆ ಗಂಡ ಮಕ್ಕಳೆಡೆಗೆ ಗಮನ ಕೊಡದಂತೆ ತನ್ನ ಜಾಲದಲ್ಲಿ ಬಂಧಿಯಾಗಿಸಿದೆ ಈ ಸಾಮಾಜಿಕ ಜಾಲತಾಣ.

ಧಾವಂತದಲ್ಲಿ ಮನೆಗೆಲಸ ಮುಗಿಸಿ ಗಂಡ ಮಕ್ಕಳನ್ನು ಕಳಿಸಿ ಯಾವಾಗ ಪೋನ್ ಕೈಯಲ್ಲಿ ಹಿಡಿಯುತ್ತೆವೋ ಎಂಬ ವ್ಯಸನಕ್ಕೊಳಗಾಗುತಿದ್ದಾರೆ ಗೃಹಿಣಿಯರು. ಪೋನ್ ನ್ ಸ್ಕ್ರೀನ್ ಸ್ಕ್ರೊಲ್ ಮಾಡುತ್ತ ಕುಳಿತರೆ ಆಯಿತು ಯಾವ ಪರಿವಿಲ್ಲದಂತೆ ಮೊಬೈಲ್ ನಲ್ಲಿ ಮುಳಗಿ ಬಿಡುತ್ತಾರೆ.
ನೋಡುವದೇನು..ಅದೇ ಅಡುಗೆ , ಅಲಂಕಾರ , ಆನ್ಲೈನ್ ಶಾಪಿಂಗ್ ಇಂಥವೆ. ಆರ್ಡರ್ ಮಾಡುವದು , ನೋಡಿ ಇಷ್ಟವಾಗದಿದ್ದರೆ ತಿರುಗಿ ಕಳಿಸುವದು ಇದು ಒಂದು ಹವ್ಯಾಸವಾಗಿ ಪರಿಣಮಿಸುತ್ತಿದೆ. ಮೊದಲೆಲ್ಲ ಗೃಹಿಣಿಯರಿಗಿ ಹೋರಗೆ ಹೋಗಿ ಅಂಗಡಿಗಳಲ್ಲಿ ಖರಿದಿಸುವದು ಅತಿ ಆಸಕ್ತಿ ವಿಷಯವಾಗಿತ್ತು. ಈಗ ಬರಿ ಪೋನ್ ನಲ್ಲೆ ಮುಳುಗಿರುವಾಗ ಹೊರಗೆ ಹೋಗಲು ಸಮಯವೆಲ್ಲಿದೆ. ಟಿವಿ ನೋಡಲು ಮನೆ ಮಂದಿ ಎಲ್ಲಾ ಒಟ್ಟಿಗೆ ಹಾಲ್ ನಲ್ಲಿ ಕೂಡೂವ ಪರಿಪಾಠ ವೂ ಈ ಸಾಮಾಜಿಕ ಜಾಲತಾಣ ಕಸಿದುಕೊಂಡು ಬಿಟ್ಟಿದೆ. ಟಿ ವಿ ನೋಡುವ ಆಸಕ್ತಿ ಯು ಕಡಿಮೆಯಾಗಿದೆ. ಎಲ್ಲರೂ ಒಂದೊಂದು ಪೋನ್ ಕೈಯಲ್ಲಿ ಹಿಡಿದುಕೊಂಡು ತಮ್ಮ ಲೋಕದಲ್ಲೆ ಮುಳುಗಿರುವವರನ್ನು ಕಾಣಬಹುದು.

ಸ್ಕೂಲ್ ಗಳು ಚಿಕ್ಕ ಮಕ್ಕಳ ಕೈಗೆ ಮೊಬೈಲ್ ಕೊಟ್ಟ ಮೇಲೆ ಅದನ್ನು ನಿಯಂತ್ರಿಸುವದು ಅವರ ತಾಯಂದಿರಿಗೂ ದೊಡ್ಡ ಸಮಸ್ಯೆ ಆಗಿದೆ. ಕಳೆದ ಮೂರು ವರ್ಷಗಳಲ್ಲಿ ಮಕ್ಕಳು ಮಹಿಳೆಯರು ಅತೀ ಹೆಚ್ಚು ಸಾಮಾಜಿಕ ಜಾಲತಾಣದ ಬಳಕೆದಾರರಾಗಿದ್ದಾರೆ.

ಪುರುಷರಿಗಿಂತ ಮಹಿಳೆಯರು ಹೆಚ್ಚು ಸಂಘ ಜೀವಿಗಳು.ಅವರು ಸದಾ ಸಮೂಹದಲ್ಲಿ ಇರಲು ಬಯಸುತ್ತಾರೆ ಯಾವಾಗ ಈ ಕೋವಿಡ್ ಜನರನ್ನು ಬೆರ್ಪಡಿಸಿ ಒಂಟಿ ಮಾಡಿತೋ ಆಗಿನಿಂದಲೂ ಮೋಬೈಲ್ ಎಲ್ಲರಿಗೂ ಅತ್ಯಂತ ಆಪ್ತವಾಗತೊಡಗಿದವು. ಯಾರ ಮನೆಗೂ ಹೋಗದೆ ಯಾರೊಂದಿಗೂ ಬೆರೆಯದೆ ಮೊಬೈಲ್ ನೊಂದಿಗೆ ತಮ್ಮದೇ ಒಂದು ಪ್ರತ್ಯೇಕ ಲೋಕ ಸೃಷ್ಟಿಕೊಂಡು ತಮಗರಿವಿಲ್ಲದಂತೆ ಅದರಲ್ಲಿ ಬಂಧಿಯಾದರು.

ಸಾಮಾಜಿಕ ಜಾಲತಾಣ ಮಹಿಳೆಯರ ಮೇಲೆ ಋಣಾತ್ಮಕ ಪರಿಣಾಮ ಬೀರಿದ್ದೆ ಹೆಚ್ಚು.ಉದ್ಯೋಗಸ್ಥ ಮಹಿಳೆಯರು ಇದಕ್ಕೆ ಹೊರತಾಗಿಲ್ಲ.ಮೊಬೈಲ್ ನ್ ಹೆಚ್ಚು ಬಳಕೆ ಮಹಿಳೆಯರನ್ನು ಅಂತರ್ಮುಖಿಯಾಗಿಸುತ್ತಿದೆ. ಸುಳ್ಳು ಹೇಳುವದು ಕಲಿಸಿದೆ. ಬೇರೆಯವರ ಮೇಲಿನ ಕೋಪ ದ್ವೇಷ ನುಡಿಗಟ್ಟಿನ ಮೂಲಕ ಪ್ರಸಾರ ಮಾಡಿ ಸಂಬಂಧಪಟ್ಟವರೊಂದಿಗೆ ಮತ್ತಷ್ಟು ವೈಮನಸ್ಸು ಹೊಂದಲು ಮೊಬೈಲ್ ಸಹಕರಿಸುತ್ತದೆ. ಮತ್ತೊಬ್ಬರ ದೌರ್ಬಲ್ಯ ಎತ್ತಿ ತೋರಿಸಲು , ಮಾತಿನ ಬಾಣದಲ್ಲಿ ತಿವಿಯಲು , ಮತ್ತೊಬ್ಬರ ಬಗ್ಗೆ ತಮಗಿರುವ ಅಸಹನೆ ಹೊರಹಾಕಲು ಸಾಮಾಜಿಕ ಜಾಲತಾಣದಲ್ಲಿ ಬರುವ ಕೋಟ್ಸ ಗಳನ್ನು ಬಳಸಿಕೊಂಡು ತಮ್ಮ ಸ್ಟೇಟಸ್ ಮೂಲಕ ಅವರಿಗೆ ತಲುಪಿಸಿ ವಿಕೃತ ಆನಂದ ಪಡೆಯುತ್ತಾರೆ. ಇದು ಒಂದು ರೀತಿ ಮನೋವ್ಯಾಧಿಗೆ ಕಾರಣವಾಗುತ್ತದೆ.

ಜಾಲತಾಣದ ಬಳಕೆ ಸಂಭಂಧ ಬೆಸೆಯುವದಕ್ಕಿಂತ ದೂರ ಮಾಡಿದ್ದೆ ಹೆಚ್ಚು.ಒಬ್ಬರ ಮನೆಗೊಬ್ಬರು ಮುಕ್ತವಾಗಿ ಹೋಗುವಂತಿಲ್ಲ , ಪೋನ್ ಮಾಡಿಯೇ ಹೋಗಬೇಕು .ಒಂದೊಮ್ಮೆ ಪೋನ್ ಮಾಡಿದರು ಸುಳ್ಳುಗಳು ಸರಾಗವಾಗಿ ಬರುತ್ತವೆ. ಇಲ್ಲಿ ಆತ್ಮಸಾಕ್ಷಿಯ ಅರಿವು ಮಾಯ ವಾಗಿದೆ. ಎಕೆಂದರೆ ಜಾಲತಾಣ ಅದನ್ನು ಕಸಿದುಕೊಂಡಿದೆ.

ಜಾಲತಾಣದಲ್ಲಿ ಬರುವ ಸುದ್ದಿಗಳನ್ನು ನಿಜವೆಂದು ನಂಬುವರು ಬಹುಪಾಲು ಮಹಿಳಯರು
ದೇವರು ಧರ್ಮದ ಬಗ್ಗೆ ಪ್ರಸಾರವಾಗುವ ವಿಷಯಗಳಿಂದ ಪ್ರಚೋದನೆಗೊಂಡು ಅನುಸರಿಸಿ ದುಡ್ಡು ಮತ್ತು ನೆಮ್ಮದಿ ಎರಡನ್ನೂ ಕಳೆದುಕೊಂಡವರಿದ್ದಾರೆ.ಎಷ್ಟೋ ಮುಗ್ದ ಮಹಿಳೆಯರು ಜಾಲತಾಣದಲ್ಲಿ ಪರಿಚಯರಾದವರೊಂದಿಗೆ ಸಂಬಂಧ ಬೆಳೆಸಿ ಜೀವನ ನರಕವಾಗಿಸಿಕೊಂಡವರಿದ್ದಾರೆ. ವಂಚನೆ ಮತ್ತು ಮೋಸಗಳಿಗೆ ಸುಲಭವಾಗಿ ಮಹಿಳೆಯನ್ನು ವಂಚಿಸಿದ ಪ್ರಕರಣಗಳು ಇವೆ. ಯಾವದೇ ಒಂದು ದೌರ್ಬಲ್ಯ ಕ್ಕೆ ಒಳಗಾಗಿ ಮಾಡಿದ್ದ ತಪ್ಪನ್ನು ಸೆರೆಹಿಡಿದು ಬ್ಲ್ಯಾಕ್ ಮೇಲ್ ಮಾಡಿದ ಅದೇಷ್ಟು ಉದಾಹರಣೆಗೆ ಗಳನ್ನು ನಾವು ನೋಡಿಲ್ಲ.

ಬಹುತೇಕ ಸಾಮಾಜಿಕ ಜಾಲತಾಣದ ವ್ಯಸನಿಗಳು ಆಲಸಿಗಳಾಗುತ್ತಾರೆ.ಒಂದೊಮ್ಮೆ ಅತ್ಯಂತ ಕ್ರಿಯಾಶೀಲ ವಾದ ಗೃಹಿಣಿ ಮೊಬೈಲ್ ವ್ಯಸನದಿಂದ ಎಲ್ಲದರಲ್ಲಿ ಆಸಕ್ತಿ ಕಳೆದುಕೊಂಡು ಕೇವಲ ಮೊಬೈಲ್ ನೋಡುತ್ತ ಕುಳಿತುಬಿಡಬೇಕೆಂಬ ಆಲಸ್ಯಕ್ಕೆ ಒಳಪಡುತ್ತಾಳೆ.ಮನೆಯವರ ನಿರಾದರ , ದಬ್ಬಾಳಿಕೆ , ಕಿಳರಿಮೆ ಇವೆಲ್ಲ ಅವಳ ಮೇಲೆ ಒತ್ತಡ ಸೃಷ್ಡಿಸುತ್ತಿರುವಾಗ ಪೋನ್ ಒಂದೇ ಅವಳ ಆಪ್ತ ಎಂಬ ಭಾವನೆಯಿಂದ ಜಾಲತಾಣದ ವ್ಯಸನಿಗಳಾಗುವ ಗೃಹಿಣಿಯರಿಗೆ ಇದೊಂದು ಶಾಪವೇ ಆಗಿದೆ.

ಪೋನ್ ನಲ್ಲಿ ಅತಿ ಮಾತಾಡುವವರು ಮಹಿಳೆಯರು.ಅದರಲ್ಲೂ ಗೃಹಿಣಿಯರು ಹೆಚ್ಚು.
ಅವರಿವರೊಂದಿಗೆ ಮಾತಾಡಿ ಇಲ್ಲದ ಸಮಸ್ಯೆ ಮೈಮೇಲೆ ಎಳೆದುಕೊಂಡು ತೊಂದರೆ ಮಾಡಿಕೊಳ್ಳುತ್ತಾರೆ.ಅತೀ ಮಾತಾಡುವದು ತೊಂದರೆಗೆ ಅಹ್ವಾನ ಕೊಟ್ಟಂತೆ. ಮಾತಿನಿಂದಾಗುವ ಪ್ರಯೋಜನ ವಾದರು ಏನು. ವೃಥಾ ಕಾಲಹರಣ ಅಷ್ಟೆ. ಅಡುಗೆ ಮಾಡುವಾಗ , ಪಾತ್ರೆ ತೊಳಿಯುವಾಗ ,ಬಟ್ಟೆ ಒಗಿಯುವಾಗ ಸದಾ ಕಿವಿಗೊಂದು ಮೊಬೈಲ್ ಅಂಟಿಸಿಕೊಂಡು ಮಾತಿನಲ್ಲಿ ಮಗ್ನರಾದವರನ್ನು ನೋಡಬೇಕು , ಒಬ್ಬೊಬ್ಬರಂತೂ ಪೋನ್ ನಲ್ಲಿ ಮಾತಾಡಿ ಮಾತಾಡಿ ಮನೆಗೆಲಸವೆಲ್ಲ ಅಸ್ತವ್ಯಸ್ತವಾಗಿ ಯಾವ ಕೆಲಸವಾಗದೆ ಒಮ್ಮೆಗೆ ಒತ್ತಡಕ್ಕೊಳಗಾಗುತ್ತಾರೆ.ಮಾತು ಮನೆ ಕೆಡಿಸಿತು ಎಂಬ ಗಾದೆ ಮಾತೆ ಇದೆ.ನಮ್ಮ ಮಹಿಳೆಯರಿಗೆ ಮೊಬೈಲ್ ಬಂದ ಮೇಲೆ ಒಟ್ಟಿಗೆ ಕುಳಿತು ಹರಟೆ ಹೊಡೆಯುವ ಆಸಕ್ತಿ ಕಡಿಮೆಯಾಗಿದೆ.ಆದರೆ ಒಟ್ಟಿಗೆ ಕಾನ್ಫರೆನ್ಸ್ ಕಾಲ್ ನಲ್ಲಿ ಮೂರು ನಾಲ್ಕು ಜನ ಸೇರಿ ತಮ್ಮ ತಮ್ಮ ಮನೆಯಲ್ಲಿ ಕುಳಿತು ಗಂಟೆಗಟ್ಟಲೆ ಮಾತಾಡುತ್ತಾರೆ.ಮುಂದೊಮ್ಮೆ ಎದುರು ಬದುರು ಕುಳಿತಾಗ ಮಾತೆ ಬರಲ್ವೆನೋ , ಬೇಕಾದರೆ ನೋಡಿ ,‌ಪೋನ್ ನಲ್ಲಿ ಎಷ್ಟು ‌ಮಾತಾಡ್ತೆವೋ ಮುಖಾಮುಖಿಯಾದಾಗ ಅಷ್ಟೊಂದು ಮಾತಾಡಲ್ಲ , ಮುಖ ನೋಡದೆ ಮಾತಾಡುವ ಹವ್ಯಾಸಕ್ಕೆ ನಾವು ಒಳಪಡುತಿದ್ದೆವೆ.

ಧನಾತ್ಮಕ ಮತ್ತು ಋಣಾತ್ಮಕ ಅಂಶಗಳು ಪ್ರತಿ ತಂತ್ರಜ್ಞಾನ ದಲ್ಲಿ ಇರುವಂತೆ ಸಾಮಾಜಿಕ ಜಾಲತಾಣದ ಬಳಕೆಯಲ್ಲೂ ಇವೆ. ಆದರೆ ಅಮಾಯಕ ಮಹಿಳೆಯರು ಇದರ ವ್ಯಸನಕ್ಕೊಳಪಟ್ಟು ಪಟ್ಟ ಭಾದೆ ಅನುಭವಿಸಿದವರಿಗೆ ಗೊತ್ತು.ಎಷ್ಟೇ ಎಚ್ಚರಿಕೆಯಿಂದ ಇದ್ದರೂ ವಂಚಿಸುವರು ವಂಚನೆಗೊಳಗಾಗುತ್ತಿರುವವರ ಉದಾಹರಣೆಗೆ ಗಳು ಇದ್ದೆ ಇದೆ.ಇದು ಸಾಮಾಜಿಕ ಜಾಲತಾಣದ ತಪ್ಪು ಅಥವಾ ಬಳಸುವವರ ತಪ್ಪು ಅಂತ ನಿಖರವಾಗಿ ಹೇಗೆ ಹೇಳುವದು..!


ಜ್ಯೋತಿ , ಡಿ , ಬೊಮ್ಮಾ.


One thought on “

  1. ವಾಸ್ತವ ಸ್ಥಿತಿ. ಅಂತರ ಜಾಲ ಎಲ್ಲರನ್ನೂ ತನ್ನ ಜಾಲದಲ್ಲಿ ಬಂದಿಸಿ ಬಿಟ್ಟಿದೆ.

Leave a Reply

Back To Top