ಅಮೃತಾ ಉಮೇಶ್ ಶೆಟ್ಟಿ ಶಿವಪುರ- ಗಜಲ್

ಕಾವ್ಯ ಸಂಗಾತಿ

ಅಮೃತಾ ಉಮೇಶ್ ಶೆಟ್ಟಿ ಶಿವಪುರ

ಗಜಲ್

ಬಿಡಿಸಿದ ಕರಗಳ ತುಂಬೆಲ್ಲ ಕರಗದ ಚಿತ್ತಾರವನು ಬರೆದಿದೆ ಮದರಂಗಿ
ನಡೆಯುವ ಮದುವೆಗೆ ಬಾಂಧವ್ಯದ ಧಾರೆಯನು ಎರೆದಿದೆ ಮದರಂಗಿ

ವಧು ವರರ ಬದುಕಲಿ ಹೊಸ ಕತೆಯ ತಿಳಿಸುವ ಸುದಿನ ಅಲ್ಲವೇ
ಮದುಮಗಳ ಮೊಗದಲಿ ಮುಗುಳು ನಗೆಯನು ತೆರೆದಿದೆ ಮದರಂಗಿ

ಬೆರಳುಗಳ ತುದಿಯವರೆಗೂ ಅರಳಿ ನಿಂತಿದೆ ಕಲೆಯ ಸೊಬಗು
ಬರುವ ನೆಂಟರಲಿ ಆಶೀರ್ವಾದದ ನಂಟನು ಮೊರೆದಿದೆ ಮದರಂಗಿ

ಗೋರಂಟಿ ಎಲೆಗಳ ಒಡಲಿಗೆ ರಂಗಿನ ಓಕುಳಿನು ಇಟ್ಟವರು ಯಾರೋ
ನೂರೆಂಟು ಜನಗಳ ಎದುರಿಗೆ ವಿಶಿಷ್ಟವಾಗಿ ಮೆರೆದಿದೆ ಮದರಂಗಿ

ತವರಿನ ಅಂಗಳದಿ ಬೆಳೆದ ಪುಟಾಣಿ ಗಿಡದ ನೆನಪಿದೆ ಅಮ್ಮಿಗೆ
ಸವೆಯದ ಆಚರಣೆಯ ವಿಚಾರವನು ಆಳವಾಗಿ ಕೊರೆದಿದೆ ಮದರಂಗಿ


Leave a Reply

Back To Top