ಕಾವ್ಯ ಸಂಗಾತಿ
ಗಜಲ್
ಇಂದಿರಾ ಮೋಟೆಬೆನ್ನೂರ
ಗಜಲ್ (ಶಮಾ ಮೇಡಂ ಅವರ ಗಜಲ್ ನ ಮತ್ಲಾ ಬಳಸಿ)
ಕಣ್ಣ ರೆಪ್ಪೆಯ ಅಹವಾಲು ಕೇಳಿಸದೆ ನಿನಗೆ ನನ್ನ ಪ್ರೀತಿಯ ಕಮಾಲು ಕಾಣಿಸದೆ ನಿನಗೆ
ಜೊತೆಯಾಗಿ ನಡೆವ ಕನಸು ಕರಗಿ ನೀರಾಗಿದೆ
ಬಿಡಿಸಿದೆದೆಯ ಬೆಳಕ ಚಿತ್ತಾರ ಹಿಡಿಸದೆ ನಿನಗೆ
ಸುರಿದ ಪ್ರೀತಿಯ ಧಾರೆ ಹೊಳೆಯಾಗಿ ಹರಿಯಿತು
ಬಿಸಿಯುಸಿರ ಕಾವದು ಒಲವ ನುಡಿಸದೆ ನಿನಗೆ
ನಡೆದ ಹಾದಿಯ ತುಂಬೆಲ್ಲ ಚೆಲ್ಲುವರಿದ ನಮ್ಮೊಲವು
ಹಬ್ಬಿದ ಹೂಬಳ್ಳಿ ಪ್ರೀತಿಯ ಕನಸ ತೊಡಿಸದೆ ನಿನಗೆ
ಇಂದುವಿನ ಬೆಳಕಿನಂಗಳ ತುಂಬ ಮಲ್ಲಿಗೆಯ ಸೌರಭ
ಸುತ್ತಿಸುಳಿವ ಸುಳಿಗಾಳಿ ಎದೆಯ ಮಿಡಿಸದೆ ನಿನಗೆ