ಹೊಸ ವರ್ಷದ ವಿಶೇಷ-2023

ಸಿರಿತನ-ಬಡತನ ನೋಡದ ಕ್ಯಾಲೆಂಡರ್

ಸವಿತಾ ಮುದ್ಗಲ್

ಹೊಸ ವರ್ಷ ಬಂತಂದರೆ ಸಾಕು ಎಲ್ಲ ಮನೆಗಳಲ್ಲಿ ಅಂಗಡಿಗಳಲ್ಲಿ ಬ್ಯಾಂಕುಗಳಲ್ಲಿ ಹಾಸ್ಪಿಟಲ್ಗಳಲ್ಲಿ ಮಾರುಕಟ್ಟೆಗಳಲ್ಲಿ ಈ ಕ್ಯಾಲೆಂಡರ್ ಗಳದೆ ಹಾವಳಿ.

 ಪ್ರತಿಯೊಂದು ಮನೆಯಲ್ಲಿಯೂ ಸಿಗುವಂತಹ ವಸ್ತು ಎಂದರೆ ಈ ಕ್ಯಾಲೆಂಡರ್.

 ಮಹಿಳೆಯರಿಗೆ ಅತಿ ಮುಖ್ಯವಾದ ಈ ಕ್ಯಾಲೆಂಡರ್ ಬಳಕೆ ಹೇಗಂದರೆ ತಮ್ಮ ದಿನ ನಿತ್ಯದ  ಲೆಕ್ಕವನ್ನು ಈ ಕ್ಯಾಲೆಂಡರ್ ಮೇಲೆ ನಮೂದಿಸುತ್ತಾರೆ. ದಿನನಿತ್ಯದ ಹಾಲು ಮೊಸರಿನ ಖರೀದಿ,ಕರೆಂಟ್ ಬಿಲ್ ಪಾವತಿ ಮಾಡಿದ್ದು,ಮಕ್ಕಳ ಶಾಲಾ ಪೀಸ್ ತುಂಬಿದ್ದು ಹೀಗೆ ಅಲ್ಲಿ ಹಲವಾರು ವಿಷಯಗಳನ್ನುಅಥವಾ ಯಾವುದಾದರೂ ಊರಿಗೆ ಹೋಗಬೇಕಿತ್ತು ಅಂದರೆ ಆ ಕ್ಯಾಲೆಂಡರ್ ಮೇಲೆ ನಮೂದಿಸಿರೋದು ಕಂಡು ಬರುತ್ತದೆ.

ಇತ್ತೀಚಿಗೆ ಆನ್ಲೈನ್ ಕ್ಯಾಲೆಂಡರ್ ಬಳಕೆ ಕೂಡ ಹೆಚ್ಚಾಗಿದೆ. ಸನಾತನ ಪಂಚಾಂಗದ ಕ್ಯಾಲೆಂಡರ್ ಹೀಗೆ ಇನ್ನಿತರ ಹಲವಾರು ಕನ್ನಡದ ಕ್ಯಾಲೆಂಡರ್ ಆಪ್ ಡೌನ್ಲೋಡ್ ಮಾಡಿಕೊಂಡು ದಿನನಿತ್ಯದ ರಾಹುಕಾಲ,ಶುಭ ಕಾಲವನ್ನು ಅಲ್ಲಿ ನೋಡಿಕೊಂಡು ತಮ್ಮ ನಿತ್ಯದ ಕಾರ್ಯಗಳನ್ನು ಮಾಡುವವರು ಇದ್ದಾರೆ.

 ನಮ್ಮ ಕನ್ನಡ ಕ್ಯಾಲೆಂಡರ್ ಅಂದರೆ ಅದು ಅತ್ಯಂತ ವಿಶೇಷವಾದ ಕ್ಯಾಲೆಂಡರ್ ಏಕೆಂದರೆ ಯಾವುದೇ ಒಂದು ತಿಂಗಳ ಕ್ಯಾಲೆಂಡರ್ ಅನ್ನು ತೆಗೆದಾಗ ಒಂದು ದಿನದಲ್ಲಿ ಮಿನಿಮಮ್ ಐದರಿಂದ ಆರು ಹಬ್ಬಗಳ ವಿವರಣೆಯನ್ನು ಹೊಂದಿರುತ್ತದೆ.

 ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು ಡೇಟು ಬಂದಾಗ, ಗರ್ಭವತಿಯಾದ(pragnent) ಮಹಿಳೆಯರು ಡೆಲಿವರಿ ದಿನಾಂಕವನ್ನು ಡಾಕ್ಟರ್ ಕೊಟ್ಟ ದಿನಾಂಕವನ್ನು ಆ ಪತ್ರಿಕೆಯ ಮೇಲೆ ಬರೆದು ಅದೇ ದಿನವನ್ನು ಕ್ಯಾಲೆಂಡರ್ನಲಿ ತಿರುವುತ್ತ ನೋಡುತ್ತಿರುವುದು ವಾಡಿಕೆ.

ಇನ್ನು ಶಾಲಾ ಮಕ್ಕಳಿಗೆ ತಮ್ಮ ಪರೀಕ್ಷೆಯ ದಿನಾಂಕವನ್ನು ಕ್ಯಾಲೆಂಡರ್ ಮೇಲೆ ನಮೂದಿಸಿ ನೋಡ್ತಾ ಇರೋದು ಮತ್ತು ತಮ್ಮ ಬೇಸಿಗೆ ರಜಾ ದಿನಗಳನ್ನು ಕ್ಯಾಲೆಂಡರ್ ನಲ್ಲಿ ಎಲ್ಲಿಂದ ಎಲ್ಲಿವರೆಗೆ ಎಂದು ಗುರುತಿಸಿ ನೋಡುತ್ತಾರೆ.

ಇನ್ನು ಸಾಲ ಕೊಟ್ಟವರು ಮತ್ತು ಪಡೆದವರು ಕೂಡ ಕ್ಯಾಲೆಂಡರ್ ನಲ್ಲಿಯೇ ತಮಗೆ ಮರೆವು ಜಾಸ್ತಿ ಎಂದು ಕ್ಯಾಲೆಂಡರನಲ್ಲಿ ಬರಿದಿರುತ್ತಾರೆ.

 ಇನ್ನು ಮಹಿಳೆಯರು ಮನೆಯಲ್ಲಿ ಅಮಾವಾಸ್ಯೆ ಮತ್ತು ಹುಣ್ಣಿಮೆಗಳನ್ನು ವಿಶೇಷ ಹಬ್ಬದ ದಿನಗಳನ್ನು ಪುನಹ ಪುನಹ ಕ್ಯಾಲೆಂಡ್ರನಲ್ಲಿ ವೀಕ್ಷಿಸಿ ಮನೆಗಳಲ್ಲಿ ಹಬ್ಬ ಆಚರಣೆಯನ್ನು ಆಚರಿಸುತ್ತಾರೆ ಇದೆಲ್ಲ ಈ ಕ್ಯಾಲೆಂಡರ್ ನಿಂದಲೇ ಸಹಾಯವಾಗುತ್ತದೆ.

 ಇನ್ನು ಗ್ರಹಣ, ಜವಳದ ಕಾರ್ಯಕ್ರಮ, ಮದುವೆಯ ದಿನಾಂಕವನ್ನು, ಹೊಸ ಮನೆ ಪ್ರವೇಶದ ಶುಭದಿನಕ್ಕಾಗಿ ಹಾಗೂ ಸಮಯವನ್ನು ನೋಡಲು ಸಹ ಈ ಕ್ಯಾಲೆಂಡರನ್ನು ಎಲ್ಲರೂ ಬಳಸುತ್ತಾರೆ.

ಕ್ಯಾಲೆಂಡರ್ / ದಿನದರ್ಶಿಕೆ/ ಪಂಚಾಂಗವು ಯಾವಾಗಿಂದ ರಚಿಸಿಲ್ಪಟ್ಟಿತು?

 ಕ್ಯಾಲೆಂಡರ್ ಅಂದರೆ ದಿನಾಂಕ ಪಟ್ಟಿ,ಪಂಚಾಂಗ ಅನ್ನಬಹುದು

 ಕ್ರಿಸ್ತಪೂರ್ವ 3100ರಲ್ಲಿ ಕಂಚಿನ ಯುಗದಲ್ಲಿ ಮೆಸೋ ಪಟಾಮಿಯಾ ದ ಸುಮೇರಿಯನ್ನರು ಮೊದಲ ಕ್ಯಾಲೆಂಡರ್ ಅನ್ನು ರಚಿಸಿದರು. ಅದನ್ನು 12 ಚಂದ್ರನ ತಿಂಗಳುಗಳಾಗಿ ವಿಂಗಡಿಸಿದ್ದರು ಅಂದರೆ ಚಂದ್ರನ ಅರ್ಥ.

 ಪ್ರತಿಯೊಂದು 29 ಅಥವಾ 30 ದಿನಗಳನ್ನು ಹೊಂದಿತ್ತು. ಇದು ಈಗ ನಾವು ಹೊಂದಿರುವ ಕ್ಯಾಲೆಂಡರ್ ಗಳಿಗಿಂತ ಭಿನ್ನವಾಗಿತ್ತು. ಸಮಯ ಪಾಲನೆಯು ನವಶರಾಯಗದ ಅವಧಿಯಲ್ಲಿ ಪ್ರಾರಂಭವಾಯಿತು ಆದರೆ ನಿಜವಾದ ಕ್ಯಾಲೆಂಡರ್ಗಳನ್ನು ಕಂಚಿನ ಯುಗದಲ್ಲಿ ರಚಿಸಲಾಯಿತು.

 ಗ್ರೇಗೋರಿಯನ್  ಕ್ಯಾಲೆಂಡರ್ ಪ್ರಪಂಚದಲ್ಲಿ ಅತಿ ಹೆಚ್ಚಾಗಿ ಉಪಯೋಗಿಸಲ್ಪಡುವ ಕ್ಯಾಲೆಂಡರ್. ಅನುಸಿಯಸ್ ರಿಲಿಯಸ್ ಎಂಬ ವೈದ್ಯರಿಂದ ಪ್ರಸ್ತಾಪಿಸಲ್ಪಟ್ಟ ಈ ಕ್ಯಾಲೆಂಡರ್ ಫೆಬ್ರವರಿ 24 1582ರಂದು ಪೋಪ್ 13ನೇ ಗ್ರೇಗೋರಿಯ ಆದೇಶದ ಮೇರೆಗೆ ಜಾರಿಗೆ ಬಂದಿತು.

 ಮೊಗಲರ ಕಾಲದಲ್ಲಿ ನಿಜವಾದ ಸೌರ ಕ್ಯಾಲೆಂಡರನ್ನು ಕಂಡುಹಿಡಿದವರು ಅಕ್ಬರನ ರಾಜ ಮನೆತನದ ಖಗೋಳಶಾಸ್ತ್ರಜ್ಞ ಪತುಲಾಜಿ ಚಂದ್ರನ ಇಸ್ಲಾಮಿಕ್ ಮತ್ತು ಸೌರ ಹಿಂದೂ ಕ್ಯಾಲೆಂಡರ್ ಗಳನ್ನು ಸಂಯೋಜಿಸುವ ಮೂಲಕ ಬಂಗಾಳಿ ಕ್ಯಾಲೆಂಡರನ್ನು ಅಭಿವೃದ್ಧಿಪಡಿಸಿದರು. ಕ್ಯಾಲೆಂಡರ್ ಇಸ್ಲಾಮಿಕ್ ಕ್ಯಾಲೆಂಡರ್ ಮೌಲ್ಯದೊಂದಿಗೆ ಪ್ರಾರಂಭವಾಯಿತು. ಆದರೆ ಹಿಂದಿನ ಆವೃತ್ತಿಯಿಂದ ಸಂಸ್ಕೃತ ತಿಂಗಳ ಹೆಸರುಗಳನ್ನು ಬಳಸಲಾಗಿದೆ. ಬಂಗಾಳಿ ವರ್ಷದ ವಿಶಿಷ್ಟ ಲಕ್ಷಣವೆಂದರೆ ಚಂದ್ರನ ಕ್ಯಾಲೆಂಡರ್ ಆಗುವುದಕ್ಕಿಂತ ಹೆಚ್ಚಾಗಿ ಸೌರ ಮತ್ತು ಚಂದ್ರನ ವರ್ಷದ ಒಕ್ಕೂಟವನ್ನು ಆಚರಿಸಿದೆ. ಸೌರ ಮತ್ತು ಚಂದ್ರನ ವರ್ಷಗಳನ್ನು ಬಹಳ ವೈವಿಧ್ಯಮಯ ವ್ಯವಸ್ಥೆಗಳಲ್ಲಿ ರೂಪಿಸಲಾಗಿರುವುದರಿಂದ ಇದು ಮೂಲಭೂತವಾಗಿ ಉತ್ತಮ ಪ್ರಚಾರವಾಗಿತ್ತು.

 ಪ್ರತಿಯೊಂದು ಮನೆಯಲ್ಲಿ ಎಲ್ಲಾ ವಸ್ತುವಿದೆ ಅದರಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದಿರ್ತಕ್ಕಂತದ್ದು ಈ ಕ್ಯಾಲೆಂಡರ್.

ದಿನದರ್ಶಿಕೆ ಅವಶ್ಯಕತೆ ಇರುವ ವಸ್ತು!!!


2 thoughts on “

Leave a Reply

Back To Top