ಅಂಕಣ ಸಂಗಾತಿ

ಸಕಾಲ

ಚಳಿಗಾಲದಲ್ಲಿ ಮೈಮನಗಳು ಅರಳುವುದು.

ಚಳಿಗಾಲ ಎಂಬ ಮಾಯಾಂಗನೆ ಮನಸೂರೆಗೊಳ್ಳುವ ಸಮಯಕ್ಕೆ ಮೈಮನಗಳು ಬೆಚ್ಚಗಾಗಲು ಹಾತೊರೆಯುವುದು ದಿಟ.ವಾತಾವರಣ ದಿನದಿಂದ ದಿನಕ್ಕೆ ಭಿನ್ನವಾದರೂ  ನಾವು ಹೊಂದಾಣಿಕೆ ಮಾಡಿಕೊಳ್ಳಲೇ ಬೇಕು.ಆಶ್ಚರ್ಯ ಆದರೂ ವಾಸ್ತವ.ಈಗೀಗ ಋತುಗಳ ಬದಲಾಣೆ ಅರಿವಾಗದಷ್ಟು ಬೆರೆತು ಹೋಗಿದ್ದೆವೆ.ವರ್ಷ ಪೂರ್ತಿ ಮಳೆ,ಆಗಾಗ ತೀವ್ರ ಬಿಸಿಲು, ಅಲ್ಪಸ್ವಲ್ಪ ಚಳಿ,ಇನ್ನೂ ಏನಾಗುತ್ತೊ ಎಂಬ ದುಗುಡದುಮ್ಮಾನಗಳ ನಡುವೆ ಬದುಕು ಕಳೆಯುವ ಸಮಯ ಬಂದೊದಗಿದೆ.ಏನೇ ಇರಲಿ ಚಳಿಗಾಲ ಆರಂಭದ ಮುನ್ಸೂಚನೆಯನ್ನು ಅನುಭವಿಸಿದಾಗ ಮಾತ್ರ ಚಳಿಗಾಲ ಆರಂಭವಾಗಿದೆಯಂತ ಮನಸ್ಸು ಒಪ್ಪಿಕೊಳ್ಳುತ್ತದೆ.ಮೊದಲೆಲ್ಲ ಚಳಿಗಾಲ ಬಂತೆಂದರೆ ದೇಹ ಒದ್ದಾಡುವ ಸ್ಥಿತಿ ಬೆಂಕಿಯ ಬುಡಕ್ಕೆ ಕೈಚಾಚುವ ಹವಣಿಕೆ,ತಣ್ಣೀರು ಮುಟ್ಟಿದ ಕೈಗಳು ಮರಟ್ಟಿದ ಅನುಭವ.ಇದ್ದಬಿದ್ದ ರಗ್ಗುಗಳನ್ನು ಹೊದ್ದು ಮಲಗುವ ಧಾವಂತ.

“ಚಳಿ ಚಳಿ ತಾಳೇನು ಈ ಚಳಿಯಾ‌” ಎಂಬ ಹಾಡು ನೆನಪಾಗದೆ ಇರದು. ಚಳಿಗಾಲದಲ್ಲಿಯೇ ಮೈಮನಸುಗಳು ಅರಳುವವು.ಈ‌ ಋತುವಿನ ವಿಶಿಷ್ಟ್ಯಚಳಿಗಾಲವು ಸಮಶೀತೋಷ್ಣ ವಾತಾವರಣಗಳಲ್ಲಿ ಶರತ್ಕಾಲ ಮತ್ತು ವಸಂತಕಾಲಗಳ ನಡುವೆ ಬರುವ ವರ್ಷದ ಅತ್ಯಂತ ಶೀತಲ ಋತು. ದಕ್ಷಿಣಾಯಣದಂದು, ದಿನಗಳು ಅತ್ಯಲ್ಪಾವಧಿಯನ್ನು ಹೊಂದಿರುತ್ತವೆ ಮತ್ತು ರಾತ್ರಿಗಳು ಅತಿದೀರ್ಘಾವಧಿಯನ್ನು ಹೊಂದಿರುತ್ತವೆ, ಮತ್ತು ಅಯನದ ನಂತರ ಋತು ಮುಂದುವರಿದಂತೆ ದಿನಗಳ ಅವಧಿ ಹೆಚ್ಚಾಗುತ್ತದೆ. ಕೆಲವು ತಜ್ಞರು ಖಗೋಳೀಯ ಚಳಿಗಾಲವನ್ನು ಕೇವಲ ಸೂರ್ಯನ ಸುತ್ತ ಭೂಮಿಯ ಅಕ್ಷದಲ್ಲಿನ ಅದರ ಸ್ಥಿತಿ ಮೇಲೆ ಆಧರಿಸಿ ವ್ಯಾಖ್ಯಾನಿಸಲು ಪ್ರಯತ್ನಿಸುತ್ತಾರೆ. ಏನೇ ಇರಲಿ ಚಳಿಯಾದಾಗ ಅನುಸರಿಸಬೇಕಾದ ಕ್ರಮಗಳನ್ನು ಹಿರಿಯರು ವೈಜ್ಞಾನಿಕವಾಗಿ ಕಟ್ಟುಕೊಟ್ಟಿದ್ದಾರೆ.

ನಮ್ಮ ಆಂತರಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳು, ಕವಿ ಕಣ್ಣುಗಳಿಗೆ ಚಳಿಗಾಲ  ವಿಭಿನ್ನವಾಗಿ ಕಾಣುತ್ತದೆ. ಚಳಿಯ ನಡುಕಿಗೆ ಅಧ್ಯಯನ ಮಾಡುವುದು ಕಠಿಣ ಮತ್ತು ಕೆಲವೊಮ್ಮೆ ನೀರಸ ಪ್ರಕಕ್ಷಣಗಳನ್ನುವಿಯ ತಾಪಕ್ಕೆ ಮೈಯೊಡ್ಡುವ ಮನಸ್ಸು. ನಮ್ಮ ದೇಶದಲ್ಲಿ ಮನರಂಜನೆಗಾಗಿ ಹಲವು ಸ್ಥಳಗಳಿವೆ, ಅಲ್ಲಿ ಚಳಿಗಾಲದ ಕ್ರೀಡಾ ಅಭಿಮಾನಿಗಳು ಅಂಶಗಳನ್ನು ಭೇಟಿ ಮಾಡಬಹುದು. ಸ್ಕೇಟಿಂಗ್, ಸ್ನೋಬೋರ್ಡಿಂಗ್, ಸ್ಕೀಯಿಂಗ್ ಕಡಿದಾದ ಪರ,ಸಾಂಪ್ರದಾಯಿಕವಾಗಿ, ಚಳಿಗಾಲದ ರಜಾದಿನಗಳು ಹೊಸ ವರ್ಷ, ಕ್ರಿಸ್ಮಸ್ – ಎಲ್ಲಾ ಮೊದಲಾಚರಣೆ,

ನೀವು ಪ್ರೀತಿಸುವ ಜನರ ಮಧ್ಯದಲ್ಲಿರುವಾಗ, ಚಳಿಗಾಲದ ದಿನಗಳು ಎಷ್ಟು ದೀರ್ಘವೆಂದು ಕೇಳಲು ಸಮಯವಿಲ್ಲ. ನಮ್ಮ ಸ್ಮರಣೆಯಲ್ಲಿ ಯಾವಾಗಲೂ ಉಳಿಯುವ ಕ್ಷಣವನ್ನು ನಾವು ಆನಂದಿಸುತ್ತೆವೆ.. ಅಂತಹ ಕ್ಷಣಗಳನ್ನು ನೆನಪಿಗಾಗಿ ಸಂರಕ್ಷಿಸಲಾಗಿದೆ, ಬಲವಾದ ಶೀತಕ್ಕೆ ಬೆಚ್ಚಗಿರುತ್ತದೆ. ಜೊತೆಗೆ, ಸಕಾರಾತ್ಮಕ ನೆನಪುಗಳು ನಮ್ಮನ್ನು ಎಲ್ಲರಲ್ಲಿ ಸಂಪೂರ್ಣವಾಗಿ ಸಂಭವಿಸುವ ವಿವಿಧ ಬಿಕ್ಕಟ್ಟನಿಂದ ಬಿಡಿಸಿಕೊಳ್ಳಲು ಅವಕಾಶ ನೀಡುತ್ತದೆ.

ಚಳಿಗಾಲದಲ್ಲಿ ಅಷ್ಟು ಬೇಗ ಏಳಲು‌ ಆಗದೇ ಮಗ್ಗಲು ಬದಲಿಸಿ ಬೆಚ್ಚಗಿರಲು ಮನಸ್ಸು ಬಯಸುತ್ತೆ,ಕಾಲು ನೆಲಕ್ಕಿಟ್ಟಷ್ಟು ಮಂಜುಗಡ್ಡೆಯ ಮೇಲೆ ನಡೆದ ಅನುಭವ ಅಬ್ಬಾ ಚಳಿಯೇ ಎನ್ನುತ್ತಲೇ, ವಿಹಾರವು ಬೇಗ ಅಥವಾ ನಂತರ ಮುಗಿಯುತ್ತದೆ. ಮತ್ತು ನಾನು ಮತ್ತೆ ಶಾಲೆಗೆ ಹೋಗಬೇಕಾಗಿದೆ. ಆದರೆ ನಮ್ಮ ಸ್ನೇಹಿತರು ಮತ್ತು ಸಹಪಾಠಿಗಳನ್ನು ನೋಡಿದಾಗ,ಅವರೆಲ್ಲ ಎಷ್ಟು ಸುಲಭವಾಗಿ ಮತ್ತು ನಿಶ್ಚಲವಾಗಿರುವರು ಎಂಬ ಅಂಶದ ಬಗ್ಗೆ ಇದು ಯೋಗ್ಯ ಚಿಂತನೆ. ಹೊಸ ಸೃಜನಾತ್ಮಕ ಮತ್ತು ಶೈಕ್ಷಣಿಕ ಸಾಹಸಗಳನ್ನು ಪ್ರೇರೇಪಿಸುತ್ತವೆ. ಆಕರ್ಷಕ ಸಂವಹನಕ್ಕಾಗಿ ಮನತೆರೆದುಕೊಳ್ಳಲು‌ ಸಹಕಾರಿ.

ಚಳಿಗಾಲದ ಉಡುಗೆ ತೊಡುಗೆಗಳ ಬಗ್ಗೆ ಗೊತ್ತೆಯಿದೆ.ಅದಕ್ಕೆ ಪ್ರೇರಕ ಹಾಗೂ ಉತ್ತೇಜನ ನೀಡಲು ಚಳಿಯಿಂದ ನಮ್ಮ ತ್ವಚೆಯ ಅಲ್ಲ ಇಡೀ ದೇಹದ ಆರೈಕೆಯನ್ನು ಮಾಡಿಕೊಳ್ಳುವುದು ಅನಿವಾರ್ಯ ಕೂಡ.

“ಚಳಿಗಾಲದಲ್ಲಿ ಮಕ್ಕಳಿಗೆ ಉಷ್ಣಾಂಶ ಕಡಿಮೆಯಾಗುತ್ತದೆ.ಹಾಗಾಗಿ ಮಕ್ಕಳು ಮತ್ತು ಹಿರಿಯ ನಾಗರಿಕರ ಕಡೆ ಹೆಚ್ಚು ಗಮನ ಕೊಡಬೇಕಾಗಿದೆ.”ಚಳಿಗಾಲದಲ್ಲೇ ಸೇವಿಸಬೇಕೆಂದು ನಮ್ಮ ಹಿರಿಯರು ಮಾಡಿದ ಪದ್ಧತಿಗಳನ್ನು ಮೂಢ ನಂಬಿಕೆ ಎಂದೇ ನಾವು ತಾತ್ಸಾರ ಮಾಡಿದ್ದೇವೆ.ಆದರೆ ಅವುಗಳಿಗಿರುವ ವೈಜ್ಞಾನಿಕ ಕಾರಣಗಳನ್ನು ಅರಿತರೆ ಮಾತ್ರವೇ ಅವುಗಳ ಹಿಂದಿರುವ ದೇಹ ಸ್ವಾಸ್ಥ್ಯದ ಉದ್ದೇಶ ಮನದಟ್ಟಾಗುತ್ತದೆ.ಚಳಿಗಾಲದಲ್ಲಿ ಮಾತ್ರ ಸಿಗುವ ಕೆಲವು ಹಣ್ಣು ತರಕಾರಿಗಳು ಈ ಹವೆಯಲ್ಲಿ ದೇಹದ ಆರೋಗ್ಯಕ್ಕೆ ಒಳ್ಳೆಯದಾಗಿವೆ. ಚಳಿಗಾಲದಲ್ಲಿ ದೇಹದ ಆರೋಗ್ಯದ ಮೇಲೆ ಹೆಚ್ಚು ಪ್ರಭಾವ ಬೀರುವ, ದೇಹದ ಸ್ವಾಸ್ಥ್ಯವನ್ನು ಹೆಚ್ಚಿಸುವ ಹತ್ತು ಆಹಾರಪದಾರ್ಥಗಳು ಇಲ್ಲಿವೆ…

1. ಕಿತ್ತಳೆ: ಚಳಿಗಾಲದಲ್ಲಿ ದೇಹಕ್ಕೆ ಸಿ ವಿಟಾಮಿನ್ ಬೇಕಿರುವುದರಿಂದ ಕಿತ್ತಳೆ ಹಣ್ಣನ್ನು ಈ ಸಮಯದಲ್ಲಿ ತಿನ್ನುವುದು ಬಹಳ ಒಳ್ಳೆಯದು. ಚಳಿಗಾಲದಲ್ಲಿ ಹೇರಳವಾಗಿ ದೊರಕುವ ಕಿತ್ತಳೆಯಲ್ಲಿ ಸಿಟ್ರಸ್ ಆಮ್ಲವಿರುತ್ತದೆ. ಇದು ‘ಸಿ’ ಜೀವಸತ್ವದ ತವರೂರು. ದೇಹದಲ್ಲಿರುವ ರೋಗಾಣುಗಳ ವಿರುದ್ಧ ಹೋರಾಡುವಲ್ಲಿ ಇದರ ಪಾತ್ರ ಮಹತ್ವದ್ದು.

2. ಸೇಬು: ಪ್ರತಿ ದಿನ ಒಂದು ಸೇಬನ್ನು ತಿನ್ನುವುದರಿಂದ ವೈದ್ಯರನ್ನು ದೂರವಿಡಬಹುದು.ಪ್ರತಿ ದಿನ ಊಟದ ನಂತರ ಸೇಬು ಸೇವಿಸುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು.

3. ಕ್ಯಾರೆಟ್: ಪ್ರತಿ ದಿನ ಒಂದಾದರೂ ಹಸಿ ಕ್ಯಾರೆಟ್ ನಲ್ಲಿ ವಿಟಾಮಿನ್ ಎ ಹೇರಳವಾಗಿರುವುದಲ್ಲದೆ, ವಿಟಾಮಿನ್ ಬಿ, ಸಿ, ಡಿ, ಇ, ಕೆ ಗಳು ಕೂಡ ಇರುವುದರಿಂದ ಏಕಕಾಲದಲ್ಲಿ ದೇಹಕ್ಕೆ ಹಲವು ವಿಟಾಮಿನ್‌ಗಳು ಸಿಕ್ಕಂತಾಗುತ್ತದೆ.

4. ಸಾಸಿವೆ ಎಲೆ: ಸಾಸಿವೆಯಲ್ಲಿ ಚಳಿಗಾಲಕ್ಕೆ ದೇಹಕ್ಕೆ ಅಗತ್ಯವಾಗಿ ಬೇಕಾದ ಸಾಕಷ್ಟು ಪೋಷಕಾಂಶಗಳಿರುತ್ತವೆ. ಸಾಸಿವೆ ಗಿಡದ ಚಿಗುರೆಲೆಗಳು ಪಂಜಾಬಿನಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿವೆ. ಇವನ್ನು ಹಸಿಯಾಗಿಯೇ ಸೇವಿಸುವುದರಿಂದ ಇದರಲ್ಲಿರುವ ವಿಟಾಮಿನ್‌ಗಳು, ಮಿನರಲ್‌ಗಳು ಮತ್ತು ಕ್ಯಾರೊಟಿನ್‌ಗಳು ದೇಹ ಸೇರಿ ಆರೋಗ್ಯವನ್ನು ಸುಸ್ಥಿತಿಯಲ್ಲಿಡುತ್ತವೆ.

5. ಬಟಾಣಿ:ಇದು ಹೊಟ್ಟೆಯ ಕ್ಯಾನ್ಸರ್ ಅನ್ನೂ ನಿಯಂತ್ರಿಸುವ ಶಕ್ತಿ ಹೊಂದಿದೆ.

6. ಕೋಸು: ನವಿಲು ಕೋಸು ಸಹ ಚಳಿಗಾಲದಲ್ಲಿ ಅತ್ಯಂತ ಆರೋಗ್ಯಕರ ತರಕಾರಿ. ಇದನ್ನು ಬೇಯಿಸಿ ತಿನ್ನುವುದರಿಂದ ಇದರಲ್ಲಿನ ಪೋಷಕಾಂಶಗಳು ಮರೆಯಾಗಬಹುದು. ಆದ್ದರಿಂದ ಎಳೆಯ ಗೆಡ್ಡೆಗಳನ್ನು ಹಸಿಯಾಗಿಯೇ ತಿನ್ನುವುದು ಒಳ್ಳೆಯದು. ಮಧುಮೇಹಕ್ಕೆ ಇದು ಒಳ್ಳೆಯ ಮದ್ದೂ ಕೂಡ.

7. ಮೆಂತ್ಯ ಸೊಪ್ಪು: ಮೆಂತ್ಯ ಸೊಪ್ಪಿನಲ್ಲಿಯೂ ಸಾಕಷ್ಟು ಪ್ರಮಾಣದ ವಿಟಾಮಿನ್, ಮಿನರಲ್ ಅಂಶಗಳಿರುವುದರಿಂದ ವಿಶೇಷವಾಗಿ ಚಳಿಗಾಲದಲ್ಲಿ ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸ್ವಲ್ಪ ಪ್ರಮಾಣದ ಕಹಿ ಅಂಶವನ್ನು ಹೊಂದಿರುವುದರಿಂದ ಮಧುಮೇಹ ರೋಗಕ್ಕೂ ಇದು ರಾಮಬಾಣವೆನ್ನಿಸಿದೆ.

8. ಮೂಲಂಗಿ: ಮೂಲಂಗಿ ಪೊಟ್ಯಾಶಿಯಂ ಮತ್ತು ಫೋಲಿಕ್ ಆಮ್ಲಗಳ ಆಗರ. ಚಳಿಗಾಲದಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಕಾಣಸಿಗುವ ಅದು ಆ ಅವಧಿಯಲ್ಲಿ ತಿಂದರೇ ಹೆಚ್ಚು ಉಪಯೋಗಕಾರಿ.

9. ಬಸಳೆ ಮತ್ತು ಪಾಲಾಕ್ ಸೊಪ್ಪು: ಇದು ಅತ್ಯಂತ ಆರೋಗ್ಯಕರ ಸೊಪ್ಪು ಎಂಬ ಖ್ಯಾತಿ ಪಡೆದಿರುವುದರಿಂದ ಚಳಿಗಾಲದಲ್ಲಿ ಇದರ ಸೇವನೆ ಅತ್ಯಂತ ಒಳ್ಳೆಯದು.

10. ಕಡಲೆಬೀಜ: ವಿಟಾಮಿನ್, ಪೊಟ್ಯಾಶಿಯಂ, ಪ್ರೋಟಿನ್, ಕಾರ್ಬೊಹೈಡ್ರೆಟ್, ಕ್ಯಾಲ್ಷಿಯಂ…ಅಂಶಗಳು ಕಡಲೆಕಾಯಿಯಲ್ಲಿ ಹೇರಳವಾಗಿರುವುದರಿಂದ ಚಳಿಗಾಲದಲ್ಲಿ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಇದು ನೀಡುತ್ತದೆ.

ಆದಷ್ಟು ಬೆಚ್ಚನೆ ಉಡುಪುಗಳನ್ನು ಧರಿಸಬೇಕು. ಬೆಳಗ್ಗೆ ಮತ್ತು ರಾತ್ರಿ ಸ್ವೆಟರ್‌ ಧರಿಸಬೇಕು.ಧೂಳಿನಿಂದ ರಕ್ಷಿಸಿಕೊಳ್ಳಲು ಮಾಸ್ಕ್‌ ಬಳಸಿದರೆ ಒಳ್ಳೆಯದು.ಕುದಿಸಿ ಆರಿಸಿದ ನೀರನ್ನು ಬಳಸಬೇಕು. ದ್ರವ ಪದಾರ್ಥಗಳನ್ನು ಸೇವಿಸಬೇಕು.ರೋಗನಿರೋಧಕ ಶಕ್ತಿಯನ್ನು ಶಕ್ತಿಯುತಗೊಳಿಸಲು ತಾಜಾ ಹಣ್ಣುಗಳು ಮತ್ತು ತರಕಾರಿ ಸೇವಿಸಬೇಕು.ಚಳಿಗಾಲದಲ್ಲಿ ಸಂಧಿವಾತ ತಡೆಗಟ್ಟಲು ದೇಹ ಬೆಚ್ಚನೆ ಇರುವಂತೆ ನೋಡಿಕೊಳ್ಳಬೇಕು. ನಿಯಮಿತವಾದ ವ್ಯಾಯಾಮ ಮಾಡಬೇಕು.ಇಳಿವಯಸ್ಸಿನವರಿಗೆ, ಮಕ್ಕಳಿಗೆ ಮತ್ತು ಸಕ್ಕರೆ ಕಾಯಿಲೆ, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಯಂತಹ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವವರು ವೈದ್ಯರ ಸಲಹೆ ಮೇರೆಗೆ ನ್ಯುಮೋಕೋಕಲ್‌ ಮತ್ತು ಇನ್‌ ಫ್ಲುಯೆಂಜಾ ಚುಚ್ಚುಮದ್ದನ್ನು ಪಡೆಯಬಹುದು.

ಮಳೆಗಾಲ ಮುಗಿದ ನಂತರ ವಾತಾವರಣದಲ್ಲಿ ಇಬ್ಬನಿ ಬೀಳಲು ಶುರುವಾಗುತ್ತದೆ. ಇದರಿಂದ ಚಳಿಯ ಅನುಭವ ಉಂಟಾಗುತ್ತದೆ. ಪ್ರತಿಮನೆಯಲ್ಲೂ ಒಬ್ಬರಲ್ಲ ಒಬ್ಬರು ವೈರಲ್‌ ಫೀವರ್‌, ಕೆಮ್ಮು, ಜ್ವರ, ಶೀತದಿಂದ ಬಳಲುವ ಸಾಧ್ಯತೆ ಜಾಸ್ತಿ.ಚಳಿಗಾಲದಲ್ಲಿ ಹೃದಯಾಘಾತ, ಪಾಶ್ರ್ವವಾಯು, ಕೀಲು ನೋವು ಅಥವಾ ಸಂಧಿವಾತ, ಅಲರ್ಜಿ, ಅಸ್ತಮಾ, ಕೆಮ್ಮು, ನೆಗಡಿ ಹಾಗೂ ಶ್ವಾಸಕೋಶದ ಇತರೆ ಸಮಸ್ಯೆಗಳು, ಒಣ-ನವೆ, ಚರ್ಮದ ಕಾಯಿಲೆಗಳು, ಇನ್‌ ಫ್ಲುಯೆಂಜಾ, ಜ್ವರ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಈ ಹಿನ್ನೆಲೆಯಲ್ಲಿ ಚಳಿಗಾಲದಲ್ಲಿ ಪ್ರಮುಖವಾದ ಹೃದಯಘಾತ, ಪಾಶ್ರ್ವವಾಯು ಇತ್ಯಾದಿ ಗಂಭೀರ ಕಾಯಿಲೆಗಳು ಹಾಗೂ ಸಮಸ್ಯೆಗಳ ಪರಿಹಾರ ಮಾರ್ಗಗಳ ಕಡೆ ಗಮನ ಹರಿಸಬೇಕಿದೆ.

ಚಳಿಗಾಲದ ನೆನಪುಗಳು ಮನದಲ್ಲಿ ಹೊಸ ಹುರುಪನ್ನು ಮನೆ ಮಾಡಿದ್ದಂತೂ ಸತ್ಯ.ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಹುಡುಕಿದಂತೆ. ಆದಷ್ಟು ಋತುವಿಗೆ ತಕ್ಕಂತೆ ಬದಲಾಗುವ ಜೈವಿಕ ಕ್ರಿಯೆಗಳು ಮನುಷ್ಯನ ಮನಸ್ಸನ್ನು ಹದಗೊಳಿಸಿ ಮುನಿಸಿನ ಮನಸ್ಸನ್ನು ಪಕ್ವತೆಯತ್ತ ಕರೆದೊಯ್ಯದರೆ ಸಾಕು.ಚಳಿಗೆ ಮೈಯೊಡ್ಡಿ ಕನಸ ಕಾಣುವ ಹಾಗೂ ನನಸಾಗುವತ್ತ ಸೆಳೆಯಲಿ ಎನ್ನುತ್ತ ಚಳಿಗೊಂದು ಸ್ವಗತ ಕೊರೋಣವೆನ್ನುತಿದೆ.


ಶಿವಲೀಲಾ ಹುಣಸಗಿ

ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ

4 thoughts on “

  1. ಚಳಿಗಾಲವನ್ನು ಹೇಗೆ ಸ್ವಾಗತಿಸಬೇಕೆಂಬ ಸವಿಸ್ತಾರ ಮಾಹಿತಿ ಚೆನ್ನಾಗಿದೆ

  2. ತುಂಬಾ ಚೆನ್ನಾದ ಚಳಿಗಾಲದ ವರ್ಣನೆ…. ಅಭಿನಂದನೆಗಳು ಮೇಡಂ

  3. ಚಳಿಗಾಲದಲ್ಲಿನ ಮಹಿಮೆಗಳ ಕುರಿತು ಬರೆದ ಬರವಣಿಗೆ ಸುಂದರವಾಗಿ ಮೂಡಿ ಬಂದಿದೆ.

Leave a Reply

Back To Top