ಕಾವ್ಯ ಸಂಗಾತಿ

ತೀರವಿರದ ಕಡಲು

ಅರುಣಾ ನರೇಂದ್ರ

ಕಾವ್ಯ ಸ್ಪಂದನ

ಕಣ್ಣೀರ ಕೋಡಿಯ ಲೆಕ್ಕ
ಕರವಸ್ತ್ರ ಬರೆದಿಡುತ್ತದೆ
ಒಡಲಾಳದ ನೋವಿನ ಲೆಕ್ಕ
ನಿಟ್ಟುಸಿರು ಬರೆದಿಡುತ್ತದೆ
***


ಹೃದಯಕ್ಕೆ ಹೃದಯ ಸ್ಪಂದಿಸಿದರೆ
ಲೋಕ ನಾಕವಾಗುತ್ತದೆ
ಮನಕೆ ಮನ ಮಿಡಿದರೆ
ಮಾತು ಮೌನವಾಗುತ್ತದೆ
**


ಬಾಳ ದಾರಿಯಲಿ
ನಾ ಒಂಟಿಯಾಗಿ ಅಳುವಾಗ
ಬಾನ ಚಂದ್ರ ತಾ
ಜೊತೆಯಾಗುವೆನೆಂದ
**


ನನ್ನ ಕಾವ್ಯ
ನಿನ್ನ ನಗುವಿನಲ್ಲಿ ಹುಟ್ಟಿ
ಚೆಂದುಟಿಯಲ್ಲಿ ಮಿಂದು
ಹೃದಯದಾಳದಲ್ಲಿ ಸೇರಿಕೊಳ್ಳುತ್ತದೆ


ಅರುಣಾ ನರೇಂದ್ರ

1 thought on “

Leave a Reply