ಅಂಕಣ ಸಂಗಾತಿ

ರಮೇಶ ಸಿ ಬನ್ನಿಕೊಪ್ಪ ಹಲಗೇರಿಯವರಿಂದ ಅಂಕಣ

ಒಲವ ಧಾರೆ

ನಿತ್ಯ ಪಯಣದ ಹಾದಿಯಲ್ಲಿ ಪ್ರೇಮ ಸಲ್ಲಾಪದ ಪಿಸುಮಾತುಗಳ ಕೊಲೆಯೂ

ಮಂಡ್ಯದ ಹಳ್ಳಿಯೊಂದರಲ್ಲಿ ತಂದೆಯಿಂದಲೇ ಮಗಳ ಬರ್ಬರ ಹತ್ಯೆ. ಅದು ಮರ್ಯಾದೆ ಹತ್ಯೆ.  ಕಲ್ಬುರ್ಗಿ ಜಿಲ್ಲೆಯೊಂದರಲ್ಲಿ ಮಗಳನ್ನು ಕೆರೆಗೆ ತಳ್ಳಿ ಸಾಯಿಸಿದ  ಧಾರುಣ ಪ್ರಸಂಗ. ಇದೊಂದು ಮರ್ಯಾದ ಹತ್ಯೆ. ತನ್ನದಲ್ಲದ ಧರ್ಮ, ತನ್ನದಲ್ಲದ ಜಾತಿಯವರೊಡನೆ ಪ್ರೀತಿಸಿದಳು ಎನ್ನುವ ಏಕೈಕ ಕಾರಣಕ್ಕೆ ಪಾಲಕರಿಂದಲೂ ಮಕ್ಕಳ ಕೊಲೆ ಕೊಲೆ…

        ಚೈತ್ರ ಕಳೆದು, ವಸಂತ ಬಂದ ಹೊಸತನ ತಂದ. ಪ್ರಕೃತಿ ತುಂಬಾ ರಂಗೋ ರಂಗು. ಹೊಸ ಹೊಸ ಚಿಗುರು ಹೂ ಮುಗುಳು ಕಾಯಿ ಹಣ್ಣಾಗುವ ಸಂಭ್ರಮ. ಪ್ರಕೃತಿಯೇ ಹಾಗೆ.. ತನ್ನದಲ್ಲದ ಎಲ್ಲವನ್ನು ಕಳೆದುಕೊಂಡು ಹೊಸತನವನ್ನು ಮತ್ತೆ ತನ್ನದಾಗಿಸಿಕೊಳ್ಳುವ ಉಮೇದು. ಪ್ರಕೃತಿಯಂತೆ ನಾವು ಆಗುವುದು ಬಹಳ ಕಷ್ಟ. ‘ಬದಲಾವಣೆ ಜಗದ ನಿಯಮ’ ಎನ್ನುತ್ತಲೇ ಸಮಯಕ್ಕೆ ಸದಾ ಕೈಗನ್ನಡಿ ಹಿಡಿಯುತ್ತೇವೆ. ನಗುತ್ತೇವೆ.. ಅಳುತ್ತೇವೆ ಮತ್ತೆ ಮತ್ತೆ ಚಡಪಡಿಸುತ್ತಲೇ ಇರುತ್ತೇವೆ. ಚಡಪಡಿಸುವ ವಯಸ್ಸು ಕೂಡ ಬಾಲ್ಯ ಕಳೆದು, ಹರೆಯಕ್ಕೆ ಕಾಲಿಡುವ ಸಂಕ್ರಮಣ ಕಾಲ. ಚಿಗುರುವ ಮೀಸೆಗೆ ಹುಚ್ಚು ಕನಸುಗಳ ಆಸೆ. ಬೆಚ್ಚನೆಯ ಭಾವಗಳ ಎದೆಯೊಳಗೆ ತುಂಬಿಕೊAಡು ಎಲ್ಲೆಂದರಲ್ಲಿ ಓಡಾಡುವ ತವಕ. ಕಣ್ಣೊಳಗೆ ಸಾವಿರಾರು ಕನಸುಗಳನ್ನು ತುಂಬಿಕೊಳ್ಳುವ, ಅರಳಿನಿಂತ ಹೂವಿಗೆ ದುಂಬಿ ಮನಸೆಳೆದು ಸೋಲುವುದು. ಉದಯಿಸುವ ಸೂರ್ಯನ ತಂಪಾದ ಕಿರಣಗಳಿಗೆ ತಲೆಬಾಗುವ ಹೂವಿನ ಸೋಲು. ಜಗದೆತ್ತರಕ್ಕೆ ಬೆಳೆದರೂ ನೆಲದ ಪ್ರೀತಿಯನ್ನು ಕಾಣುವ ತವಕ ಮರದ ಬೇರುಗಳಿಗೆ..ಹೀಗೆ ಅವರವರದೇ ಕನಸುಗಳು, ನೆನಪುಗಳು, ಆಲಿಂಗನಗಳು, ಒನಪು ವಯ್ಯಾರಗಳು ಯೌವ್ವನದ ಎಲ್ಲರೆದೆಯಲ್ಲಿ ಕುಣಿದಾಡುವ ಸಂಭ್ರಮದ ಸಡಗರಗಳು..!!

        ಪ್ರೌಢಶಾಲೆ ಮುಗಿದು, ಕಾಲೇಜಿಗೆ ಕಾಲಿಡುವ ಕನ್ಯೆಯರ ಗುಂಪಿನ ಒನಪು ವಯ್ಯಾರ..! ನಿಮಗೇನು ನಾವೇನು ಕಡಿಮೆಯೇ..? ನಿಮಗಿಂತಲೂ ನಾವು ಯಾವುದರಲ್ಲಿಯೂ ಕಡಿಮೆ ಇಲ್ಲ. ‘ಜಗತ್ತನ್ನೇ ಗೆದ್ದು ಬಿಡಬಲ್ಲೆ’ ಎನ್ನುವ ಹುಚ್ಚು ಭ್ರಮೆಯನ್ನು ಹೊತ್ತ ಗಂಡು ಹುಡುಗರ ಗುಂಪುಗಳು. ಮತ್ತೆ ಮತ್ತೆ ಕನಸುಗಳ ಕಡೆಗೆ ಲಗ್ಗೆ ಹಾಕುತ್ತಿರುತ್ತವೆ. ಬೇರೆಬೇರೆ ಗುಂಪಿನಲ್ಲಿ ನಿತ್ಯವೂ ಕಾಲೇಜಿಗೆ ಹೋಗುವ ಹೆಜ್ಜೆಗಳ ಜಾಡಿನಲ್ಲಿ ಪಿಸುಮಾತುಗಳ ಕಲರವ. “ಯಾರು ನನ್ನ ನೋಡಿ ಬಿಟ್ಟರೋ, ಅಯ್ಯೋ ಏನಾದರೂ ಅಂದುಕೊAಡಾರು” ಎನ್ನುವ ಒಳಮನಸ್ಸಿನ ಆತಂಕ ಪ್ರಶ್ನೆ.. ಸಂಶಯ,ನಾಚಿಕೆ ತವಕ ಸದಾ ಕಾಡುತ್ತದೆ. ಇದೆಲ್ಲವನ್ನು ಮನಸ್ಸಿನಲ್ಲಿಯೇ ಅನುಭವಿಸುತ್ತಲೇ ಹೊಸದೊಂದು ಲೋಕವನ್ನೇ ಸೃಷ್ಟಿಸಿಕೊಳ್ಳುವ ಉಮೇದುವಾರಿಕೆ ಎರಡೂ ಕಡೆಯಿಂದಲೂ ಇವೇಲ್ಲವೂ ಹಾಜರ್ ಇರುತ್ತದೆ.

        ಕಾಲೇಜಿನ ಬಸ್ಸಿಗಾಗಿ ಕಾಯುವ ಯುವ ಮನಸ್ಸುಗಳು. ತಮಗೆ ಇಷ್ಟವಾದವರು ಕಂಡೊಡನೆ ಕಣ್ಣುಗಳೊಡನೆ ಮಾತನಾಡುವ ಹುಸಿ ನಗೆ ಬೀರುವ ಕಾಲೇಜಿನ ಬಸ್ಸಿಗಾಗಿ ಕಾಯುವ ಯುವ ಮನಸ್ಸುಗಳು. ತಮಗೆ ತುಂಟಾಟದಿAದ ಕಣ್ ಹೊಡೆಯುವ, ಹೆಗಲಿಗೆ ಹಾಕಿದ ಬ್ಯಾಗಿಗೆ ಕೈ ಹಾಕಿ ಎಳೆಯುವ, ಕಳ್‌ನೋಟಕ್ಕೆ ಸ್ವಾಟೆ ತಿರುವ, ಪಯಣಿಗರಿಂದ ತುಂಬಿ ತುಳುಕುವ ಬಸ್ಸಿನಲ್ಲಿ ಸೀಟ್ ಹಿಡಿದು ಹೀರೋನಂತೆ ಪೋಜು ಕೊಡುವ, ಬರ್ತಡೇಗೆ ಎಲ್ಲರಿಗಿಂತ ಮೊದಲೇ ವಿಶ್ ಮಾಡಿ ಗಿಫ್ಟ್ ಕೊಡುವ ಹುಡುಗನ ಹುಚ್ಚತನದ ಆಸೆಗಳಿಗೆ ಮುಗುಳ್ನಗೆಯೊಂದನ್ನೇ  ಕಾಣಿಕೆಯಾಗಿ ಕೊಡುವ ಹುಡುಗಿಯ ದೊಡ್ಡಸ್ಥನ….!!

ಇಂತಹ ನೂರಾರು ದೃಶ್ಯಗಳನ್ನು ಬಸ್ಸಿನಲ್ಲಿ ಪಯಣಿಸುವ ನನ್ನಂತಹವನಿಗೆ ನಿಮ್ಮಂತಹವರಿಗೂ ಸಾಮಾನ್ಯವೇನಿಸುತ್ತದೆ.

      ಒಬ್ಬರನ್ನೊಬ್ಬರು ನೋಡುತ್ತಲೇ ಪ್ರೇಮ ಸಲ್ಲಾಪಕ್ಕೆ ನಾಂದಿ ಹಾಡುತ್ತಾರೆ. ಹೊಸ ಬದುಕಿಗಾಗಿ ಸದಾ ಆಸೆ ಕಂಗಳಿAದ ನೋಡುತ್ತ ಬದುಕು ಕಟ್ಟಿಕೊಳ್ಳುವ ಸಲವಾಗಿ ಅಲ್ಲದಿದ್ದರೂ.. ಪ್ರೇಮದ ಜೋಡಿಗಳು ಜಗತ್ತಿನ ಯಾವ ಅಡ್ಡಗೋಡೆಗಳನ್ನು ಅವರು ಗಮನಿಸುವುದೇ ಇಲ್ಲ. ತಾವಾಯ್ತು ತಮ್ಮ ಪ್ರೀತಿಯಾಯಿತು. ಅದರಲ್ಲಿ ಮುಳುಗಿ ಹೋಗುತ್ತಾರೆ. ಇವಳು ಅಷ್ಟೇ ಯೌವನದ ಉತ್ತುಂಗದಲ್ಲಿರುವ ಯುವ ಮನಸ್ಸು ಹಕ್ಕಿಯಂತೆ ಹಾರುತ್ತ ಹೊಸ ಕನಸುಗಳನ್ನು ಹೆಣೆಯುತ್ತಾ ತನ್ನನ್ನು ತಾನು ಅವನಿಗೆ ಅರ್ಪಿಸಿಕೊಂಡು ಬಿಡುತ್ತಾಳೆ. ಯಾವಾಗ ಜಗತ್ತು, ಜಗತ್ತಿನ ಜನರು ತಮ್ಮ ಬಗ್ಗೆ ಗುಸುಗುಸು ಮಾತುಗಳು ಪ್ರಾರಂಭವಾಗುತ್ತವೆಯೋ ಆಗ ಅವರು ವಾಸ್ತವ ಬದುಕಿಗೆ ಮರಳಿ ಬರುತ್ತಾರೆ. ಜಗತ್ತಿನ ಜನರು ಆಡುವ ಕೊಂಕು ಮಾತುಗಳು ಕೆಲವು ಸಲ ಅಸಯ್ಯವೆನಿಸುತ್ತವೆ. ಅವರು ಬೇರೆಯವರ ಬಗ್ಗೆ ಆಡಿಕೊಳ್ಳುವುದೇ ಈ ಸಮಾಜದ ದೊಡ್ಡ ಕೆಲಸವೆಂದು ಭಾವಿಸಿಕೊಂಡು ಇರುತ್ತಾರೆ. ಇಂತಹ ಕೊಂಕು ಮಾತುಗಳಿಗೆ ತಲೆಕೆಡಿಸಿಕೊಳ್ಳದೆ ಮುಂದುವರಿದು ಪ್ರೀತಿಸುವ ಜೋಡಿಗಳು ತಮ್ಮ ಬದುಕನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರö್ಯಕ್ಕಾಗಿ   ಹಪಹಪಿಸುವಾಗ ಧುತ್ತನೆ ಎದುರಾಗುವುದು ಪಾಲಕರ ಅಭಿಪ್ರಾಯ..!!

ಮಡಿವಂತ ಪಾಲಕರು, ಸಂಪ್ರದಾಯಸ್ಥ ಹಲವಾರು ಆಚರಣೆಗಳ ಬಲೆಯಲ್ಲಿ ಬಿದ್ದು ತಮ್ಮದೇ ಅಡ್ಡಗೋಡೆಗಳನ್ನು ಸೃಷ್ಟಿ ಮಾಡಿಕೊಂಡು ಜಗತ್ತಿನ ಜನರೊಡನೆ ಒಬ್ಬರೆಂದು, ಜಗತ್ತಿನ ಆಗುಹೋಗುಗಳೊಡನೆ ಒಂದಾಗಿ ಬಿಡುತ್ತಾರೆ. ಇಷ್ಟು ದಿನಗಳವರೆಗೆ ಬೇರೆಯವರ ಮಕ್ಕಳ ಬಗ್ಗೆ ಆಡಿಕೊಂಡ ಕೊಂಕು ಮಾತುಗಳು. ಬೇರೆಯವರ ತಪ್ಪುಗಳನ್ನು ಎತ್ತಿ ಆಡಿರುವ ಬೈಗುಳಗಳು.  ಬೇರೆಯವರನ್ನು ಹೀಯಾಳಿಸಿದ ಪ್ರಸಂಗಗಳು. ನೆನಪು ಮಾಡಿಕೊಂಡು ಮನಸ್ಸು ವಿಲಿವಿಲಿ ಒದ್ದಾಡುತ್ತದೆ. “ಅಯ್ಯೋ ಇಷ್ಟು ದಿವಸ ಇನ್ಯಾರಿಗೋ ಅಂದುಕೊAಡ ನಗಾಡಿದ ನಾವುಗಳು. ಆದರೆ ಇಂದು ಆ ಬಲೆಯಲ್ಲಿ ಸಿಲುಕುವಂತೆ ನನ್ನ ಮಗ / ಮಗಳು ಕಾರಣರಾದರಲ್ಲ ಎಂದು ಚಿಂತಿಸುತ್ತಾರೆ.

      ಹೇಗಾದರೂ ಮಾಡಿ ಇವರನ್ನು ದೂರಮಾಡಿ ಅವರಿಗೆ ಹೊಸ ಬದುಕಿನ ದಾರಿಯನ್ನು ತೋರಿಸೋಣ. ಅವರು ಮಾಡುವ ತಪ್ಪುಗಳನ್ನು ತಿದ್ದಿ ಮತ್ತೆ ಅವರ ಗುರಿಯನ್ನು ನೆನಪಿಸಿಕೊಳ್ಳೋಣವೆಂದು ಪಾಲಕರು ಮನದಲ್ಲಿ ಸಾಕಷ್ಟು ವಿಚಾರಗಳನ್ನು ತುಂಬಿಕೊAಡಿರುತ್ತದೆ. ಆದರೆ “ನಾನು ಅವನಿಗಾಗಿ ಅವಳು ನನಗಾಗಿ” ಎಂದು ನಂಬಿಕೊAಡು ಒಬ್ಬರನ್ನೊಬ್ಬರು ಪರಸ್ಪರ ಸ್ವಾತಂತ್ರö್ಯದ ಹಕ್ಕಿಗಳಂತೆ ಪ್ರೀತಿಸುವ ಸಂಬAಧಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡು ಬಿಟ್ಟಿರುತ್ತಾರೆ. ಅವರು ಯಾವತ್ತೂ ಪಾಲಕರ ಮಾತಿಗೆ ಕಿವಿಗೊಡುವುದಿಲ್ಲ. “ನಾನೀಗ ಮೇಜರ್, ನನ್ನ ಬದುಕು ನನ್ನ ಆಯ್ಕೆ” ಎಂದು ಖಡಾಖಂಡಿತವಾಗಿ ಪಾಲಕರನ್ನು ದೂರ ತಳ್ಳಿ ಬಿಡುತ್ತಾರೆ. ಕಾನೂನಿನ ನೆರವಿನೊಂದಿಗೆ ಪಾಲಕರಿಂದ ದೂರವಾಗಿ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಂಗಾತಿಯೊಡನೆ ಹೆಜ್ಜೆ ಹಾಕುತ್ತಾರೆ. ಇದು ಆಧುನಿಕ ಜಗತ್ತಿನಲ್ಲಷ್ಟೇ ಅಲ್ಲ ಹಿಂದಿನಿAದಲೂ ನಡೆದುಕೊಂಡು ಬಂದ ವಾಸ್ತವ ಸತ್ಯ. ಪಾಲಕರಾದ ನಾವುಗಳು ಅರಿತುಕೊಳ್ಳಬೇಕಷ್ಟೇ.

     ಯೌವನದಲ್ಲಿ ಹುಟ್ಟುವ ಕೃಷ್, ಪ್ರೀತಿ, ಒಲವು ಅದು ಎಲ್ಲವನ್ನೂ ಮೀರಿಸಿ ಬಿಡುತ್ತದೆ. ಆದರೆ ಬಾಲ್ಯದಿಂದಲೂ ನಿಮಗಾಗಿ ನಿಮ್ಮ ಒಳಿತಿಗಾಗಿ ಹಗಲು-ಇರುಳು ಬೆವರು ಸುರಿಸಿ ದುಡಿಯುವ ತಂದೆ ತಾಯಿಗಳ ಮಾತಿಗೆ ಮನ್ನಣೆ ಇಲ್ಲದಾಗಿ ಬಿಡುತ್ತದೆ. ಇದು ಪಾಲಕರನ್ನು ಇನ್ನಷ್ಟು ಪ್ರಪಾತಕ್ಕೆ ತಳ್ಳುತ್ತದೆ. “ನನ್ನ ಕನಸು ನನ್ನ ಮಕ್ಕಳು” ಎಂದು ತಿಳಿದ ಪಾಲಕರು ಮಕ್ಕಳಿಗಾಗಿ ಸದಾ ಮರುಗುತ್ತಾರೆ.  ರೆಕ್ಕೆ ಬಲಿತ  ಹಕ್ಕಿ ಗೂಡಿನಿಂದ ಹಾರಿ ಹೋಗುವಂತೆ ಪಾಲಕರೆದೆಯಾಳದಿಂದ ಹಾರಿ ಹೋಗಲು ಪ್ರಯತ್ನಿಸುವ ಯುವ ಜೋಡಿಗಳು. ಒಂದು ಸಲ ಪಾಲಕರ ಬಗ್ಗೆ ಆಲೋಚಿಸುವುದಿಲ್ಲವಲ್ಲ..!!

      ನಮ್ಮನ್ನು ಸಾಕಿ ಸಲಹಿದವರು ನಮ್ಮ ತಂದೆ-ತಾಯಿ ಅಲ್ಲವೇ ಅವರ ಒಲವು ಇಲ್ಲದೆ ಇಷ್ಟೊಂದು ಸಾಧನೆ ಮಾಡಲು ಸಾಧ್ಯವೇ..? ಎನ್ನುವ ಸಣ್ಣ ಸಣ್ಣ ಪ್ರೀತಿಯ ಎಳೆಗಳು ಮನಸ್ಸುಗಳಲ್ಲಿ ಮೂಡಬೇಕಾಗಬೇಕಾಗಿತ್ತು. ಆದರೇ  ಸಂಪ್ರದಾಯ, ಧರ್ಮ, ಜಾತಿ, ಸಮಾಜ ಎನ್ನುವ ಅಡ್ಡಗೋಡೆಗಳ ಮಧ್ಯದಲ್ಲಿ ಬದುಕುವಾಗ ಎಲ್ಲಾ ಗೋಡೆಗಳಿಗಿಂತಲೂ ಮಿಗಿಲಾದುದು ಬಾಂಧವ್ಯವೆAದರೆ ಸಂಬAಧ..!!  “ನಾನು ಹೇಳಿದಂತೆ ನಡೆಯಬೇಕು ನನ್ನಂತೆಯೇ ನಡೆಯಬೇಕು” ಎನ್ನುವ ದೃಢ ಮಾತುಗಳನ್ನು ಬದಿಗೊತ್ತಿ ಪ್ರೀತಿಸುವ ಮನಸ್ಸುಗಳನ್ನು ಒಂದು ಮಾಡಬೇಕು. ಇಲ್ಲಿ ಜಾತಿ ಮುಖ್ಯ, ಧರ್ಮ ಮುಖ್ಯ ಎಂದುಕೊAಡು ಹೆತ್ತಮಕ್ಕಳನ್ನು ಮರ್ಯಾದೆ ಹತ್ಯೆಯ ಹೆಸರಿನಲ್ಲಿ ಕೊಲೆ ಮಾಡುವಂತಹ  ಅಷ್ಟೊಂದು ಕಠೋರ ನಿರ್ಧಾರ…!! ಇಂತಹ ಕಠೋರ ನಿರ್ಧಾರ ತೆಗೆದುಕೊಳ್ಳುವ ಮನಸ್ಸು ಮೃದುಗೊಳ್ಳ ಬೇಕಾದ ಅಗತ್ಯವಿದೆ. ಅವರಿಷ್ಟದ ಬದುಕನ್ನು ಅವರ ಆಯ್ಕೆಗೆ ಬಿಟ್ಟುಬಿಡಬೇಕು. ಕೊಲೆ ಮಾಡುವಂತಹ ನೀಚತನದ ಪರಮ ಪಾಪಿತನವು ಯಾವುತ್ತೂ ಒಬ್ಬ ತಂದೆಗೆ ಒಳ್ಳೆಯದಲ್ಲ. ಸಾಧ್ಯವಾದರೆ ಅವರನ್ನು ದೂರದಿಂದಲೇ ಹರಸಿ ಬೀಳ್ಕೊಟ್ಟು ಬಿಡಬೇಕು. ಕೊಲೆ ಮಾಡುವಂತಹ, ಹತ್ಯೆ ಮಾಡುವಂತಹ ಕುಕೃತ್ಯವನ್ನು ಎಸಗುವುದು ಮಾನವಂತರ ಲಕ್ಷಣವಲ್ಲ. ಅವರು ಎಲ್ಲಿಯೇ ಇರಲಿ.. ಚೆನ್ನಾಗಿರಲಿ. ಅವರ ಬದುಕು ಸುಂದರವಾಗಿರಲಿ ಎಂದು ಹಾರೈಸುವ ಒಲವಿನ ಹೃದಯ ಮೀಡಿಯಬೇಕಾಗುತ್ತದೆ. ಜಾತಿ ಧರ್ಮಕ್ಕಿಂತ ಮೀಗಿಲಾದುದು ಪ್ರೀತಿ..!! ಪ್ರೀತಿಯಂತಹ ಅವರ ಜೀವನ ಚೆನ್ನಾಗಿರಲಿ. ಒಲವಿನ ಹೃದಯಗಳು ಮಿಡಿಯದೇ ಹೋದರೆ ಬೆಸದ ಹೃದಯಗಳು ಛೀದ್ರವಾಗುತ್ತವೆ..!!

          ಯೌವನವೊಂದು ಸುಂದರವಾದ ಕಾಲಘಟ್ಟ. ಬೇಕಾದುದನ್ನು ಹಠಮಾಡಿಯಾದರೂ ಪಡೆದುಕೊಳ್ಳುವ ವಯಸ್ಸು. ಹುಚ್ಚುಕೋಡಿ ಮನಸ್ಸನ್ನು ನಿಯಂತ್ರಣ ಮಾಡಿಕೊಂಡು ಪಾಲಕರ ಒಪ್ಪಿಗೆಯೊಂದಿಗೆ ಹೆಜ್ಜೆಯಿಟ್ಟರೇ ಸೂಕ್ತ. ಪಾಲಕರು ಅಷ್ಟೇ ಮಕ್ಕಳ ಮನಸ್ಸನ್ನು ಅರಿತುಕೊಂಡು ಅವರ ಕನಸುಗಳಿಗೆ ಇಂಬುಕೊಡಬೇಕು. ಮಕ್ಕಳಿಗಿಂತ ದೊಡ್ಡ ಸಂಪತ್ತು ಇನ್ನೊಂದಿಲ್ಲ ಹಾಗೇಯೇ ಪಾಲಕರಿಗಿಂತ ದೊಡ್ಡದು ಯಾವುದು ಇಲ್ಲ ಎಂದು ಸಮನ್ವಯದೊಂದಿಗೆ ಬದುಕು ಖುಷಿ ಖುಷಿಯಾಗಿರಲಿ…


                  ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಲೇಖಕರ ಪರಿಚಯ

ಜೀವಸೂಚಿ :

ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ವೃತ್ತಿ :   ಶಿಕ್ಷಕರು

ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ

ವಿದ್ಯಾಭ್ಯಾಸ : ಎಮ್ ಬಿಇಡಿ

ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ,  ಗದ್ಯ, ಚುಟುಕು ಬರಹಗಳು ಇತ್ಯಾದಿ

ಅಂಕಣಗಳು ಬರಹಗಳು :

ವಿನಯವಾಣಿ ಪತ್ರಿಕೆಯಲ್ಲಿ

ಶೈಕ್ಷಣಿಕ ಸ್ಪಂದನ

ಯುವಸ್ಪಂದನ

ವಿಜಯ ವಿಕ್ರಾಂತ ಪತ್ರಿಕೆಯಲ್ಲಿ

ಒಲವಧಾರೆ

ರೆಡ್ಡಿಬಳಗ ಮಾಸಿಕದಲ್ಲಿ

ಚಿಂತನ ಬರಹ

ವಿವಿಧ ಪತ್ರಿಕೆಯಲ್ಲಿ

ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)

ಪ್ರಕಟಿತ ಕೃತಿಗಳು:

ಹೆಜ್ಜೆ ಮೂಡದ ಹಾದಿ

(ಕವನ ಸಂಕಲನ)

ನೆಲ ತಬ್ಬಿದ ಮುಗಿಲು

(ಚುಟುಕು ಸಂಕಲನ)

ಕಾಣೆಯಾದ ನಗುವ ಚಂದಿರ

(ಕವನ ಸಂಕಲನ)

ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ

 (ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)

ಅಚ್ಚಿನಲ್ಲಿರುವ ಕೃತಿಗಳು :

ಚಿಟ್ಟೆಗೆಣೆದ ಬಟ್ಟೆ

(ಹಾಯ್ಕು ಸಂಕಲನ)

ಅನುದಿನ ಚಾಚಿದ ಬಿಂಬ

(ದ್ವೀಪದಿಗಳು)

ಶಿಕ್ಷಣವೆಂಬ ಹಾರೋ ಹಕ್ಕಿ

(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)

ಹಾಫ್ ಚಹಾ

(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)

ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಲೇಖನಗಳ ಪ್ರಕಟ.

Leave a Reply

Back To Top