ಕಾವ್ಯ ಸಂಗಾತಿ
ಗಜಲ್
ದೇವರಾಜ್ ಹುಣಸಿಕಟ್ಟಿ
ಅವನ ಅಮಲು ಇಳಿಯಲಾರದಷ್ಟು ಮುತ್ತುಗಳ ಕುಡಿಬಾರದಿತ್ತು ಸಖಿ
ಮುತ್ತಿನ ಮತ್ತಿಗೆ ನನ್ನ ಚಿತ್ತ ನಿತ್ರಾಣ ಅವನೊಳಗೆ ಮುಳುಗಬಾರದಿತ್ತು ಸಖಿ
ಬೆಂಕಿಯ ಸೋಂಕು ಇಲ್ಲದೆಯೂ ಪ್ರೀತಿಯ ಉರಿಗೆ ತನು ತಲ್ಲಣ
ಕಾಯುವಿಕೆಯಲಿ ತೊಳಲಿ ಚಿಕ್ಕ ನೋಟಕ್ಕೆ ಸೆರೆಯಾಗಬಾರದಿತ್ತು ಸಖಿ
ಅಂತರಂಗದ ಕೊಳದ ತಿಳಿ ಕಲಕಿದ ಕಂಗಳ ತುಂಟಾಟ
ತುಸು ನಗು ಅಲೆಗಳು ಮತ್ತೆ ಏಳಲು ಬಿಡಬಾರದಿತ್ತು ಸಖಿ
ಈಗೀಗ ಒಂಟಿತನ ಕೂಡ ಎಷ್ಟು ನೆನಪುಗಳ ಹೊತ್ತು ಸುಖಿಸಿದೆ
ಈ ನೆನಪುಗಳು ಮತ್ತೆ-ಮತ್ತೆ ಅರಳಿ
ಪ್ರೀತಿಯಲಿ ಇಂಚಿಂಚು ನುಂಗಬಾರದಿತ್ತು ಸಖಿ
ಹುದುಗಿದ ಈ ಎದೆಯೊಳಗೆ ಮಿಡಿತವಾಗಲೇ ಬೇಕಿತ್ತೆ?
ಈ ದೇವನ ಅರಮನೆಯ ಸ್ವತ್ತು ಶೃಂಗಾರ ಅವನಾಗಬಾರದಿತ್ತು ಸಖಿ
Lovely lines