ಎದೆಯ ನೋವು

ಕಾವ್ಯ ಸಂಗಾತಿ

ಎದೆಯ ನೋವು

ದೀಪಿಕಾ ಚಾಟೆ

ಎದೆಯ ನೋವು

ಹೊಟ್ಟೆ ಕಿಚ್ಚಿಗೆ
ಮೈಭಾರದ ಒಜ್ಜೆ
ಕರುಳಿನ ಕಂದಗೆ
ಬೆಚ್ಚನೆಯ ಸಜ್ಜೆ

ಏನೂ ಅರಿಯದ
ಮುಗ್ಧತೆಯ ಮಗುವಿದು
ತಂಪಾದ ತಂಗಾಳಿಗೆ
ಅಮ್ಮನ ಜೋಳಿಗೆಯದು

ದುಡಿವ ಕೈಗಳಿಗಿಲ್ಲ ಬಿಡುವು
ದುಡಿಯದೇ ನಡೆಯದು ಬಾಳು
ಸೂರು ಪರರಿಗೆ ತನಗೆಲ್ಲ ಗೋಳು
ಅಣಕಿಸುವ ದೈವಕೂ ಬೆದರದು ಮನವು

ಎದೆಯ ಹಂದರದಲಿ
ಪುಟ್ಟ ಬಯಕೆ ಹಣಿಕಿಕ್ಕುತಿದೆ
ಮಗುವಿನ ಆರೈಕೆಯಲಿ
ತಾಯ ಹೃದಯ ಕರಗಿದೆ

ತನ್ನೊಡಲ ಬಳ್ಳಿ ನಲುಗದಿರಲಿ
ತನಗೆ ಏನೇ ಕಷ್ಟವಾದರೂ ಬರಲಿ
ಎದೆಯೊಡ್ಡಿ ನಿಲುವ ಛಾತಿ ಬೆಳೆದಿದೆ
ತುತ್ತು ಅನ್ನ ದುಡಿದು ಸಿಗಲಿ ಎಂದಿದೆ


One thought on “ಎದೆಯ ನೋವು

Leave a Reply

Back To Top