ಮಧ್ಯಮ ಮಾರ್ಗ

ಕಾವ್ಯ ಸಂಗಾತಿ

ಮಧ್ಯಮ ಮಾರ್ಗ

ಡಾ.ಶಿವಕುಮಾರ್ ಮಾಲಿಪಾಟೀಲ

ಎಡಕ್ಕೆ ಬಲಕ್ಕೆ ಬಾಗುವುದು ಸರಳ
ಮಧ್ಯದಲ್ಲಿ ಗಟ್ಟಿಯಾಗಿ ನಿಲ್ಲುವುದು ಕಷ್ಟ
ಎಡ ಬಲಕ್ಕೆ ಬಾಗುವುದು ಅಂಧಕಾರ
ಮಧ್ಯದಲ್ಲಿ ಸ್ಥಿರವಾಗಿ ನಿಲ್ಲುವುದು ಸ್ಥಿತಿ ಪ್ರಜ್ಞೆ ,ಅರಿವಿನ ಮಮಕಾರ

ಎಡ ಬಲಕ್ಕೆ ಬಾಗುವುದು
ದುರ್ಬಲ ಮನಸ್ಸು
ಮಧ್ಯದಲ್ಲಿ ನಿಲ್ಲುವುದು
ದೃಡ ಮನಸ್ಸು

ಎಡಕ್ಕೆ ಬಾಗಿದರೆ ಪ್ರಶಸ್ತಿ ,ಪದವಿ, ಪುರಸ್ಕಾರ
ಬಲಕ್ಕೆ ಬಾಗಿದರೂ ಪ್ರಶಸ್ತಿ ,ಪದವಿ ,ಅಧಿಕಾರ

ಎಡಕ್ಕೆ ಬಾಗಿದರೆ ಲಕ್ಷ ಲಕ್ಷ ಅಭಿಮಾನಿಗಳು
ಬಲಕ್ಕೆ ಬಾಗಿದರೆ ಕೋಟಿ ಕೋಟಿ ಅಭಿಮಾನಿಗಳು

ಮಧ್ಯದಲ್ಲಿ ಇದ್ದರೆ ಬಲದವರು ಅಪ್ಪರು
ಎಡದವರು ಒಪ್ಪರು
ಗಂಡು ಅಲ್ಲ ,ಹೆಣ್ಣು ಅಲ್ಲ ಎಂದು ಅಪಹಾಸ್ಯ…

ಇಬ್ಬರ ಕಣ್ಣಲ್ಲಿ ಮಧ್ಯದವರು
ದೇಶ ದ್ರೋಹಿಗಳು…
ಹೆತ್ತ ಭಾರತಾಂಬೆಗೆ ಗೊತ್ತು
ಮಧ್ಯದವರು ಯಾರೆಂದು..
ಎಲ್ಲಿಯೂ ಗಲಭೆ ಮಾಡದೆ
ಕಷ್ಟದಲ್ಲಿ ದೇಶ ರಕ್ಷಿಸುವ
ಹೆಮ್ಮೆಯ ಮಕ್ಕಳು …
ರೈತ , ಸೈನಿಕ ನಂತರ ಮಧ್ಯಮ ಮಾರ್ಗದವರೇ
ನಿಜ ದೇಶ ಪ್ರೇಮಿಗಳು…


Leave a Reply

Back To Top