ಕಾವ್ಯ ಸಂಗಾತಿ
ಒಲವ ಸೇತುವೆ
ನಿನ್ನ ಪ್ರೇಮದ ಕಡಲಲ್ಲಿ
ಮುಳುಗಿ ಹೋಗಿದ್ದೇನೆ
ಮಾತು ಮರೆತರೂ
ಮೌನಕ್ಕೆ ಒಲವಾಗುತ್ತದೆ
ಹೃದಯ ನೊಂದರು
ಒಲವು ಮದ್ದಾಗುತ್ತದೆ
ಮನದೊಳಗೆ ಮುಳ್ಳಿದ್ದರೂ
ಹೂವೊಂದು ಅರಳುತ್ತದೆ
ಬಿಸಿಲ ಬೇಗೆಗೆ ಒಣಗಿ ನಿಂತ
ಮರ ಮತ್ತೆ ಹಸಿರಾಗುತ್ತದೆ
ಒಲವೇ ನಗುವಾಗುತ್ತದೆ
ಒಲವೇ ಬಲವಾಗುತ್ತದೆ
ನಡುವೆ ಕಣಿವೆ,ಕಂದಕಗಳಿದ್ದರೂ
ಒಲವದೊಂದೇ ಸೇತುವೆಯಾಗುತ್ತದೆ.
ಒಲವು