ಸ್ವಗತ

ಕಾವ್ಯ ಸಂಗಾತಿ

ಸ್ವಗತ

ಮಾಲತಿ ಎಸ್.ಆರಾಧ್ಯ

Tears of A Doll, Woman Crying Pop Art New Media by Kirsty Hotson | Saatchi  Art

ಮಗಳ ಕಷ್ಟವು ತಾಯಿಯ ಕಣ್ಣೀರಲಿ
ಕಷ್ಟವು ಸ್ಥಿರವಲ್ಲ ಮಗಳೇ ನೀನು ಧೃತಿಗೆಡದೆ ಕಲ್ಲಾಗಿ ಎದುರಿಸು//

ತವರ ತೊರೆದು ಗಂಡನ ಮನೆ ಹೊಕ್ಕೆ ಅತ್ತೆಯ ಮನೆಯು ನಿನ ಜಗವು ನೋಡಮ್ಮ ಅತ್ತೇಗೆ ನೀ ಮಗಳಂತೆ //

ದುಃಖ ಬಂದಾಗ ಕಣ್ಣೀರು ಹಾಕದಿರು ತಪ್ಪೆಣಿಸಿದಾಗ ತಾಳೆ ಮಾಡು ಸೊಸೆ ನೀ ಹಿಡಿತದಲ್ಲಿಡು ನಾಲಿಗೆಯ //

ಬಾಳೆಲ್ಲಾ ಬಂಗಾರ ಬಾಳೊಂದು ಸಿಂಗಾರ ಮನವರಿತು ನಡೆಯಲು ಬಲುಸೊಗಸು ಸೊಸೆ ನಿನ್ನ ಮನಸ್ಸು ನಾ ಬಲ್ಲೆನು //

ದೂರದ ಬೆಟ್ಟವು ನುಣ್ಣಗೆ ನೋಡ ಕಷ್ಟಸುಖವೆಂಬೋದು ಗಳಿಗೆ ಮಾತ್ರವೇ ಅತ್ತೆಯು ಅನುಭವಿಸಿದ ನೋವುಗಳ //

ಬಾಳು ನಿನ್ನ ಚಂದ ಐತೆ ಅಕ್ಕತಂಗಿರ ಹರಿಕೆ ಬಲು ದೊಡ್ಡದು ಕೇಳಣ್ಣ ಅವರ ಪ್ರೀತಿ-ವಿಶ್ವಾಸಗಳಿಸಣ್ಣಾ//

ಹಸಿವಿಗೆ ಬಂಗಾರ ಮದ್ದಲ್ಲ ಮಗಳೇ ಅನ್ನವೇ ಹೊಟ್ಟೆಗೆ ಬಂಗಾರವು ಇದನ್ನು ಯಾವತ್ತೂ ಮರಿಬೇಡ //

ಹಣಕ್ಕಿಂತ ಗುಣ ಮುಖ್ಯ ಗುಣವೇ ಎಲ್ಲಾ ಗುಣವೊಂದಿರೆ ಎಲ್ಲವೂ ನಿನ್ನ ಕಾಲಬಳಿ//

ಹಸಿದವ ಬಂದರೆ ಹೋಗನುವುದುಂಟೆ ಕೊಟ್ಟು ನಿನ್ನ ಧರ್ಮ ಕಾಪಾಡು ಮಗಳೇ ನಿನ್ನಂಗಳ ತಣ್ಣಗಿರಲಿ //


ಮಾಲತಿ ಎಸ್.ಆರಾಧ್ಯ

3 thoughts on “ಸ್ವಗತ

  1. ಅರ್ಥಪೂರ್ಣವಾದ ಕವನ ಮೇಡಂ ಆಗಿದೆ ತಾಯಿ-ಮಗ ಮಗಳಿಗೆ ತಾಳ್ಮೆಯ ಮಾರ್ಗದಲ್ಲಿ ನಡೆಯುವಂತೆ ಹೇಳುವ ನಿಮ್ಕ ಕವನ ಸುಂದರ

Leave a Reply

Back To Top