ಗಜಲ್

ಗಜಲ್

ಬಾಗೇಪಲ್ಲಿ

ವಿಶ್ವ ಸುಂದರಿಯ ಹೋಲ್ವ ನಿನ ಕಣ್ಣಿಗೆ
ಉನ್ಮತ್ತ ನಾನು.
ಅವುಗಳ ಸನಿಹಾಶ್ರಯ ಬಯಸುತ
ಬೇಸತ್ತ ನಾನು

ಪ್ರೇಮದ ಅಮಲಿನಲಿ ಬಿದ್ದು ಲಜ್ಜಾ ವಿಹೀನನಾದೆ ಜಗಕೆ.
ನಿನ್ನ ಮೈಸೋಕಿದೊಂದು ವಸ್ತುವ ಪಡೆಯ
ಬೇಡುತ್ತಾ ನಾನು

ಗರತಿ ಎಂದರಿತೂ ಸಹ ನಿನ್ನ ರೂಪಕೆ ದಾಸನಾದ್ದು ತಪ್ಪು
ನಿನ್ನಿಷ್ಟ ಅಭೀಷ್ಟಗಳ ಅರಿಯದೆ ಪ್ರೇಮ
ಕೋರುತ್ತ ನಾನು

ಕಣ್ತಪ್ಪಿಸಿ ಓಡಾಡಿ ಇರ್ವರ ಗೌರವ ಕಾಪಾಡಿದೆ ಕೆಲವು ಬಾರಿ
ನಿನ ಹಿಂದೆ ಬಿಸಿಲ ಕುದುರೆಯಂತೆ ಬೆನ್ನಟ್ಟಿ
ಓಡುತ್ತ ನಾನು.

ಕೃಷ್ಣ ಹೇಳಿದ ಎನಗೆ ನಿನ್ನದು ಪ್ರೇಮವಲ್ಲ ಅನುಕಂಪವೆನುತ
ತಪ್ಪು ಗ್ರಹಿಕಯಲಿ ಸಲ್ಲದೆ ಸುತ್ತಿದೆ ಹಿಂದೆ
ಕಾಡುತ್ತ ನಾನು.


Leave a Reply

Back To Top