ಇಬ್ಬರದೂ

ಕಾವ್ಯ ಸಂಗಾತಿ

ಇಬ್ಬರದೂ

ಉಮಾ

ಒಂದು ಅಲೆ ನಿನ್ನದು
ಒಂದು ಅಲೆ ನನ್ನದು
ಬೆರೆಸುವ ಕಡಲು ಇಬ್ಬರದು

ಒಂದು ಕದ ನಿನ್ನದು
ಒಂದು ಕದ ನನ್ನದು
ನಡುವಿನ ಕೋಣೆಯು ಇಬ್ಬರದು

ಒಂದು ಹನಿ ನಿನ್ನದು
ಒಂದು ಹನಿ ನನ್ನದು
ಸುರಿಯುತಿಹ ಮಳೆ ಇಬ್ಬರದು

ಒಂದು ಅಕ್ಷರ ನಿನ್ನದು
ಒಂದು ಅಕ್ಷರ ನನ್ನದು
ಬರೆದಿರೊ ಕವಿತೆ ಇಬ್ಬರದು


Leave a Reply

Back To Top