ಗಜಲ್

ಗಜಲ್

ಬಾಗೇಪಲ್ಲಿ

ನಡೆಸಿಹ ಜೀವನವ ನಮಗೆ ಅರ್ಥೈಸಲು ಸಮಯವಿಲ್ಲ
ಪ್ರತಿಕ್ಷಣ ಕಳಕಳಿ ಇಲ್ಲದೆಯೆ ಬದುಕಲು ಸಮಯವಿಲ್ಲ

ಟೊಂಗೆ ಅಡಿಯಲಿ ಕುರಿ ಹಸುಗಳು ನೆರಳ ಅನುಭವಿಸಿವೆ
ನಿಲುವುದೇನ್! ಅದ ನೋಡಿ ಸವಿಯಲು ತುಸು ಸಮಯವಿಲ್ಲ

ಪುಟ್ಟ ಅಳಿಲು ತನ್ನಾಹಾರವ ಹುಲ್ಲ ಅಡಿ ಹುದುಗಿಸುತಿದೆ
ಹಾದು ಸಾಗುವವರು ಹಸಿರು ವೀಕ್ಷಿಸಲು ಸಮಯಲಿಲ್ಲ

ಬೆಳ್ಳಾನೆ ಬಿಸಿಲಿಗೆ ಹೊಳೆ ನದಿ ತೊರೆ ನೀರ್ ಫಳಫಳಗುಟ್ಟಿವೆ
ಹಗಲು ತಾರೆಗಳು! ಅವುಗಳ ಲೋಕಿಸಲು ಸಮಯವಿಲ್ಲ

ಸಿಂಗರಿಸಿದ ಶೋಡಷಿ ನಾಟ್ಯದ ಪಾದ ಥಕ ಥೈ ಕುಣಿದಿವೆ
ಮನಕೆ ಕಲಾ ಸೌಂದರ್ಯವ ಸವಿಯಲು ಸಮಯವಿಲ್ಲ

ಬಾಳ ಸಂಗಾತಿ ಕಣ್ಣಲಿ ಸೃಜಿಸಿ ತುಟಿಯಲಿ ವಿರಾಜಿಸಿತು ನಗೆ
ಎನೂ ವ್ಯಯಿಸದೆ ಬಾಯಿ ಚಪ್ಪರಿಸುತ ಭೋಗಿಸಲು ಸಮಯವಿಲ್ಲ.

ರೊಕ್ಕ ಒಂದನೆರಡು ಎರಡನು ಇಪ್ಪತ್ತಾಗಿಸೆ ಕೌಶಲ್ಯ ಉಂಟು
ಕೃಷ್ಣ ಬುದ್ದಿಗೇಡಿಗೆ ಕಾಸು ಎಣಿಸಲು ಸಮಯವಿಲ್ಲ


Leave a Reply

Back To Top