ಗಜಲ್
ಯಾಕೊಳ್ಳಿ ಯ.ಮಾ
ಬೇಡನ ಬಾಣದತ್ತಲೇ ನೋಟ ಗಿಡದ ಮೇಲೆ ಕುಳಿತ ಹಕ್ಕಿಗೆ
ಎಳೆದ ಬೆರಳ ತುದಿಯಲೆ ಅಡಗಿದೆ ಜೀವ ಕಣ್ಣು ಸತತ ಹಕ್ಕಿಗೆ
ಯಾವುದೋ ಬೇಡನ ಬಾಣದ ತುದಿಗೆ ಒಂದು ದಿನ ಬಲಿಯಾಗುವುದು
ಕೊರಳ ಗುಟುಕು ಹಾಕಿ ಸಾಕಬೇಕು ಒಡಲ ಮರಿಗಳ ಧ್ಯಾನ ಬೆರೆತ ಹಕ್ಕಿಗೆ
ಒಂದಲ್ಲ ಒಂದು ಪಕ್ಷಿಯ ಮೇಲೆ ನಿಗಾ ಇರಿಸಿಕೊಂಡ ವ್ಯಾಧ
ತಿಳಿದಿಲ್ಲ ತನ್ನ ಜೀವ ಬಲಿಯಾಗಬೇಕಿದೆ ಕಾಲ ಕೆಳಗಿನ ಸರ್ಪದ ಜೀವಿತ ಹಕ್ಕಿಗೆ
ತಿಳಿಯದೆ ಓಡುತಿದೆ ವೇಗದಿ ಕೊಲೆಯ ಸರಮಾಲೆ ಒಂದರ ಹಿಂದೆ ಒಂದು
ಬಿಲ್ಲಿನಿಂದ ಹೊರಟ ಕ್ರೂರನ ಬಾಣ ಉರಿ ತಪ್ಪಲೆಂಬ
ಪ್ರಾರ್ಥನೆ ಅವಿತ ಹಕ್ಕಿಗೆ
ಮುರಿಯಲಿ ವ್ಯಧನ ಕೈಯ ಬಿಲ್ಲು, ಹರಿಯಲಿ ಹೂಡಿದ ಬಲೆ
ಮೊಳಗಲಿ ಜೀವ ಜಯದ ಹಾಡು ಯಯಾ,ಬೇರೆನಿಲ್ಲ ಬಯಕೆ ಅರಿತ ಹಕ್ಕಿಗೆ