ಕ್ಷಮೆ ಅನುವಾದಿತ ಕವಿತೆ

ಅನುವಾದ ಸಂಗಾತಿ

ಕ್ಷಮೆ
(ನಝ್ವಾ ಜುಬೇನ್ ಅವರ ಆಂಗ್ಲ ಸಾಲುಗಳ ಭಾವ)

ಅನುವಾದಕರು:

ಬಾಗೇಪಲ್ಲಿ

ಕ್ಷಮಿಸಿಬಿಡಿ ಅವರನ್ನು

ಅವರು ಕ್ಷಮೆ ಬೇಡಿದರೆಂದಲ್ಲ
ಅವರು ಕ್ಷಮಾರ್ಹರೆಂದಲ್ಲ
ಅವರು ನಿಮಗಿತ್ತ ನೋವು ಕ್ಷಮೆಯ ಪರಿದಿಯಳೊಗಿದೆ ಎಂದಲ್ಲ.

ಕ್ಷಮಿಸಿ ಅವರ ಏಕೆನೆ
ಕ್ಷಮಿಸದೆ ನೀವು ಮುನ್ನಡೆಯಲಾರಿರಿ ಎಂಬ ಕಾರಣದಿ

ಬದುಕು ಹೂವಿನ ಹಾದಿಯಂತಲ್ಲವೆಂದು ನಿಮ್ಮರಿವಿಗೆ ತರುವ ಜ್ಞಾನಪಕ್ವತೆ ನಿಮ್ಮಲ್ಲಿದೆ ಎಂಬುದ ತೋರುವುದಕ್ಕಾಗಿ!

ಅಂತೆಯೇ
ನಿಮ್ಮ ಕ್ಷಮಾಗುಣ ನಿಮ್ಮನ್ನು ಬಿಂಬಿಸುತ್ತದೆ!
ಕ್ಪಮೆ ಪಡೆದವರನ್ನಲ್ಲ

ಪ್ರತಿಯೋರ್ವನ ಬಿಂಬಿಸುವುದು ಅವನ ನಡವಳಿಕೆ !


Leave a Reply

Back To Top