ಕಾವ್ಯ ಸಂಗಾತಿ
ಅರುಣಾ ನರೇಂದ್ರ
ಸಾಮ್ಯತೆ
ನಾನೂ ನಿನ್ನ ಹಾಗೇನೆ!
ಮೊಳಕೆಯೊಡೆಯುತ್ತಲೆ
ಹೋರಾಡುತ್ತೇನೆ
ತಾಯ ಗರ್ಭದೊಳಗಿಂದ
ಹೋರಾಟ ಅನಿವಾರ್ಯವೆಂದೇ
ಶಕ್ತಿ ಪಡೆಯುತ್ತೇನೆ
ಆಳವಾಗಿ ಬೇರಿಳಿಸಿ ಬೆವರಿಳಿಸಿ
ಗಟ್ಟಿಯಾಗಿ ನಿಲ್ಲಲು!
ಎದೆ ನಡುಗಿಸುವ
ಬೆಂಕಿ-ಬಿರುಗಾಳಿಗಿಂತಲೂ
ಹೆಚ್ಚು ಭಯಪಡುತ್ತೇನೆ
ಮುರಿಯುವ ಚಿವುಟುವ ಕೈಗಳಿಗೆ
ಭಾವನೆಗಳ ಕಳೆದುಕೊಂಡು
ಬೆತ್ತಲಾದಾಗಲೆಲ್ಲಾ ಕಾಣುತ್ತೇನೆ
ನಿನ್ನದೇ ಅಸ್ಥಿಪಂಜರ
ಎಂತಹ ಸಾಮ್ಯತೆ
ಮೈನವಿರೇಳಿಸುವ
ಕನಸುಗಳ ಚಿಗುರಿಸುವ
ಬದುಕಿಗೆ ಬಣ್ಣವೇರುವ
ಘಳಿಗೆಗಾಗಿ ಕಾಯುತ್ತೇನೆ
ಬದುಕು ಭಾರವ ಹೊತ್ತು
ಬೀಗುತ್ತೇನೆ ತೂಗುತ್ತೇನೆ
ಹೂವಾಗಿ ಕಾಯಾಗಿ ಹಣ್ಣಾಗಿ
ಮಣ್ಣಲ್ಲಿ ಮತ್ತೆ ಮೊಳಕೆಯಾಗುತ್ತೇನೆ
ತುಂಬಾ ಚನ್ನಾಗಿದೆ ಮೆಡಂ
ತುಂಬಾ ಚೆನ್ನಾಗಿದೆ
Very beautiful poem mam
Very very nice Post thanks a lot for shearing it
ನೈಸ್ ಲೈನ್ಸ ಮೇಡಂ