ಗಜಲ್
ದೇವರಾಜ್ ಹುಣಸಿಕಟ್ಟಿ.
ಯುದ್ಧವೆಂದರದು ಸಾವಿನ ಸಂತೆಯಂತೆ ಗೆಳೆಯ
ಪ್ರೀತಿಯೆಂದರಲ್ಲಿ ಮರಣದ ಅಪ್ಪುಗೆಯಂತೆ ಗೆಳೆಯ
ಬಿಕರಿಗಿಟ್ಟ ವಸ್ತುಗಳು ಯಾವವೆಂದು ಕೇಳಬೇಡ
ಉಸಿರಿಗೊಂದು ಉಸಿರ ತೆಗೆದರೊಂದು ಬೆಲೆಯಂತೆ ಗೆಳೆಯ
ಕೊಳ್ಳುವುದು ಮಾರುವುದಿದ್ದೆಯಿದೆ ನೆಲ ಮಸಣವಾಗುವವರೆಗೆ
ಅದೆಷ್ಟೋ ಉಪಾದಿಗಳು ಮರಣ ಶಯ್ಯಗಿದೆಯಂತೆ ಗೆಳೆಯ
ನಾಯಕರೆನಿಸಿಕೊಂಡ ಶವಾಗಾರದ ಮಜನೂಗಳಿಗೆ ಅದೊಂದು ಜೂಜಾಟವೇ?
ಮದ್ದು ಗುಂಡುಗಳ ವ್ಯಾಪಾರಕ್ಕಾಗಿ ಸಮರವಂತೆ ಗೆಳೆಯ
ಸುಳ್ಳಲ್ಲ ನಿಜ ದೇಶ ಪ್ರೇಮದ ಪುಕಾರು ಹರಾಜಿಗಿದೆಯೇ..?
ರಕ್ತದಾಹಕ್ಕೆ ಇನ್ನೊಂದು ಹೆಸರು ಬೇಕಾಗಿತ್ತಂತೆ ಗೆಳೆಯ
ನೆತ್ತರಿಗೆ ಶೌರ್ಯದ ಕಪ್ಪು ಕಲೆ ಅಂಟಿದೆ ದಿಕ್ಕಾರವೆನ್ನಲಾಗದೆ..?
ಹಿಡಿ ಶ್ಯಾಪವಿರಲಿ ಜೀವತೆಗೆದವರ ಲೆಕ್ಕದಲಿ ವೀರನಂತೆ ಗೆಳೆಯ
ಸ್ವರ್ಗದಲ್ಲಿ ನೂಕು ನುಗ್ಗುಲು ರಣರಂಗದ ಅವಾಂತರ ನೋಡು
‘ದೇವ ‘ನಿಗೂ ದಫನ್ ಮಾಡುವ ಗಡಿಬಿಡಿಯಂತೆ ಗೆಳೆಯ
Nice