ಅಂಕಣ ಬರಹ

ಸಾಧಕಿಯರ ಯಶೋಗಾಥೆ

ಗಾಂಧಿವಾದಿ ನಿರ್ಮಲಾ ದೇಶಪಾಂಡೆ (1929-2008)

ನಿರ್ಮಲಾ ದೇಶಪಾಂಡೆಯವರು ಗಾಂಧಿವಾದಿ ತತ್ವಗಳನ್ನು ಅನುಸರಿಸಿ ಭಾರತದ ಸುಪ್ರಸಿದ್ಧ ಸಮಾಜ ಸೇವಕಿಯಾಗಿರುವರು. ಇವರು ತಮ್ಮ ಜೀವನವನ್ನು ಮಹಿಳೆಯರಿಗಾಗಿ, ಬುಡಕಟ್ಟುಗಳಿಗಾಗಿ, ಭಾರತದಿಂದ ಹೊರಹಾಕಲ್ಪಟ್ಟ ನಿರ್ಗತಿಕ ಜನರಿಗಾಗಿ, ಕೋಮು ಸೌಹಾರ್ಧತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತಮ್ಮನ್ನು ಮುಡುಪಾಗಿಟ್ಟಿದ್ದರು.

ನಿರ್ಮಲಾ ದೇಶಪಾಂಡೆಯವರು 19 ಅಕ್ಟೋಬರ್ 1929ರಲ್ಲಿ ನಾಗಪುರದಲ್ಲಿ ಜನಿಸಿದರು. ಇವರ ತಾಯಿ ವಿಮಲಾ. ತಂದೆ ಪುರುಷೋತ್ತಮ ಯಶವಂತ ದೇಶಪಾಂಡೆ. ಪುರುಷೋತ್ತಮ ದೇಶಪಾಂಡೆಯವರು 1962ರಲ್ಲಿ ಮರಾಠಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ‘ಅನಾಮಿಕಾಚಿ ಚಿಂತನಿಕಾ’ ಎಂಬ ಕೃತಿಗೆ ಪಡೆದಿರುವರು.

ನಿರ್ಮಲಾ ತಮ್ಮ ಶಿಕ್ಷಣವನ್ನು ನಾಗಪುರದಲ್ಲಿ ಮುಗಿಸಿದರು. ರಾಜ್ಯಶಾಸ್ತ್ರ ವಿಷಯದಲ್ಲಿ ಎಂ.ಎ ಪದವಿಯನ್ನು ಪಡೆದರು. ಇವರು ಪುಣೆಯ ಫರ್ಗುಸ್ಸನ್ ಕಾಲೇಜಿನಲ್ಲಿ ಓದಿದರು. ಓದಿನ ಬಳಿಕ ನಾಗ್ಪುರದ ಮೋರಿಸ್ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಷಯವನ್ನು ಬೊಧಿಸಿದರು.

1952ರಲ್ಲಿ ವಿನೋಭಾ ಭಾವೆಯವರು ನಡೆಸಿದ ಭೂದಾನ ಚಳುವಳಿಯಲ್ಲಿ ನಿರ್ಮಲಾ ದೇಶಪಾಂಡೆಯವರು ಕೂಡ ಸೇರಿಕೊಂಡರು. “ಗ್ರಾಮ ಸ್ವರಾಜ್” ಎಂಬ ಗಾಂಧೀಜಿಯವರ ಪರಿಕಲ್ಪನೆಯನ್ನು ನಿರ್ಮಲಾರವರು ಭಾರತದಾದ್ಯಂತ ತಲುಪಿಸಲು ಸುಮಾರು ನಲವತ್ತು ಸಾವಿರ ಕಿಲೋಮೀಟರ್‍ನಷ್ಟು ಪಾದಯಾತ್ರೆಯನ್ನು ಮಾಡಿದರು. ಗಾಂಧೀಜಿಯವರ ತತ್ವಗಳನ್ನು ಅನುಸರಿಸುವುದು ತುಂಬಾ ಕಷ್ಟ ಎಂಬುದು ಗೊತ್ತಿದ್ದರೂ ನಿರ್ಮಲಾರವರು ಅದನ್ನು ಬಿಡದೆ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಿದರು. “ನಿಜವಾದ ಪ್ರಜಾಪ್ರಭುತ್ವ ಸಿಗುವುದು ಯಾವಾಗ ಎಂದರೆ ಗ್ರಾಮಗಳ ಕಡೆಗೆ ಮತ್ತು ಸಮಾಜದ ಕಟ್ಟಕಡೆಯ ಜನರಿಗೆ ತಲುಪಿದಾಗ” ಎಂದು ನಂಬಿದ್ದರು.

ಪಂಜಾಬ್ ಮತ್ತು ಕಾಶ್ಮೀರಗಳಲ್ಲಿ ಹಿಂಸಾಚಾರವು ಉತ್ತಂಗಕ್ಕೆ ಏರಿದಾಗ ಅಲ್ಲಿಯ ಶಾಂತಿಗಾಗಿ ಮೆರವಣೆಯನ್ನು ತೆಗೆದರೆ ಅದರ ಇಂದಿನ ಚೇತನ ನಿರ್ಮಲಾರವರೇ ಎಂದು ತಿಳಿದುಬರುತ್ತಿತ್ತು. 1994ರಲ್ಲಿ ಕಾಶ್ಮೀರಕ್ಕೆ ಶಾಂತಿ ಮಿಷನ್ ಮತ್ತು 1996ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಸಭೆಯನ್ನು ಆಯೋಜಿಸುವಲ್ಲಿ ಇವರ ಪಾತ್ರವು ಪ್ರಮುಖವಾಗಿದೆ. ನಿರ್ಮಲಾರವರು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಾಮರಸ್ಯಕ್ಕಾಗಿ ನಿರಂತರ ಪ್ರಯತ್ನವನ್ನು ಮಾಡಿದರು. ನಿರ್ಮಲಾರವರು ಐತಿಹಾಸಿಕ ಸಂಘಟನೆಯಾದ ಹರಿಜನ ಸೇವಾ ಸಂಘದ 1983 ರಿಂದ ಸಾಯುವವರೆಗೂ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದರು. ನಿರ್ಮಲಾರವರು ಅನೇಕ ಸಾಮಾಜಿಕ ಸೇವಾ ಸಂಸ್ಥೆಗಳೊಂದಿಗೆ ಸಂಬಂಧವನ್ನು ಹೊಂದಿದ್ದರು. ಅಲ್ಲದೇ ನಿರ್ಮಲಾರವರು “ಅಖಿಲ ಭಾರತ ರಚನಾತ್ಮಕ್ ಸಮಾಜ”ವನ್ನು ಸ್ಥಾಪಿಸಿದರು. ಇದು 2004 ರಲ್ಲಿ ರಾಷ್ಟ್ರೀಯ ಕೋಮು ಸಾಮರಸ್ಯ ಪ್ರಶಸ್ತಿಯನ್ನು ಪಡೆದಿತು.

2001ರಲ್ಲಿ ಭಾರತೀಯ ಸಂಸತ್ತಿನ ಮೇಲೆ ಭಯೋತ್ಪಾದಕ ದಾಳಿ ನಡೆಸಿ ಶಿಕ್ಷೆಗೆ ಒಳಗಾಗಿದ್ದ ಅಪ್ಸಲ್ ಗುರುವಿಗೆ ಕ್ಷಮೆಯಾಚಿಸಿದರು. ತಮ್ಮ ಇಡೀ ಜೀವನವನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಇವರು ರಾಜಕೀಯ ಕ್ಷೇತ್ರದಲ್ಲೂ ಕೂಡ ತಮ್ಮ ಸೇವೆಯನ್ನು ಸಲ್ಲಿಸಿರುವರು.

ನಿರ್ಮಲಾ ದೇಶಪಾಂಡೆಯವರು ಎರಡು ಬಾರಿ ಭಾರತೀಯ ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರಾಗಿದ್ದರು. ಆಗಸ್ಟ್ 1997 ಮತ್ತು ಜೂನ್ 24 2004 ರಿಂದ 2010 ರವರೆಗೆ. 2007ರಲ್ಲಿ ಇವರ ಹೆಸರನ್ನು ಇಂಡಿಯನ್ ಪ್ರಸಿಡೆಂಟ್ ಸ್ಥಾನಕ್ಕೆ ಪರಿಗಣಿಸಲಾಗಿತ್ತು.

ನಿರ್ಮಲಾ ದೇಶಪಾಂಡೆಯವರು ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಇವರು ಹಿಂದಿಯಲ್ಲಿ ಹಲವಾರು ಕಾದಂಬರಿಗಳನ್ನು ಬರೆದಿರುವರು. ಮಹಿಳೆಯರ ವಿಮೋಚನೆಯನ್ನು ಕೇಂದ್ರ ಬಿಂದುವಾಗಿಟ್ಟುಕೊಂಡು “ಸಿಮೆಂಟ್” ಕಾದಂಬರಿಯನ್ನು ಬರೆದಿರುವರು. ಚಿಮ್ಲಿಗ್ ಎಂಬ ಗ್ರಂಥವನ್ನು ಚೀನಾದ ಸಾಂಸ್ಕøತಿಕ ಆಚÀರಣೆಗಳನ್ನು ಕೇಂದ್ರವಾಗಿಟ್ಟುಕೊಂಡು ರಚಿಸಿರುವರು. ಅಲ್ಲದೇ ಕೆಲವು ನಾಟಕಗಳು ಮತ್ತು ಪ್ರವಾಸ ಕಥನಗಳನ್ನು ಕೂಡ ಬರೆದಿರುವರು. ಇವರು 1985ರಲ್ಲಿ ನಿತ್ಯಾನುತನ್ ಎಂಬ ನಿಯತಕಾಲಿಕೆಯನ್ನು ಪ್ರಾರಂಭಿಸಿದರು. ಈ ಪತ್ರಿಕೆಯು ವಿಶ್ವ ಶಾಂತಿ ಮತ್ತು ಅಹಿಂಸೆಗೆ ಸಂಬಂಧಿಸಿದ ವಿಷಯಗಳನ್ನು, ಆಲೋಚನೆಗಳನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ನಿಟ್ಟಿನಲ್ಲಿ ಪ್ರಕಟಗೊಳ್ಳುತ್ತಿತ್ತು. 2008 ರಲ್ಲಿ ನಿರ್ಮಲಾರವರ ಮರಣಾ ನಂತರವು ಹರಿಯಾಣದ ಸಮಾಜಿಕ ಕಾರ್ಯಕರ್ತ ರಾಮ್ ಮೋಹನ್ ರೈಯವರು ಈ ಪತ್ರಿಕೆಯನ್ನು ಪ್ರತಿ ತಿಂಗಳು ಪ್ರಕಟಿಸುತ್ತಿದ್ದಾರೆ.

ನಿರ್ಮಲಾ ದೇಶಪಾಂಡೆಯವರಿಗೆ ದೊರೆತ ಪ್ರಶಸ್ತಿಗಳು :

2005 ರಲ್ಲಿ ರಾಜೀವ್ ಗಾಂಧಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ    2005 ರಲ್ಲಿ ನೋಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶಿತರಾಗಿದ್ದರು        2006 ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ಪಡೆದಿದ್ದಾರೆ    2007 ರಲ್ಲಿ ಬನಾರ್ಸಿದಾಸ್ ಗುಪ್ತಾ ರಾಷ್ಟ್ರ ಗೌರವ ಪುರಸ್ಕಾರವನ್ನು ಸ್ವೀಕರಿಸಿರುವರು      2009 ರಲ್ಲಿ ಆಗಸ್ಟ್ 13 ರಲ್ಲಿ ಪಾಕಿಸ್ತಾನದ ಮೂರನೇ ಅತ್ಯುತ್ತಮ ನಾಗರೀಕ ಗೌರವಗಳಲ್ಲಿ ಒಂದಾದ ಸಿತಾರಾ-ಇ-ಇಮ್ತಿಯಾಜ್ ಎಂಬ ಪ್ರಶಸ್ತಿಯನ್ನು ಪಾಕಿಸ್ತಾನದ ಸ್ವಾತಂತ್ರ್ಯದಿನದ ಮುನ್ನ ದಿನದಂದು ಪಡೆದರು

ನಿರ್ಮಲಾ ದೇಶಪಾಂಡೆಯವರ ಹೆಸರಿನಲ್ಲಿ ರಾಮ್ ಮೋಹನ್ ರೈ ರವರು ಪಾಣಿಪತ್ (ಹರಿಯಾಣ)ನಲ್ಲಿ ಒಂದು ಸಣ್ಣ ಮ್ಯೂಸಿಯಂ ಸ್ಥಾಪಿಸಿರುವರು. ಈ ಮ್ಯೂಸಿಯಂನಲ್ಲಿ ನಿರ್ಮಲಾರವರಿಗೆ ದೊರೆತ ಪ್ರಶಸ್ತಿಗಳು, ಗೌರವಗಳು ಮತ್ತು ಅವರ ವಸ್ತುಗಳನ್ನು ಇಡಲಾಗಿದೆ.

……

ಡಾ.ಸುರೇಖಾ ರಾಠೋಡ್

ಸುರೇಖಾ ರಾಠೋಡ್ ಎಂ.ಎ , ಎಂ.ಫಿಲ್,ಪಿಎಚ್ ಡಿ, ಪಿಡಿಎಫ್. ಪದವಿ ಪಡೆದು ವಿಜಾಪುರ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಿದ್ದಿ ಸಮುದಾಯದ ಲಿಂಗ ಸಂಬಂಧಿ ಅದ್ಯಯನ ” ಎಂಬ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. “ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ” ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದು ಅವರ ಮಹಿಳೆಯರ ಮೇಲೆ ಬೀರಿದ ಬೆಳಕಿಗೆ ಸಾಕ್ಷಿಯಾಗಿದೆ. “ಹರಣಶಿಕಾರಿ ಮಹಿಳೆಯರ ಸ್ಥಾನಮಾನ” ಎಂಬ ವಿಷಯದ ಕುರಿತು ಪಿಡಿಎಫ್ (ಸಂಶೋಧನೆ ) ಮುಂದುವರಿದಿದೆ. ಹೊರ ತಂದ ಪುಸ್ತಕಗಳು: ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ, ದಲಿತ ಸಾಹಿತ್ಯ ಪರಿಷತ್ತಿ ಗದಗ ಪ್ರಕಟಿಸಿದೆ.೨. ದಲಿತ ಮಹಿಳಾ ಕಾರ್ಮಿಕರ ಸಮಸ್ಯೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದೆ ೩. ಮಹಿಳಾ ಅದ್ಯಯನ, ಯುಜಿಸಿ ನೆಟ್ -ಜೆಆರ್ ಎಫ್,ಕೆಸೆಟ್ ಪಠ್ಯ ಮತ್ತು ಪ್ರಶ್ನೆ ಪತ್ರಿಕೆಗಳು’ ಡಿವಿಕೆ ಪ್ರಕಾಶನ ಮೈಸೂರು ಪ್ರಕಟಿಸಿವೆ

Leave a Reply

Back To Top