ವಿರಹ….

ಕಾವ್ಯ ಸಂಗಾತಿ

ವಿರಹ….

ಒಲವು

ನಿನ್ನ ಕಾಣಲು
ಕಾತರಿಸಿದ್ದೇನೆ ಗೆಳೆಯ

ನೀ ದೂರಾದಷ್ಟು
ನಾ ಸನಿಹವಾಗುವೆ

ನಿನ್ನ ನಗು
ನೋವ ಮರೆಸುತ್ತದೆ

ನಿನ್ನ ನೆನಪುಗಳು
ಮುಲಾಜಿಲ್ಲದೆ ಲಗ್ಗೆ ಹಾಕುತ್ತವೆ

ನನ್ನೆದೆಯಲ್ಲೀಗ ಹೊತ್ತಿಕೊಂಡಿದೆ
ವಿರಹದ ಬೆಂಕಿ

ನಂದಿಸಲು ಜಲ ಬೇಕಿಲ್ಲ
ಒಲವ ಸಿಂಚನ ಬೇಕಲ್ಲ

ನಿನ್ನ ಕಾಣಲು
ಕಾತರಿಸಿದ್ದೇನೆ ಗೆಳೆಯ….


Leave a Reply

Back To Top