ಗಝಲ್

ಗಝಲ್

ಶಂಕರಾನಂದ ಹೆಬ್ಬಾಳ

Blind Love, Painting by Yashashri Rao | Artmajeur

ಸಟ್ಟ ಸವರಾತ್ರ್ಯಾಗ ಬೆನ್ನ ಹತ್ತಿದಂವ ನೀನು
ಬಟ್ಟ ಬಯಲಿನ್ಯಾಗ ಪ್ರೀತಿ ಬಿತ್ತಿದಂವ ನೀನು

ಕಟ್ಟ ಕಡಿಗಿ ಬೇತಾಳದಂಗ ಜೋಡಾಗಿಯಾಕ
ರಟ್ಟಿ ಹಿಡಕೊಂಡು ಅಂಗಾತ ಎತ್ತಿದಂವ ನೀನು

ತುಟ್ಟಿ ಕಾಲದಾಗೂ ನಿನ್ನಂತಾವ ಸಿಗತಾನೇನ
ಗಟ್ಟಿ ಮನಸಿಲ್ಲೆ ಕಣ್ಣಾಗ ಒತ್ತಿದಂವ ನೀನು

ಉಟ್ಟ ಬಟ್ಟಿಮ್ಯಾಲೆ ಊರಬಿಟ್ಟಿ ಬಂದೀನಿ
ಬುಟ್ಟಿ ಹೂಮಾಲಿ ತಲಿಗೆ ಸುತ್ತಿದಂವ ನೀನು

ರೊಟ್ಟಿ ಚಟ್ನಿಯಂಗ ಅಭಿನವನ ನುಡಿಗೋಳ
ಒಟ್ಟ ಬಿಡಲಾರ್ದ ದಿನಾ ಮುತ್ತಿದಂವ ನೀನು


One thought on “ಗಝಲ್

Leave a Reply

Back To Top