ಗಜಲ್
ಬಾಗೇಪಲ್ಲಿಕೃಷ್ಣಮೂರ್ತಿ
ಪ್ರಿಯೆ ನಡು ನೀರಲ್ಲಿ ಕೈ ಬಿಟ್ಟದ್ದು ಸರಿಯೆ
ನನ್ನ ಉತ್ಕಟ ಪ್ರೀತಿಯು ನಿನಗೆ ಹೊರೆಯೆ
ನಿನ್ನಂದಕೆ ನಾ ದಾಸನಾಗಿದ್ದು ತಪ್ಪಾಯಿತೇ
ಅದಕೆ ನಿನ್ನ ನಡೆ ಸರಿಯಾದ ದಾರಿಯೆ
ನಿನ್ನೆ ಮೊನ್ನೆಗಳ ಪರಚಯ ವಲ್ಲ ನಮ್ಮದು
ಅಷ್ಟು ಸುಲಭವಲ್ಲವದು ನನ್ನ ಮರೆಯೆ
ಕೆಲವುದಿನ ಸೈರಿಸಬಹುದೇನೋ ಪ್ರಿಯೆ
ಅಗಲಿಕೆಯ ನೋವಿನ್ನೂ ನೀ ಅರಿಯೆ
ಕ್ಷಮಯಾ ಧರಿತ್ರೀ ಎನ್ನವನು ಸದಾ ಕೃಷ್ಣ
ಬಗಯೆ ನಾ ನೀನು ಹೆಣ್ಣೆಂದು ನಾರಿಯೆ