ಹಾಯ್ಕುಗಳು

ಕಾವ್ಯ ಸಂಗಾತಿ

ಹಾಯ್ಕುಗಳು

ಭಾರತಿ ರವೀಂದ್ರ

೧)
ನೀಡು ಹೆಣ್ಣಿಗೆ:
ಗೌರವ, ನಿನ್ನ ಜನ್ಮ
ತಾಯಿ ಕೊಡುಗೆ.

೩) ಋಣಾನುಬಂಧ:
ಯೋಗ ವೇ ಸರಿ, ಯಾರ
ಪ್ರೀತಿ ಯಾರಿಗೆ?

೩) ಋಣಾನುಬಂಧ:
ಯೋಗ ವೇ ಸರಿ, ಯಾರ
ಪ್ರೀತಿ ಯಾರಿಗೆ?

೪) ಯೋಗ ಕೂಡಲು;
ನಿಲ್ಲದು ಯಾವ ಕಾರ್ಯ,
ಹುಲು ಮನುಜ.

೫) ಇಬ್ಬನಿ ಹನಿ
ಮುತ್ತಿಕ್ಕಲು ಹೂವನ್ನು,
ನಲ್ಲೆ ನಾಚಿಕೆ.

೬)
ಬೆಳಗೋ ಸೂರ್ಯ
ಭರವಸೆಯ ತಂದ
ಹೊಸ ಜೀವನ.

೭)
ಕಾದ ಕೋಗಿಲೆ
ವಸಂತ ಮಾಮರಕೆ,
ಕಂದ ನಗಲು.

೮)
ಪ್ರತಿ ಕ್ಷಣಕೂ:
ಅಮಾವಾಸ್ಯೆ ಹುಣ್ಣಿಮೆ,
ಅವನ ಕೋಪ.

೯)
ದುಂಬಿ ಮುನಿಸು:
ಹೂವು ಮುತ್ತಿ ಖುಷಿಗೆ
ಅವನ ಪಾದ.

೧೦)
ಬಾನ ತುಂಬೆಲ್ಲಾ
ಪ್ರೇಮದ ಸಾಲುಗಳು
ಹಕ್ಕಿಯ ಹಾಡು.



Leave a Reply

Back To Top