ಕಾವ್ಯ ಸಂಗಾತಿ
ತಾಯಿ ನುಡಿಯು
ಡಾ. ನಿರ್ಮಲ ಬಟ್ಟಲ
ಹಚ್ಚ ಹಸಿರು ಎಲೆ
ಬಳ್ಳಿಯ ಮೇಲೆ
ಬಿಚ್ಚಿ ನಗುವ ಬಿಳಿ
ಮಲ್ಲಿಗೆಯ ಕಂಪು
ಪರಿಮಳವು ತಾಯಿನುಡಿಯು…..
ಕೆಸರಿನಾಳಕ್ಕಿಳಿದು
ಬೇರುಗಳ ಪಸರಿಸುತ
ಹೊಂಗಿರಣಕೆ ಮುಖ ಮಾಡಿ
ನಗುವ ತಾವರೆಯ
ಚೆಲುವು ತಾಯಿ ನುಡಿಯು….
ಅವನಿಯ ಬಸಿರಿಗೆ
ಬಿದ್ದ ಬೀಜ
ಮೊದಲ ಮಳೆಗೆ
ಮೊಳಕೆಯೊಡೆವ ಸಂಭ್ರಮ ಸಡಗರದ ತಾಯಿ ನುಡಿಯು…..
ತೊದಲು ನುಡಿಯಾಗಿ
ಒಲವ ಕುಡಿಯಾಗಿ
ಭಾವ ಸಂಭ್ರಮದ ತೇರಾಗಿ
ಉಸಿರು ಉಸಿರಲೂ
ಹಸಿರಾದ ತಾಯಿ ನುಡಿಯು…..
Super lines….