೨೦೨೧ ನೇ ಸಾಲಿನ “ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಶಸ್ತಿ

ಕಾ.ಹು.ಚಾನ್‌ಪಾಷ ಅವರ “ಫಾತಿಮಾ ಶೇಖ್” ಅನುವಾದಿತ ಪುಸ್ತಕಕ್ಕೆ
೨೦೨೧ ನೇ ಸಾಲಿನ “ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಶಸ್ತಿ”

ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ನಿರಂತರವಾಗಿ ಸಾಹಿತ್ಯ ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತ ತನ್ನ ೨೫ನೆಯ ಬೆಳ್ಳಿ ಮಹೋತ್ಸವದ ಸಂದರ್ಭದಲ್ಲಿ ಚಿಂತಾಮಣಿಯ ಕನ್ನಡ ಸಾಹಿತ್ಯ ವೇದಿಕೆಯು ಚುಟುಕು ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಅವಿಭಜಿತ ಕೋಲಾರ ಜಿಲ್ಲೆಯ (ಕೋಲಾರ – ಚಿಕ್ಕಬಳ್ಳಾಪುರ) ಸಾಹಿತಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ೨೦೨೧ ರಲ್ಲಿ ಪ್ರಕಟಿಸಿರುವ ಪುಸ್ತಕಗಳನ್ನು ಪರಿಗಣಿಸಿ ಅವಿಭಜಿತ ಕೋಲಾರ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ನೀಡಬೇಕೆಂದು ತೀರ್ಮಾನಿಸಲಾಗಿ ಕೋಲಾರ ಜಿಲ್ಲೆಯ ಬಂಗಾರಪೇಟೆಯ ಸಾಹಿತಿಗಳಾದ ಕಾ.ಹು.ಚಾನ್‌ಪಾಷ ಅವರು ತೆಲುಗು ಭಾಷೆಯ ಹಿರಿಯ ಸಾಹಿತಿಗಳಾದ ಸೈಯದ್ ನಸೀರ್ ಅಹಮ್ಮದ್ ಅವರ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿರುವ “ಫಾತಿಮಾ ಶೇಖ್ : ಆಧುನಿಕ ಭಾರತದ ಮೊದಲ ಮುಸ್ಲಿಂ ಶಿಕ್ಷಕಿ” ಪುಸ್ತಕಕ್ಕೆ ೨೦೨೧ ನೇ ಸಾಲಿನ “ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಶಸ್ತಿ”ಗಾಗಿ ಆಯ್ಕೆ ಮಾಡಲಾಗಿದೆ. ನೂರ ತೊಂಭತ್ತು ವರ್ಷಗಳ ಹಿಂದಿನ ಸಾಮಾಜಿಕ ಸ್ಥಿತಿಗತಿಯಲ್ಲಿ ಶೂದ್ರ, ಅಸ್ಪೃಶ್ಯ, ನಿಮ್ನವರ್ಗದ ಅದರಲ್ಲೂ ಹೆಣ್ಣುಮಕ್ಕಳಲ್ಲಿ ಅಕ್ಷರಜ್ಯೋತಿ ಬೆಳಗಿಸಲು ಹೊರಟ ಜೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಅವರ ಜೊತೆಗಿದ್ದು ಹೋರಾಟ ಮಾಡಿದ, ಮುಸ್ಲಿಂ ಸಮುದಾಯದ ಮೊದಲ ಮಹಿಳಾ ಶಿಕ್ಷಕಿ ಫಾತಿಮಾ ಶೇಖ್ ಅವರ ಜೀವನ ಕಥನ ಕುರಿತ ಮಹತ್ವದ ಕೃತಿಯಾಗಿದ್ದು ಕನ್ನಡದಲ್ಲಿ ಪ್ರಕಟಣೆಗೊಂಡಿರುವ ಮೊಟ್ಟ ಮೊದಲ ಕೃತಿ ಇದಾಗಿದೆ. ಫೆಬ್ರವರಿ ೨೭ ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ರೂ. ೫೦೦೦/- ಗೌರವ ಧನ, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಯೊಂದಿಗೆ ಗೌರವಿಸಲಾಗುವುದು ಎಂದು ಕನ್ನಡ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಕಾಗತಿ ವಿ.ವೆಂಕಟರತ್ನA ಅವರು ತಿಳಿಸಿದ್ದಾರೆ.


3 thoughts on “೨೦೨೧ ನೇ ಸಾಲಿನ “ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಶಸ್ತಿ

Leave a Reply

Back To Top