ಕಾವ್ಯಸಂಗಾತಿ
ನವಿಲು
ಎಸ್. ವಿ. ಹೆಗಡೆ
ಎಲ್ಲರಂತಲ್ಲ ಓ ನವಿಲೆ ನಿನ್ನ ನಲಿವು
ಮಿಂಚು ಮೋಹಕ ರೂಪ ನಿನ್ನ ನಿಲುವು
ನೀಲ ಬಾನಲಿ ಮೂಡಿದ ಮಳೆಬಿಲ್ಲ ಬಣ್ಣ
ಗಳ ಗರಿ ತುಂಬಿ ನಾಟ್ಯವಾಡುವ ಚೆಲುವು
ರೂಪಲಾವಣ್ಯ ನಡೆ ಚುರುಕು ವೈಯಾರ ಕೊಂಕು ಕುಣಿಸಿ ಮೈಮಾಟ ಕಣ್ಸೆಳವ ಶೃಂಗಾರ
ಮನಸೋತು ಬಂದರೆ ತುಸುನಿಲ್ಲೆಯಾಕೆ
ನಿಂತಲ್ಲೆ ನಿಲಲಾರೆ ಕಂಡೊಡನೆ ಓಡುವೆ ಏಕೆ
ಬಯಸಿ ಸನಿಹಕೆ ಬಂದ ಸಂಗಾತಿಯ ಮಾತು ಕೇಳಬಾರದೆ ಒಮ್ಮೆ ಪ್ರೇಮದ ಪಿಸುಮಾತು