ವ್ಯಾಲಂಟೈನ್ ವಿಶೇಷ
ಪ್ರೇಮಾಂಕುರ
ಮಾಜಾನ್ ಮಸ್ಕಿ
ಜಗವೆಲ್ಲ ಪ್ರೇಮಲೋಕದಲ್ಲಿ ತೇಲಾಡಿದೆ
ವರವೋ ಶಾಪವೋ ನಗು- ಅಳುವಿನಲಿ ನಲಿದಿದೆ
ಯಾರಿಗೂ ಬಿಡದ ಬಾಧೆ ನೊಂದು ಬೆಂದಿದೆ
ಪ್ರೇಮ ಬೆಂಕಿಯಲ್ಲಿ ಅರಳಿ ಹೂವಾಗಿದೆ
ನಿನ್ನೊಲವ ಪೂಜೆಯೋಳು ಬೆರೆತು
ಪ್ರತಿನಿತ್ಯ ಶುಭ ಆಶಯ ಕೋರುತ
ಪರಾಕಾಷ್ಠೆ ಮೀರಿ ಆಸೆ ಚಿಮ್ಮುತ
ಪ್ರೇಮಿಗಳ ಕಾಯುವಿಕೆಗೆ ಹೆಮ್ಮೆ ಪಡುತ
ಮೋಸದ ಸೋಂಕಿಲ್ಲದ ನಿಷ್ಕಾಮ ಆತ್ಮ ಸಂಗಾತನೇ
ನಿನ್ನೊಲವ ಪೂಜೆಯೋಳು ಬೆರೆತೆ
ಹೃದಯ ಚುಂಬಕ ಮಂದಾರ ಅರಳಿದೆ
ತನು ಮನ ಬಿಗಿದಪ್ಪಿದ ಒಲವಿನಲಿ
ಕೊನೆ ಉಸಿರ ಘಳಿಗೆಯಲ್ಲೂ ಬಯಸುತ್ತಿದೆ
ನಿನ್ನೊಲವ ಸ್ಪರ್ಶ ಚೇತರಿಸಿದೆ
ಹೃದಯ ಬಡಿತ ಕುಗ್ಗುತ್ತಿದೆ
ನೀರಾಳತೆಯಲ್ಲಿ ಉಸಿರಾಡಬಾರದೇಕೆ….