ಗಜಲ್

ಗಜಲ್

ಮಲ್ಲಿಕಾರ್ಜುನ ಪಾಟೀಲ

ಕಪ್ಪಲ್ಲಾ ಗೆಳತಿ ನೀ ನಸುಗೆಂಪು
ನಿನ್ನ ಮಾತು ಮನಸ್ಸಿಗೆ ಬಲುತಂಪು

ಹೃದಯಂಗಳಕ್ಕೆ ನಿನ್ನ ಆಗಮನಕ್ಕಾಗಿ
ಕಾಯುತ್ತಿರುವೆ ಗೆಳತಿ
ಕನಸ್ಸಿನಲ್ಲೂ ನಿನ್ನ ಬಾಚಿ ಬಾಚಿ
ತಂಬಿಕೊಂಡಿರುವೆ ಒಡತಿ

ಮಧುರ ನಿನ್ನಧರ ಗೆಳತಿ
ಸುಮಧುರ ಗಾನದ ಒಡತಿ
ಹಚ್ಚು ಬಾ ನಮ್ಮನೆಯ ಪಣತಿ

ಬಿಳಿ ಹಾಲ್ಗೆನ್ನೆಯ ಸುಕುಮಾರಿ
ಜೇನಿನ ಅದರದ ಚಕೋರಿ
ಚೈತ್ರ ಚಂದ್ರಮದ ಪೋರಿ

ಮುನಿದು ದೂರಾದಳು ವಿರಸದಿ
ಓ ಚಂದ್ರಮುಖಿ
ಸಂಜೆ ಸೇರಿದಳು ಸರಸದಿ
ಓ ಪ್ರಾಣಸಖಿ


Leave a Reply

Back To Top