ಕಾವ್ಯ ಸಂಗಾತಿ
“ಕೊಡಲಿ ಇಟ್ಟವರು”
ಸುರೇಶ ಮಲ್ಲಾಡದ
ಭಾವಗಳಿಗೆ ಕೊಡಲಿಯೇಟು ಬಿದ್ದರೇನು.?
ಚಲದ ಬಲವೊಂದಿದ್ದರೆ ಸಾಕೆನಗೆ.!
ಎಲ್ಲರಿಗೂ ನಾ ತಿಳಿದಿಲ್ಲ.!
ನನ್ನವರಿಗೆ ನನ ಗೊಡವೆ ಬೇಕಿಲ್ಲ.!
ನನ್ನ ಬೆಳವಣಿಗೆ ಸಹಿಸಲಾಗುತ್ತಿಲ್ಲ.!
ಓ ಮನುಜ..
ನನ್ನ ನಡ ಮುರಿದು ನೀ
ಜಯಿಸಿದ್ದಾದರೂ ಏನನ್ನ..?
ನಿನಗಾಗದ ವಿಷಗಾಳಿಯ ನಾ ಕುಡಿದು,
ಸಿಹಿ ಉಸಿರ ನಿನಗೀಯ್ಯುವೆ..
ಉರಿ ಬಿಸಿಲ ಸೂರ್ಯಕಿರಣ ತಡೆದು,
ಭೂಮಿಗೆ ನೆರಳ ಹಾಸುವೆ..
ತಂಪು ಇಬ್ಬನಿಯ ಆವಿಯಾಗಿಸಿ
ಮೋಡಗಳು ಮಳೆ ಸುರಿಸಲು ನೆರವಾಗುವೆ..
ನೀ ನನ್ನ ಶಿರಚ್ಛೇದನ ಮಾಡಿದರೂ ಸರಿಯೇ.!
ನನ್ನ ಇಕ್ಕೆಲಗಳಲಿ ಹಸಿರ ಚಿಲುಮೆಗಳ
ಬೆಳೆಸಿ ನಿನಗೆ ಉಸಿರಾಗುವೆ..
ಭುವಿಗೆ ಹಸಿರಾಗುವೆ..
ನೀ ಯಾರಿಗಾದೆಯೋ ಎಲೆ ಮಾನವ.?
ನಾನು ಎನ್ನುವುದ ತೊರೆದು.!
ನಾವು ಎಂಬುದ ಬಿಗಿದು.!
ಮುನ್ನಡೆ. ತೋರು ದೈನ್ಯವ..
ಪರಿಸರ ಪ್ರಜ್ಞೆಯನ್ನು ಜಾಗೃತಗೊಳಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ… ನೈಸ್
ಧನ್ಯವಾದಗಳು ಮೇಡಮ್..