ಇನ್ನೇನು ಬೇಕು ನನಗೆ?

ಕಾವ್ಯ ಸಂಗಾತಿ

ಇನ್ನೇನು ಬೇಕು ನನಗೆ?

ನಿನ್ನ ನೆನಪುಗಳ
ಗಮಲು ನನ್ನ ನಾಸಿಕವ
ಆಘ್ರಾಣಿಸಿ ಸೆಳೆಯುತಿರಲು
ಇನ್ನಾವ ಹೂವಿನ ಪರಿಮಳ
ಬೇಕು ನನಗೆ

ನಿನ್ನ ಮಾತುಗಳು
ಮಧುರವಾಗಿ ಅಪ್ಪಿ
ಮೈಮರೆಸುತಲಿರಲು
ಮತ್ತಿನ್ನಾವ ಸಂಗೀತ,ಮಾತು
ಹಾರೈಕೆ ಬೇಕು ನನಗೆ

ನಿನ್ನ ಒಡನಾಟವೇ
ನನ್ನೊಡನಾಡಿಯಾಗಿ
ಬೆಸೆದಿರಲು ಮತ್ತಿನ್ಯಾವ
ಜೀವ ಬೆಸೆದು ಜೊತೆಯಾಗ
ಬೇಕು ನನಗೆ

ನಿನ್ನೊಲವು
ನನ್ನ ಹೃದಯವನ್ನೇ
ಬೆಳಗುತ್ತಲಿರಲು
ಹುಣ್ಣಿಮೆಯ ಚಂದ್ರ ತಾನೇ
ಬೇಕೆ ನನಗೆ?


ಒಲವು

Leave a Reply

Back To Top