೨೦೨೨ನೇ ಸಾಲಿನ ‘ಅಲ್ಲಮ ಕಾವ್ಯ ಪ್ರಶಸ್ತಿ’ ಯುವಕವಿ ಪ್ರೊ. ಸೂರ್ಯಕೀರ್ತಿಯವರ ‘ಮೀನು ಕುಡಿದ ಕಡಲು’ ಕೃತಿಗೆ
೨೦೨೨ನೇ ಸಾಲಿನ ‘ಅಲ್ಲಮ ಕಾವ್ಯ ಪ್ರಶಸ್ತಿ‘ ಯುವಕವಿ ಪ್ರೊ. ಸೂರ್ಯಕೀರ್ತಿಯವರ ‘ಮೀನು ಕುಡಿದ ಕಡಲು‘ ಕೃತಿಗೆ.
ಪ್ರಶಸ್ತಿಯು ಐದು ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದೆ. ಜೊತೆಗೆ ‘ಮೀನು ಕುಡಿದ ಕಡಲು‘ ಕೃತಿಯನ್ನು ಅಲ್ಲಮ ಪ್ರಕಾಶನದಿಂದ ಪ್ರಕಟಿಸಿ ಪ್ರಶಸ್ತಿ ಸಮಾರಂಭದ ದಿನ ಬಿಡುಗಡೆ ಮಾಡಲಾಗುವುದು. ಪ್ರಶಸ್ತಿ ಪುರಸ್ಕೃತರಾದ ಯುವಕವಿ ಪ್ರೊ. ಸೂರ್ಯಕೀರ್ತಿಯವರಿಗೆ ಅಲ್ಲಮ ಪ್ರಕಾಶನದ ಪರವಾಗಿ ಅಭಿನಂದನೆಗಳು.
ತೀರ್ಪುಗಾರರಾಗಿ ನಾಡಿನ ಹಿರಿಯ ಸಾಹಿತಿಗಳಾದ ಸವಿತಾ ನಾಗಭೂಷಣ ಮತ್ತು ಎಲ್.ಎನ್. ಮುಕುಂದರಾಜ್ ಅವರು ತೀರ್ಪನ್ನು ನೀಡಿದ್ದಾರೆ,
ಅವರಿಗೆ ಅಲ್ಲಮ ಪ್ರಕಾಶನದಿಂದ ತುಂಬು ಹೃದಯದ ಧನ್ಯವಾದಗಳು. ನಾಡಿನ ನಾನಾ ಭಾಗಗಳಿಂದ ಸ್ಪರ್ಧೆಗೆ ಹಸ್ತಪ್ರತಿಗಳನ್ನು ಕಳಿಸಿದ ಎಲ್ಲಾ ಕವಿಗಳಿಗೂ ಅಲ್ಲಮ ಪ್ರಕಾಶನವು ಧನ್ಯವಾದಗಳನ್ನು ತಿಳಿಸುತ್ತದೆ.
ಕೊನೆಯ ಹಂತದಲ್ಲಿದ್ದ ಹಸ್ತಪ್ರತಿಗಳು:
೧. ಮೀನು ಕುಡಿದ ಕಡಲು
೨. ಸಾಫ್ಟ್ ಸಂತೆಯೊಳಗಿನ ಧ್ಯಾನ
೩. ಮೌನಗರ್ಭದೊಳಗಿಂದ
೪. ಎದೆನೆಲದ ಕಾವು
೫. ಸರ್ವಶೂನ್ಯ
.