ಹಂಸಗೀತೆ

ಕಾವ್ಯ ಸಂಗಾತಿ

ಹಂಸಗೀತೆ

ಶಾಲಿನಿ ಕೆಮ್ಮಣ್ಣು

ಶಾಲಿನಿ ಕೆಮ್ಮಣ್ಣು

ಆಹಾ ಏನಿದು ಮಾಯದ ಒರತೆ
ಜೀವನ ಮಹಾ ಸಂತೆ
ತರಹ ತರಹ ವ್ಯಥೆಯ ಕತೆ
ವಿಧ ವಿಧ ನೋವು ಚಿಂತೆ
ದಹ ದಹಿಸಿ ಸುಡುವ ಚಿತೆ
ಕಾಡುವ ನೆನಪುಗಳ ಜೊತೆ
ಅಗಲಿದ ಸಮಯವ ಮರೆತೆ
ದಾರಿಯಲಿ ಬೆಳಕಿನ ಹಣತೆ
ನಸುಕಿನ ನಲ್ಮೆಯ ಗೀತೆ
ಬಣ್ಣದ ಪರದೆಯ ಮಂದತೆ
ಚುಕ್ಕಿಯ ಚಂದದ ಆರತಕ್ಷತೆ
ಚಿಟ್ಟೆಯ ಕುಣಿತದ ಆತುರತೆ
ಗುಡಿಸಲೊಳಗೆ ಸುಂದರ ವನಿತೆ


Leave a Reply

Back To Top