ನಾವೆ ಹೆಣ್ಮನಗಳು

ಕಾವ್ಯ ಸಂಗಾತಿ

ನಾವೆ ಹೆಣ್ಮನಗಳು

ಅಭಿಜ್ಞಾ ಪಿ ಎಮ್ ಗೌಡ

ತಾತ್ಸಾರದ ತೊಟ್ಟಿಲಲೆ
ಹುಟ್ಟಿ ಬೆಳೆದಿಹೆವು
ತತ್ವಾರದ ಕಣಜದೊಳಗೆ
ಈಜಿ ದಡಸೇರುವ
ಛಲವಾದಿಗಳು
ನಾವೆ ಹೆಣ್ಮನಗಳು….

ತತ್ಪರವಿಲ್ಲದ ಬದುಕಿನಲಿ
ಕ್ಲೇಶದಿ ತೇಲುತ
ನಿಷ್ಫಲದ ನಿಸ್ತೇಜದಲಿ
ನೊಂದು ಬೆಂದಿರುವ
ಬೆಂಕಿಯುಂಡೆಗಳು
ನಾವೆ ಹೆಣ್ಮನಗಳು…

ರೂಢಿ ನಿಯಮಗಳ
ಗೋಡೆಗೆ ತೂಗಿ ಹಾಕಿರುವರು
ತಪ್ಪಿ ನಡೆದರೆ ಶಿಕ್ಷೆಯ
ಉಗ್ರರೂಪತೆ ತೋರುವರು
ಆ ಘೋರವನ್ನೆ ಮೆಟ್ಟಿನಿಲ್ಲುವ
ಭೀಭತ್ಸವಾದಿಗಳು
ನಾವೆ ಹೆಣ್ಮನಗಳು…

ಹುಟ್ಟಿದ ತಪ್ಪಿಗೆ
ಸೆರೆಮನೆವಾಸ ಅದುವೆ
ಬಾಲ್ಯವಿವಾಹ…
ಹದಿಹರೆಯದ ಮನಸಲಿ
ಪ್ರೀತಿ ಪ್ರೇಮದ ಆಟದಿ
ಹೆಚ್ಚಿದ ವ್ಯಾಮೋಹ
ಭಾಗಿಯಾಗುವ ನಿಷ್ಕಲ್ಮಷಿಗಳು
ನಾವೆ ಹೆಣ್ಮನಗಳು…ˌ

ಬಾಂಧವ್ಯ ಬಂಧುರದೊಳಗೆ
ಸರ್ವ ಸ್ರ್ತೀ ಪಾತ್ರಧಾರಿ
ತತ್ತ್ವಾನುಭಾವಿಗಳು
ತತ್ತ್ವಾರ್ಥ ಪಥವ ತೋರುವ
ಸತ್ಕೃತಿಗಳು
ನಾವೆ ಹೆಣ್ಮನಗಳು….

ಅದೆಷ್ಟು ದುಃಖ ನೋವುಗಳಿದ್ದರು
ಮುಚ್ಚಿಟ್ಟು ನಗುವ ಬಿತ್ತರಿಸೊ
ಕ್ರಿಯಾಶೀಲರು…
ತಾನಸಿದು ತನ್ನಸಿವ ಬಚ್ಚಿಟ್ಟು
ಮಕ್ಕಳ ಭವಿಷ್ಯಕಾಗಿ ಚಿಂತಿಸೊ
ಸದ್ಭಾವಿ ಸದ್ವಿನಯರು
ನಾವೆ ಹೆಣ್ಮನಗಳು….


4 thoughts on “ನಾವೆ ಹೆಣ್ಮನಗಳು

  1. ಸೊಗಸಾಗಿದೆ ಅಭಿಜ್ಞಾ ಜಿ..

Leave a Reply

Back To Top