ಉದರದೊಳೊಂದು…

ಕಾವ್ಯಸಂಗಾತಿ

ಉದರದೊಳೊಂದು

ಶಿವಲೀಲಾ ಹುಣಸಗಿ

ಮುಟ್ಟು ನಿಂತವಳ ನಾಡಿ ಮಿಡಿತದ ಸದ್ದು
ಮೆಲ್ಲಗೆ ಮಿಡಿಯುತ್ತಿತ್ತು ಗೊತ್ತಾಗದಿರಲೆಂದು
ಹಸಿ-ಹುಸಿಗಳ ನರಳಾಟಿಕೆಗೆಲ್ಲ ಸಿದ್ದವಿ ಮದ್ದು
ಕೊನೆಯ ಭರವಸೆ ಕೈ ಜಾರದಿರಲೆಂದು

ಬಯಕೆಗಳ ಹೂರಣದ ತುಂಬ ತಿನಿಸು
ತಿಂದರೂ,ತಿನ್ನದಿದ್ದರೂ ವಾಂತಿಯ ಕಂತು
ಬೇಳೆಯ ತೀಳಿನೀರು,ಕೆಮ್ಮಣ್ಣಿನ ತುಣುಕು
ಕದ್ದು ಮುಚ್ಚಿ ಗುಟುಕಾಯಿಸಿದ ಪನ್ನೀರು

ಉದರದೊಳೊಂದು ಸಚಿತ್ರ ಅನಾವರಣ
ಎಡಕೊಂದು ಗುದ್ದು,ಎದಗೊಂದು ಬಿಕ್ಕಳಿಕೆ
ಅಮ್ಮಾ ಎಂಬ ಕರುಳ ಬಳ್ಳಿಯ ಜಗ್ಗಾಟ
ಕುಡಿದಷ್ಟು ಖಾಲಿ ಬೇಕೆಂಬ ಹಂಬಲಿಕೆ

ನನ್ನಾತ್ಮ ಅರಿತಿತ್ತು ನನ್ನ ಪ್ರತಿಬಿಂಬವೆಂದು
ಪಡಸಾಲಿಯಲಿ ಕುಂತವರ ಲೆಕ್ಕಾಚಾರಕೆ
ಹುಟ್ಟುವ ಹಸುಗೂಸು ಯಾವುದಾದರೇನು?
ಬಂಜೆಯಂಬ ಪಟ್ಟ ಕಿತ್ತೊಗೆದರೆ ಸಾಕೆಂಬೆ

ಹುಟ್ಟು ಅದೇ ದಿಟವಾದರೆ ಗತಿಯೆನೆಂಬೆ?
ಮೆಲ್ಲಗೆ ಹೊಟ್ಟೆಯಿಳಿಸಿವುದೊಂದೆ ದಾರಿ!
ಮುಟ್ಟು ಮರೀಚಿಕೆಯಾಯಿತೆಂಬ ಚಿಂತೆ
ಮುಖ,ಮೂಗು,ಕೈ,ಕಾಲು,ಮೂಡಿದಂತೆಲ್ಲ

ಪರಿಶೋಧನಾ ತಂತ್ರಕೆ ನಲುಗುವ ಚಿಂತೆ
ಉದರವೊಂದು ಕಾರ್ಖಾನೆಯ ಚಿಮಣಿಯಂತೆ
ನಿಗಿನಿಗಿ ಜ್ವಲಿಸಿದಂತೆಲ್ಲ ಆಗಸ ಬೆಚ್ಚಿಬಿದ್ದು
ಹುಟ್ಟಿದ್ದು ಸಾರ್ಥಕವಾಗಲು ಬಿಡಲಿಲ್ಲವೆಂದು

ಆದರೂ ಫೀನಿಕ್ಸ್ ಹಕ್ಕಿಯಂತೆ ಪುನಃ ಚಿಗುರು
ಪ್ರಕೃತಿಯ ಸಮತೋಲನಕೆ ಈ ಉಸಿರು
ನೀ ಬೇಡವೆಂದರೂ ಅನಿವಾರ್ಯ ನಾನು
ನಾನಿಲ್ಲದೇ ನಿನ್ನ ಬದುಕು ಶೂನ್ಯವೆಂದು

ಹೆಣ್ಣೆಂಬ ಅಮೃತವು ಜೀವ ಜಗತ್ತಿಗೆ ಕಾಣಿಕೆ
ಅದ ಧಿಕ್ಕರಿಸಿ ಬೆಳೆಯು ಹುನ್ನಾರ ಸಫಲವೇ?
ಗಂಡು-ಹೆಣ್ಣು ಪ್ರಕೃತಿಯ ಕೊಡುಗೆ
ಗೌರವದಾಗರವ ಅಪ್ಪಿಬೆಳೆದಷ್ಟು ಪುಣ್ಯವೇ…


7 thoughts on “ಉದರದೊಳೊಂದು…

  1. Jeevanda sukha dukkagalli bhagiyad jeevavidu hennu namma user-generated karanavadru novu tappilla chennagi mudibanddide kavite saluglu…..‍‍

    1. ಹೆಣ್ಣಿನ ಜೀವನದ ಪ್ರತಿಯೊಂದು ಹಂತಗಳನ್ನು ಅದ್ಬುತವಾಗಿ ಕವಿತೆಯಲ್ಲಿ ವರ್ಣಿಸಿದ್ದಿರಿ ಮೇಡಂ.

  2. Aahaaaa sundra ateee sundra …. ಅಧ್ಭುತ ರೀ ಮೇಡಂ ರೀ ಶರಣು ಶರಣಾರ್ಥಿ ಗಳು

  3. ಉತ್ತಮ ಕವಿತೆ ಮೇಡಂ ಹೆಣ್ಣಿನ ಅಂತಾರಾಳವ ತೆರೆದಿದ್ದೀರಿ

  4. ನೈಜವಾಗಿರುವ ಭಾವ ವ್ಯಕ್ತವಾದ ಅರ್ಥಗರ್ಭಿತ ಕವಿತೆ..

  5. ಮನ ಕಲಕುವ ಕವಿತೆ ಚೆನ್ನಾಗಿ ಮೂಡಿಬಂದಿದೆ

Leave a Reply

Back To Top