ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಮಾಜಾನ್ ಮಸ್ಕಿ

Mother and Baby Girl Painting by Vickie Wade

ನನ್ನೊಡಲ ಚಿಗುರು ಲತೆ ನನ್ನ ಮಗಳು
ಎದೆ ಗೂಡಲ್ಲಿ ಬಚ್ಚಿಟ್ಟ ಮಮತೆ ನನ್ನ ಮಗಳು

ಸಾಧನೆಯ ಉತ್ತುಂಗ ಶಿಖರ ಇವಳದು
ಹೆತ್ತವರ ಗೌರವ ಘನತೆ ನನ್ನ ಮಗಳು

ಪ್ರೀತಿ ಸ್ನೇಹ ತಾಳ್ಮೆಯ ಪ್ರತಿರೂಪದ ಕಣ್ಮಣಿ
ಸಂಬಂಧಗಳು ಬೆಸೆಯುವ ವಾತ್ಸಲ್ಯತೆ ನನ್ನ ಮಗಳು

ಮನೆ ಮನಗಳ ಬೆಳದಿಂಗಳು ಚಂದ್ರಮುಖಿ
ರಮಿಸು ಮುನಿಸಿನ ತುಂಟತೆ ನನ್ನ ಮಗಳು

ಅಪೂರ್ವ ಸೌಂದರ್ಯದ ಬಂಗಾರದ ಖನಿ
ಮನಃಸ್ಫೂರ್ತಿ ನೀಡುವ ಚಾರುಲತೆ ನನ್ನ ಮಗಳು


About The Author

Leave a Reply

You cannot copy content of this page

Scroll to Top