ಕಾವ್ಯ ಸಂಗಾತಿ
ಪ್ರೇಮ ಪಲ್ಲವಿ
ದೀಪಿಕಾ ಚಾಟೆ
ಎದೆಯ ನೂರು ಮಾತು
ಕಣ್ಣುಗಳಲೇ ಬಂಧಿಸಿತು
ಭಾವಲೋಕಕೆ ಮನವು
ಸಾಗಿ ದೂರ ತೀರ ತಲುಪಿತು
ಮನವು ಬೆರೆತಾಗ
ಅನುಬಂಧ ಮೊಳೆತು
ಕನಸು ನನಸಾದಾಗ
ಸಪ್ತಪದಿ ಬೆಸೆಯಿತು
ಪ್ರೇಮ ಪಲ್ಲವಿಗೆ ಹೃದಯ
ಮೀಟುತ ಸನಿಹ ಕರೆದಿದೆ
ಕಣ್ಗಳಲಿ ನಿನ್ನ ದಾರಿಯು
ದೃಷ್ಟಿಸಿ ಸೋತುಹೋಗಿದೆ
ರಾಗರತಿಯಲಿ ಭಾವರತಿಯು
ಕೂಡಿ ಜೊತೆಯಲಿ ನಲಿದಿದೆ
ಸಪ್ತ ಸ್ವರಗಳ ಝೇಂಕಾರ ನಾದವು
ಪ್ರೀತಿಗೆ ಭಾವ ಧನಿಯಾಗಿದೆ