ಕಾವ್ಯ ಸಂಗಾತಿ
ಈ ಪದ್ಯದ ಸಾಲುಗಳು
ಶಾಂತಲಾ ಮಧು…
ಈ ಪದ್ಯದ ಸಾಲುಗಳು
ನನಗೆ ತಿಳಿದಿಲ್ಲ
ಈ ಪದ್ಯದ ಸಾಲುಗಳು
ಹೇಗೆ ಶುರುವಾಯ್ತೆಂದು
ಕಲ್ಪಿಸಿ ಕೊಳ್ಳಬಲ್ಲೆ
ಬಲ್ಲವರ ಬಾಯ್ ಮಾತಿಂದ
ಅಲ್ಲಿಷ್ಟು ಇಲ್ಲಿಷ್ಟು
ಈ ಪದ್ಯದ ಸಾಲುಗಳು
ಮಳೆ ಬಿಸಿಲನು
ಹೊದ್ದು ಚಳಿಯಲಿ
ಮೈ ದಡವಿ
ಅಕ್ಷರಗಳು ಪದಗಳು
ಸವೆದು ಸುಕ್ಕಾಗಿದೆ
ಅಲ್ಲಲಿ
ಓದಲಾರೆ ,ಓದಿ ಅರ್ಥವಾದುದ
ಹೇಳಿ ಸಂಭ್ರಮಿಸಲಾರೆ
ಈ ಪದ್ಯದ ಸಾಲುಗಳು
ಬೇರಷ್ಟುನೆಲಕಚ್ಚಿ
ಸಸಿಯ ನಿಲ್ಲಿಸುವಂತೆ
ಹಿಂದಿನ ಸಾಲುಗಳೆೇ
ಅಷ್ಟಿಸ್ಟು ಪುಷ್ಟಿ
ಏನು ಹೇಳ ಹೊರಟಿದೆ
ಮುಂದಿನಸಾಲು?
ಗೊತ್ತಿಲ್ಲ………
ಕೆಳದಿರುಎನ್ನ
ಇನಿಯ ಇಬ್ಬನಿಯಲ್ಲಿ
ಬೆಕ್ಕಿನೆಜ್ಜೆಯನಿಟ್ಟು
ಕಣ್ ಕಟ್ಟಿ ತೋರಿದ
ಸಂಭ್ರಮದ ಸಾಲುಗಳಷ್ಟು
ಕಾಡು ಹಾದಿಯ
ಕಾರ್ಗತ್ತಲೆಯಲಿ
ಕಣ್ ಬಿಟ್ಟು
ಚಡಪಡಿಸಿ
ಮಿಂಚು ಹುಳುವಿನ
ಬೆಳಕೇ ಬೆಳಕಾಗಿ
ಸಾಗಿದ ಸಾಲುಗಳು
ಇನಷ್ಟು,
ಅರಿವಿಲ್ಲದ ಅನಂತಸಾಲುಗಳು
ಮರೆತು ಬಾಚಿತಬ್ಬಿ
ಪೋಣಿಸಲಾರದ
ಮುತ್ತಿನಸಾಲುಗಳಷ್ಟು
ನೆಲೆಗೆ ನಿಲುಕದೆ
ಕೈಜಾರಿ ಕೈ ಬೀಸಿದ
ಮಾಸಿದಸಾಲುಗಳು
ಮತ್ತಷ್ಟು
ಈ ಸಾಲಿನಲಿ ನಡೆಯುತಿದೆ
ಪದ್ಯ
ಸಹಿಸಲು ಕಲಿಸಿದೆ
ಸುಖಿಸಲು ಹೇಳಿದೆ
ಮುಂದಿನ ಸಾಲದೋ
ಸೋಜಿಗವಾಗಿದೆ
ಬೇರು ದೂರ
ಕಾಂಡಕೂ ತಿಳಿದಿಲ್ಲ
ಹೂವು ಕಾಯಿ ಹಣ್ಣು
ಬೇರೆಡೆಗೆ ತಿರುಗಿ
ಹುಡುಕಾಟ
ಪ್ರತಿಸಾಲಲು ಪೇಚಾಟ
ಇತ್ತು
ಇದೆ ಇರುತ್ತದೆ
ಈ ಕ್ಷಣದ ಸಾಲು
ಈ ಪದ್ಯದಸಾಲು
ಕ್ಷಣ
ಪದ್ಯ
ಸಾಲು…………