ಕಾವ್ಯ ಸಂಗಾತಿ
ನೆನಪಾಗುತ್ತಾರೆ
ಹೋದವರು ಎಲ್ಲಿಯೂ
ಹೋಗುವುದಿಲ್ಲ
ನೆನಪಾಗುತ್ತಾರೆ ಮಸ್ತಕದಲ್ಲಿ
ಅಕ್ಷರವಾಗುತ್ತಾರೆ ಪುಸ್ತಕದಲ್ಲಿ
ನೆನಪಿನಂಗಳದಲ್ಲಿ
ಆಟವಾಡುತ್ತಾರೆ
ಚಂದಿರನೆದೆಯಲ್ಲಿ
ಚಿತ್ರವಾಗುತ್ತಾರೆ
ಕತ್ತಲೊಳಗೆ ಕನಸಾಗುತ್ತಾರೆ
ಮನಸೊಳಗೆ ಮುತ್ತಾಗುತ್ತಾರೆ
ನೋವಿನಲ್ಲಿ ಕಣ್ಣೀರಾಗುತ್ತಾರೆ
ಸಂತಸಕ್ಕೂ ಸೂರಾಗುತ್ತಾರೆ
ಹೋದವರು ಎಲ್ಲಿಯೂ
ಹೋಗುವುದಿಲ್ಲ
ನೆನಪಾಗುತ್ತಾರೆ ಮಸ್ತಕದಲ್ಲಿ
ಅಕ್ಷರವಾಗುತ್ತಾರೆ ಪುಸ್ತಕದಲ್ಲಿ
ಒಲವು