ಕಾಯುತಿರುವೆ

ಕಾವ್ಯ ಸಂಗಾತಿ

ಕಾಯುತಿರುವೆ

ಶಾಲಿನಿ ಕೆಮ್ಮಣ್ಣು

red rose flower photo in dark surface

ಕಾಯುತಿರುವೆ
ನಿನ್ನೊಲವಿನ ಒಂದು ಕರೆಗೆ
ಆತ್ಮೀಯ ಸಂಭಾಷಣೆಗೆ
ಪ್ರೀತಿಯ ಮಾತಿಗೆ
ನಲ್ಮೆಯ ನುಡಿಗಳಿಗೆ

ಅಕ್ಕರೆಯ ಅರಮನೆಗೆ
ಚೇಷ್ಟೆಯ ಕೌತುಕಕ್ಕೆ
ಸಂತ್ವಾನದ ಸೂರಿಗೆ
ಹಿತವಾದ ಹಾರೈಕೆಗೆ

ಹಾಸ್ಯದ ಅಂಗಳಕ್ಕೆ
ನಗುವಿನ ತೋಟಕ್ಕೆ
ಗದ್ದಲದ ಸಂತೆಗೆ
ಗಮ್ಮತ್ತಿನ ಗಲಾಟೆಗೆ

ಏನಾಯ್ತು ಇತ್ತೀಚಿನ ದಿನ
ನೆನಪಿಲ್ಲ ನಿನಗೆ ನಾ
ಮುರಿದು ನಿನ್ನ ಮೌನ
ಒಮ್ಮೆ ಮಾತಾಡು ನನ್ನ ಜಾಣ


One thought on “ಕಾಯುತಿರುವೆ

Leave a Reply

Back To Top