ಬದುಕೊಂದು ಖಾಲಿ ಹಾಳೆ

ಕಾವ್ಯ ಸಂಗಾತಿ

ಬದುಕೊಂದು ಖಾಲಿ ಹಾಳೆ

ಒಲವು

ಬದುಕೊಂದು
ಬರಿದೆ ಖಾಲಿ ಹಾಳೆ
ಬರೆಯದೇ ಬಿಟ್ಟ
ಖಾಲಿ ಹಾಳೆ

ಇಷ್ಟದ ಹೂ ಒಂದನು
ಚಿತ್ರಸಬಹುದು
ಮೆಚ್ಚುಗೆಯ ಬಣ್ಣವನ್ನೇ
ಅದರಕ್ಕೆ ತುಂಬಬಹುದು

ಒಲವಿನ ಅಕ್ಷರಗಳನ್ನೇ
ಪೋಣಿಸಬಹುದು
ಹಿಡಿಸಿದ ಕವಿತೆಗಳಿಗಷ್ಟೇ
ಜೀವ ನೀಡಬಹುದು

ನಿಲುವಿನ ದಾರಿಗಳಲ್ಲೇ
ನಡೆಯಬಹುದು
ಬೇಕೆಂದ ಗುರಿಗಳಿಗಷ್ಟೇ
ಗರಿ ಮೂಡಿಸಬಹುದು

ಆದರಿಲ್ಲಿ,
ಮಾಯಾವಿ ಚಿತ್ರವೊಂದು
ಮೈದಳೆಯಬಹುದು
ಬೇಡದ ಕವಿತೆಯೊಂದು
ಕಾಡಬಹುದು
ಕಾಣದ ದಾರಿಯೊಂದು
ಕೈ ಹಿಡಿಯಬಹುದು

ಬದುಕೊಂದು ಬರಿದೆ
ಖಾಲಿ ಹಾಳೆ
ಬರೆಯದೇ ಬಿಟ್ಟ
ಖಾಲಿ ಹಾಳೆ….



Leave a Reply

Back To Top