ಭೂಸಿರಿಯು
ಮುಗಿಲ ಮಾಳಿಗೆಯಲಿ
ಮೋಡವೊಂದು ಗೂಡು ಕಟ್ಟಿದೆ
ಭೂವನದಲಿ ಶೃಂಗಾರದಿಂದಲಿ
ನವಿಲ ನಾಟ್ಯವು ಮುದವ ನೀಡಿದೆ
ತುಂತುರು ಹನಿಯಲಿ
ಘಮ್ಮನೆಂದಿದೆ ಭೂವಾಸನೆ
ಗಂಡು ನವಿಲು ರೆಕ್ಕೆಯ ಬಿಚ್ಚಿ
ತಾನು ಕುಣಿದಿದೆ ಕಾಮನೆ
ಹಸಿರ ಮೈಸಿರಿಯು ಎಲ್ಲೆಡೆ
ರಮ್ಯಕಾಲದ ವೈಭವ
ಬಾನು ಭುವಿಯಲಿ
ಎಂಥದಿದೋ ಆಕರ್ಷಣಾ
ಚೈತ್ರ ಚಿಗುರಲಿ ಕೋಗಿಲೆಗಾನ
ಮಾವು ತೆಂಗಿನ ರಸದೌತಣ
ಪ್ರಕೃತಿ ಮಾತೆಯ ಮಡಿಲು ತುಂಬಿದೆ
ವಿವಿಧ ಹೂಗಳು ಅರಳಿ ನಿಂತಿವೆ
ಭೂಸಿರಿಯ ಒಡಲು ಮಾಗಿದೆ
ಮೋಡದಂಚಿನ ಹನಿಗಳಿಂದ
ಕಾವ್ಯರಸವು ಹರಿದಿದೆ
ಹಸಿರ ವನದ ಸೆರಗಿನಿಂದ
ದೀಪಿಕಾ ಚಾಟೆ
Thanq Sir