ಅಂಕಣ ಬರಹ

ಸಾಧಕಿಯರ ಯಶೋಗಾಥೆ

ಸಮಾಜ ಸೇವಕಿ

ಸರೋಜಿನಿ ವರದಪ್ಪನ್ (1921-2013)

ಸರೋಜಿನಿ ವರದಪ್ಪನ್ ಅವರು ತಮಿಳುನಾಡು ರಾಜ್ಯದ ಸಮಾಜ ಸೇವಕಿ ಹಾಗೂ ಮದ್ರಾಸ್‍ನ ಮಾಜಿ ಮುಖ್ಯಮಂತ್ರಿ ಎಂ. ಭಕ್ತವತ್ಸಲಂರವರ ಪುತ್ರಿ. ಸರೋಜಿನಿಯವರು ಮದ್ರಾಸ್‍ನಲ್ಲಿ 21 ಸೆಪ್ಟಂಬರ್ 1921 ರಂದು ಜನಿಸಿದರು. ತಾಯಿ ಜ್ಞಾನ ಸುಂದರಾಂಬಲ್. ಸರೋಜಿನಿ ಜನಿಸಿದಾಗ ಭಕ್ತವತ್ಸಲಂ ಮದ್ರಾಸ್ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದರು. ಸರೋಜಿನಿಯವರು ಲೇಡಿ ಶಿವಾಸ್ವಾಮಿ ಬಾಲಕಿಯರ ಶಾಲೆಯಲ್ಲಿ 9ನೇ ತರಗತಿವರೆಗೆ ಶಿಕ್ಷಣ ಪಡೆದರು. ಕುಟುಂಬ ವರ್ಗದವರು ಮುಂದೆ ಶಾಲೆಗೆ ಕಳುಹಿಸಲು ನಿರಾಕರಿಸಿದ್ದರಿಂದ ಮನೆಯಲ್ಲಿ ಓದು ಬರಹವನ್ನು ಮುಂದುವರೆಸಿದರು. ಮನೆಯಿಂದಲೇ ಹಿಂದಿ ಅಧ್ಯಯನ ಪೂರ್ಣಗೊಳಿಸಿದರು. ಮನೆಯಿಂದ ಹೊರಗೆ ಹೋಗಿ ಪರೀಕ್ಷೆ ಬರೆಯಲು ನಿರಾಕರಿಸಿದ್ದರಿಂದ, ಮನೆಯಿಂದಲೇ ಪರೀಕ್ಷೆಯನ್ನು ಸರೋಜಿನಿಯವರು ಬರೆದರು. ಕುಟುಂಬ ವರ್ಗದವರ ವಿರೋಧದಿಂದ ಶಿಕ್ಷಣ ಮುಂದುವರೆಸಲು ಆಗದೇ ಮನೆಯಲ್ಲಿಯೇ ಉಳಿದುಕೊಂಡರು. ನಂತರದ ದಿನಗಳಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಸೇವಾ ದಳದೊಂದಿಗೆ ಸಂಬಂಧವನ್ನು ಹೊಂದಿದರು.
ಸರೊಜಿನಿಯವರು ಚಿಕ್ಕವಯಸ್ಸಿನಲ್ಲಿಯೇ ತನ್ನ ಸಹೋದರ ಸಂಬಂಧಿ ವರದಪ್ಪರವರನ್ನು ವಿವಾಹವಾದರು. ಸರೋಜಿನಿಯವರು 21 ವಯಸ್ಸಿನಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗಿಯಾದರು. ಇವರು ಭಾಗಿಯಾಗಿದಕ್ಕೆ ಇವರ ತಂದೆಯವರನ್ನು ಬಂಧಿಸಿ, ಎರಡು ವರ್ಷಗಳ ನಂತರ ಬಿಡುಗಡೆಗೊಳಿಸಿದರು.

ಸರೋಜಿನಿಯವರು ತಮ್ಮ ಮದುವೆಯ ನಂತರ ಶಿಕ್ಷಣವನ್ನು ಮುಂದುವರೆಸಿದರು. ಮೈಸೂರು ವಿಶ್ವವಿದ್ಯಾಲಯದ ದೂರ ಶಿಕ್ಷಣದ ಮೂಲಕ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಮದ್ರಾಸ್ ವಿಶ್ವವಿದ್ಯಾಲಯದಿಂದ ‘ವೈಷ್ಣವಿಜಂ’ ಎಂಬ ವಿಷಯದಲ್ಲಿ ಎಂ.ಎ. ಪದವಿಯನ್ನು ಪಡೆದರು. ಹಾಗೇಯೆ 80ನೇ ವಯಸ್ಸಿನಲ್ಲಿ “ಸೋಶಿಯಲ್ ಸರ್ವಿಸ್ ಆಂಡ್ ಸ್ವಾಮಿ ನಾರಾಯಣ ಮೂಮೆಂಟ್” ಎಂಬ ವಿಷಯದಲ್ಲಿ ಪಿಎಚ್‍ಡಿ ಪದವಿಯನ್ನು ಪಡೆದವರಾಗಿದ್ದಾರೆ.

ಸರೋಜಿನಿಯವರು ಸಂಗೀತವನ್ನು ಕೂಡ ಕಲಿತಿದ್ದರು. ಇವರು ಕಾಂಗ್ರೆಸ್ ಸಭೆಗಳಲ್ಲಿ ಪ್ರಾರ್ಥನಾ ಗೀತೆಗಳನ್ನು ಹಾಡುತ್ತಿದ್ದರು. ಮೈಲಾಪುರಿ ಗೌರಿ ಅಮ್ಮನವರಿಂದ ಕ್ಷೇತ್ರಗಾನ ಪದಗಳು ಮತ್ತು ತಮಿಳು ಪದಗಳನ್ನು ಕಲಿತರು. ಹಾಗೆಯೇ ಹಿಂದಿ ಭಜನೆಗಳನ್ನು ಕೂಡ ಕಲಿತಿದ್ದರು.

  ಸರೋಜಿನಿಯವರು ಡಬ್ಲ್ಯೂ.ಐ.ಎನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಇವರು ಅಧ್ಯಕ್ಷರಾಗಿದ್ದ ಸಮಯದಲ್ಲಿ ಕೇವಲ ನಾಲ್ಕು ಶಾಖೆಗಳಿದ್ದವು. ಇವರು ನಂತರದ ದಿನಗಳಲ್ಲಿ 76 ಶಾಖೆಗಳನ್ನು ತೆರೆದರು. ಹಾಗೆಯೇ ಮೈಲಾಪುರ ಅಕಾಡೆಮಿಯ ಅಧ್ಯಕ್ಷರಾಗಿ, ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಸದಸ್ಯರೂ ಆಗಿದ್ದರು. ಮೇರಿ ಚೆನ್ನರೆಡ್ಡಿಯವರು ತಮಿಳುನಾಡು ರಾಜ್ಯದ ರಾಜ್ಯಪಾಲರಾಗಿದ್ದಾಗ ಸರೋಜಿನಿಯವರನ್ನು “ಪ್ರೆಸಿಡೆಂಟ್ ಆಫ್ ದ ಸೋಸೈಟಿ” ಎಂದು ನೇಮಕಮಾಡಿದರು. ಇವರು 2013ರಲ್ಲಿ ನಿಧನರಾದರು.

ಸರೋಜಿನಿಯವರಿಗೆ ದೊರೆತ ಪ್ರಶಸ್ತಿಗಳೆಂದರೆ:

  1. 1973 ರಲ್ಲಿ ಭಾತದದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ನೀಡಲಾಯಿತು.
  2. 2005 ರಲ್ಲಿ ಜಾನಕಿದೇವಿ ಬಜಾಜ್ ಪ್ರಶಸ್ತಿ. ಅದೇ ವರ್ಷ ಜಮೂನಾಲಾಲಾ ಬಜಾಜ್ ಪ್ರಶಸ್ತಿಯನ್ನು ಪಡೆದರು.
  3. 2009 ರಲ್ಲಿ ಪದ್ಮಭೂಷಣ ಪ್ರಶಸ್ತಿನೀಡಿ ಗೌರವಿಸಲಾಯಿತು.
  4. 1983 ರಲ್ಲಿ ‘ಶರಿಫ್ ಆಫ್ ಮದ್ರಾಸ್’ ಆಗಿ ಆಯ್ಕೆಯಾಗಿದ್ದರು.
    ———————

ಡಾ.ಸುರೇಖಾ ರಾಠೋಡ್

Leave a Reply

Back To Top