ಕಾವ್ಯ ಸಂಗಾತಿ
ಪ್ರೊ ರಾಜನಂದಾ ಘಾರ್ಗಿ
ದಾರಿ ಓಡುತಿದೆ
ಪಯಣ ಸಾಗುತಿದೆ
ತಲೆ ಎತ್ತ ಬಾರದೇ
ಮುಖ ನೊಡಬಾರದೇ
ಗುರಿ ಇಲ್ಲದ ದಾರಿ
ಓಡುತಿದೆ ದೂರ
ಕಾಡುತಿದೆ ಮರಿಚಿಕೆ
ಚಿನ್ನದ ಜಂಕೆಯಾಗಿ
ಸ್ವಲ್ಪ ನಿಲ್ಲ ಬಾರದೇ
ಜೊತೆ ಗೂಡಿ ನಡೆವ
ಕಾಲುಗಳು ಸೋತಿವೆ
ನಿಂತು ಕಾಯಬಾರದೇ
ಭಾವಗಳು ಕರಗುತಿವೆ
ಸಂಬಂದಗಳು ಸೊಲುತಿವೆ
ಕೈ ಚಾಚಿ ಆಸರೆಗಾಗಿ
ಹೃದಯಗಳು ಕಾಯುತಿವೆ
ಕೈನೀಡಿ ಎತ್ತ ಬಾರದೇ
ಆಸರೆಯ ನೀಡಬಾರದೇ
ದಾರಿ ದೀಪವಾಗಿ ಬೇಳಗಿ
ಸಹಚರನಾಗ ಬಾರದೇ