ಬಳಗ

ಕಾವ್ಯ ಸಂಗಾತಿ

ಬಳಗ

ಚನ್ನಕೇಶವ ಜಿ ಲಾಳನಕಟ್ಟೆ

ಬಳಗವಿರಬೇಕು ಕೊಳಗದಷ್ಟು
ಹಗೆ ಇಲ್ಲದೆ ನಗೆ ಬೀರುತಿರಬೇಕು
ಕಷ್ಟದಲಿ ಇಷ್ಟದಿಂದಪ್ಪುವ
ಮುಷ್ಟಿಹೃದಯ ತುಷ್ಟವಾಗಬೇಕು

ಅಕ್ಕರೆಯಲಿ ಸಕ್ಕರೆಯಂತಿಹ
ಸೊಕ್ಕಿಲದೆ ಹಕ್ಕಿಯಂತಿರಬೇಕು
ದುಷ್ಟರಾಗದೆ ಕಷ್ಟದಲಾಗುವ
ಇಷ್ಟಪಡುವ ಪುಷ್ಟರಾಗಬೇಕು

ಸಂಬಂಧದಲ್ಲಿ ಬಂದಿಯಾಗಿ
ಗಂಧದಂತೆ ಸುಗಂಧವಿರಬೇಕು
ಅಳಿವು ಬಂದಾಗ ಉಳಿಸಲೆನಿಸುವ
ಇಳೆಗೆ ಬೀಳುವ ಮಳೆಯಾಗಬೇಕು

ಅಗುಳ ಕಂಡರೆ ಬಳಿಗೆ ಕರೆಯುವ
ಕಾಗೆಗಳ ಬಳಗದಂತಿರಬೇಕು
ಹೊಗಳಿ ಅಟ್ಟಕೇರಿಸದೆ ತೆಗಳಿ
ಮನದ ಹುಳುಕ ತೆಗೆವಂತಿರಬೇಕು

ಕತ್ತಲಲ್ಲಿ ಬೆಳಕಾಗಿದ್ದು
ಹಿತ್ತಲ ಮದ್ದಿನಂತೆ ಜೊತೆಗಿರಬೇಕು
ಭ್ರಷ್ಟರು ನಿಕೃಷ್ಟರಾಗದೆ
ಉತ್ಕೃಷ್ಟ ಬಂಧುವಾಗಬೇಕು.


3 thoughts on “ಬಳಗ

  1. ಉತ್ತಮವಾದ ಸಂದೇಶ ಸಾರುವ
    ಅರ್ಥಪೂರ್ಣ ಆಶಯ ಹೊತ್ತ ಕವನ
    ಅಭಿನಂದನೆಗಳು ಸರ್

    1. ಹೃದಯಸ್ಪರ್ಶಿ ಮೆಚ್ಚುಗೆ ಆತ್ಮೀಯ ಧನ್ಯವಾದಗಳು ಮೇಡಂ

  2. ಕವಿತೆಯನ್ನು ಆಯ್ಕೆ ಮಾಡಿಕೊಂಡು ಪ್ರಕಟಿಸಿದ ನಮ್ಮ ಸಂಗಾತಿ ಬಳಗಕ್ಕೆ ಹೃದಯಪೂರ್ವಕ ಧನ್ಯವಾದಗಳು.

Leave a Reply

Back To Top