ಮೊದಲ ನೋಟ

ಕಾವ್ಯ ಸಂಗಾತಿ

ಮೊದಲ ನೋಟ

ಮೊದಲ ನೋಟದಲ್ಲೇ
ಮಿಂದೆದ್ದವು ಕಂಗಳು
ಒಲವ ಸಾಗರದ
ಮುತ್ತ ಕೈಗಿತ್ತು

ಕಣ್ಣ ದಂಡೆಯಲಿ ನಿಂತು
ಒಲವಿನಲೆಯ ಹೊತ್ತು ಬರುವ
ಹೃದಯ ಕಾಣಲು
ಒಲವು ಕಾತರಿಸುತ್ತಿತ್ತು

ಅಲೆಯಲ್ಲ ಅದು
ಒಲವನಾದ
ನಾದದೊಡಲಲಿ
ಮೊರೆವ ಸಂಗೀತ

ಮೀಯುವಾಗಿನ ಮೋಜು
ಮುಳುಗುವಾಗಿನ ಸೋಜಿಗ
ಸೆಳೆವ ಸುಳಿಯಲ್ಲ ಅದು
ಒಲವ ಸೆಲೆಯು

ಎತ್ತನೋಡಿದರತ್ತ
ಎಲ್ಲೆಯಿರದ ಒಲುಮೆ
ಕಣ್ಣುಹಾಯಿಸಿದಷ್ಟೂ
ಒಲವ ಸೀಮೆ

ಒಲವಿನಲೆ ರಭಸಕ್ಕೆ
ಪಿಸುಗುಡುವ ಸ್ಪರ್ಶಕ್ಕೆ
ಒಲವಾಗಿ ಮೀಯದಲೆ
ಒಲವಾಗಿ ಚುಂಬಿಸಲೆ

——–

ಒಲವು

4 thoughts on “ಮೊದಲ ನೋಟ

  1. ವಾಹ್ ಚಂದದ ಭಾವಾಭಿವ್ಯಕ್ತಿ ಮೇಡಮ್
    ಸುಂದರ ಕವಿತೆ

Leave a Reply

Back To Top